ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ 12 ಫಲಿತಾಂಶ: ಇಬ್ಬರು ಬಾಲಕಿಯರು ದೇಶಕ್ಕೆ ಪ್ರಥಮ

|
Google Oneindia Kannada News

ನವದೆಹಲಿ, ಮೇ 2: ಸಿಬಿಎಸ್‌ಇ 12 ಫಲಿತಾಂಶ ಪ್ರಕಟವಾಗಿದ್ದು, ಬಾಲಕರೇ ಮೇಲುಗೈ ಸಾಧಿಸಿದ್ದರೂ ಕೂಡ ಇಬ್ಬರು ಬಾಲಕಿಯರು ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಹನ್ಸಿಕಾ ಶುಕ್ಲ ಹಾಗೂ ಕರೀಷ್ಮಾ ಅರೋರ ಇಬ್ಬರು ವಿದ್ಯಾರ್ಥಿನಿಯರು 500 ಅಂಕಗಳಿಗೆ 499 ಅಂಕಗಳನ್ನು ಪಡೆಯುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗರೇ ಮೇಲುಗೈ ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗರೇ ಮೇಲುಗೈ

ಹನ್ಸಿಕಾ ಘಾಜಿಯಾಬಾದ್ ನಿವಾಸಿಯಾಗಿದ್ದಾರೆ, ಕರೀಷ್ಮಾ ಅರೋರ ಮುಜಾಫರ್‌ನಗರದ ನಿವಾಸಿಯಾಗಿದ್ದಾರೆ. ಮೂವರು ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 16ರಂದು ನಡೆದ ಪರೀಕ್ಷೆಯಲ್ಲಿ ಸುಮಾರು 13 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಾಗೂ ಮೂವರು ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.500ಕ್ಕೆ 498 ಅಂಕ ಗಳಿಸಿದ್ದಾರೆ. ಗೌರಂಗಿ ಚಾವ್ಲಾ, ಐಶ್ವರ್ಯ, ಭವ್ಯ ದ್ವಿತೀಯ ಸ್ಥಾನ ಗಳಿಸಿದ್ದಾರೆ.

CBSE Class 12 Results Declared, 2 Girls Are Joint Toppers

ಒಟ್ಟಾರೆ, 31 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ 83.4ರಷ್ಟು ಮಂದಿ ಪಾಸಾಗಿದ್ದಾರೆ.2018ರಲ್ಲಿ ಒಟ್ಟಾರೆ, ಕ್ಲಾಸ್ 12ರಲ್ಲಿ ಪಾಸಾದವರು 83%ರಷ್ಟಿತ್ತು. ಹುಡುಗರು ಶೇ88.31ರಷ್ಟು ಫಲಿತಾಂಶ ತಂದಿದ್ದರೆ, ಹುಡುಗಿಯರು 78.99ರಷ್ಟು ಫಲಿತಾಂಶ ನೀಡಿದ್ದಾರೆ.

ತಿರುವನಂತಪುರಂ ಕ್ಷೇತ್ರ 98.2% ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೆನ್ನೈ 92.23%, ದೆಹಲಿಯಲ್ಲಿ ಪಾಸಾದವರು 91.87%.ಸಿಬಿಎಸ್ಇ ಫಲಿತಾಂಶ -ವೆಬ್ ಸೈಟ್ cbseresults.nic.in ಫಲಿತಾಂಶ ಪಡೆಯಬಹುದಾಗಿದೆ.

English summary
Two girls are the joint toppers of the CBSE Class 12 examination, the results of which were declared this afternoon. Around 13 lakh students appeared for the mega exam which began on February 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X