ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ರಿಂದ 10ನೇ ತರಗತಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ಶೇಕಡಾ 30ರಷ್ಟು ಕಡಿತ

|
Google Oneindia Kannada News

ದೆಹಲಿ, ಜುಲೈ 8: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಿಬಿಎಸ್ಇ (ಕೇಂದ್ರಿಯ ಫ್ರೌಢ ಶಿಕ್ಷಣ ಮಂಡಳಿ) 9 ರಿಂದ 12ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿದೆ. ಈ ನಿಯಮ 2020-21 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅನ್ವಯವಾಗಲಿದೆ ಎಂದು ಸಿಬಿಎಸ್ಇ ಆಡಳಿತ ಮಂಡಳಿ ತಿಳಿಸಿದೆ.

'ದೇಶ ಹಾಗೂ ಜಗತ್ತಿನಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿ, ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ' ಕೇಂದ್ರ ಮಾನವ ಸಂಪನ್ಮೂಲ ಸಚಿವ ಎಂದು ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

Breaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದುBreaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದು

ಈ ಕುರಿತು ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ. ''ಸಿಬಿಎಸ್ಇ ಪಠ್ಯಕ್ರಮ ಕಡಿತಗೊಳಿಸುವ ಬಗ್ಗೆ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. 1500ಕ್ಕೂ ಹೆಚ್ಚು ಸಲಹೆಗಳು ಸ್ವೀಕರಿಸಿದ್ದೇವೆ. ಎಲ್ಲರಿಗೂ ಧನ್ಯವಾದ'' ಎಂದು ತಿಳಿಸಿದ್ದಾರೆ ಸಚಿವರು.

CBSE Cuts Syllabus by 30% for Classes 9 to 12

ಈ ವರ್ಷ ಶಾಲೆಗಳು ನಿಗದಿಯಂತೆ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಬೇರೆ ಯಾವುದೇ ಬದಲಾವಣೆ ಇಲ್ಲ. ಅಂಕಗಳು, ಶ್ರೇಣಿ ಎಲ್ಲವೂ ಈ ಹಿಂದಿನಂತೆ ಮುಂದುವರಿಯಲಿದೆ ಎಂದು ಸಿಬಿಎಸ್ಇ ತಿಳಿಸಿದೆ.

ಈ ಹಿಂದೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಎಲ್ಲಾ ಶ್ರೇಣಿಗಳಿಗೆ ಪಠ್ಯಕ್ರಮವನ್ನು ಶೇಕಡಾ 30ರಷ್ಟು ಕಡಿತಗೊಳಿಸುವಂತೆ ಸಲಹೆ ನೀಡಿದ್ದರು.

CBSE Cuts Syllabus by 30% for Classes 9 to 12

ಕರ್ನಾಟಕದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಖಾಸಗಿ ಶಾಲೆಗಳು ಮುಂದಾಗಿವೆ. 1 ರಿಂದ 5ನೇ ತರಗತಿ ಹಾಗೂ 6 ರಿಂದ 10 ನೇ ತರಗತಿವರೆಗೂ ಆನ್‌ಲೈನ್ ಶಿಕ್ಷಣ ಕುರಿತು ಹೈ ಕೋರ್ಟ್ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ಸರ್ಕಾರದಿಂದ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ.

English summary
CBSE reduce syllabus for class 9 to 12 has deleted chapters on Federalism, Citizenship, Nationalism, secularism from class 11 syllabus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X