ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಬಿಡುಗಡೆ: ಒಟ್ಟಾರೆ ಫಲಿತಾಂಶ 91.46%

|
Google Oneindia Kannada News

ನವದೆಹಲಿ, ಜುಲೈ 15: ಬುಧವಾರ ಸಿಬಿಎಸ್‌ಸಿ 10 ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ನಿನ್ನೆ (ಮಂಗಳವಾರ) ಸಿಬಿಎಸ್‌ಸಿ ಪಿಯುಸಿ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಇದು ಹತ್ತನೇ ತರಗತಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಒಟ್ಟಾರೆ ಉತ್ತೀರ್ಣ ಶೇಕಡಾ 91.46ರಷ್ಟು ಎಂದು ಸಿಬಿಎಸ್‌ಸಿ ಪ್ರಕಟಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶದಲ್ಲಿ ಶೇಕಡಾ 0.36ರಷ್ಟು ಏರಿಕೆ ಕಂಡಿದೆ. ಶೇಕಡವಾರು ಫಲಿತಾಂಶದಲ್ಲಿ ತ್ರಿವೆಂಡ್ರಮ್ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಚೆನ್ನೈ, ಬೆಂಗಳೂರು, ಪುಣೆ, ಅಜ್ಮೀರ್, ಪಂಚಕುಲ, ಭುವನೇಶ್ವರ ಹಾಗೂ ಬೋಪಾಲ್‌ ನಗರಗಳಿವೆ. ಮೂರನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇಕಡಾ 98.23ರಷ್ಟು ಫಲಿತಾಂಶ ಬಂದಿದೆ.

ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಪ್ರಕಟಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಪ್ರಕಟ

ಮೆಟ್ರಿಕ್ ಪರೀಕ್ಷೆಗೆ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು, ಫಲಿತಾಂಶವನ್ನು ವಿವಿಧ ವೆಬ್‌ಸೈಟ್ ಮೂಲಕ ನೋಡಿಕೊಳ್ಳಬಹುದು. ವಿದ್ಯಾರ್ಥಿಗಳು ಡಿಜಿಲಾಕರ್, ಮೈಕ್ರೋಸಾಫ್ಟ್ ಎಸ್‌ಎಂಎಸ್ ಆರ್ಗನೈಸರ್ ಮತ್ತು ಉಮಾಂಗ್‌ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಅಥವಾ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ (IVRS) ಮೂಲಕ ಸಿಬಿಎಸ್‌ಇ 10ನೇ ಫಲಿತಾಂಶವನ್ನು ಪರಿಶೀಲಿಸಬಹುದು.

CBSE Class 10th Exam Results Annouced

ಇಷ್ಟಲ್ಲದೆ UMANG ಅಪ್ಲಿಕೇಶನ್ ಮೂಲಕವೂ ಫಲಿತಾಂಶವನ್ನು ನೋಡಬಹುದಾಗಿದೆ. ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದೆ. ಮಾರ್ಕ್‌ಶೀಟ್ ಟ್ಯಾಬ್ ಕ್ಲಿಕ್ ಮಾಡಿ ನಂತರ ವಿದ್ಯಾರ್ಥಿಯ ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಗಳನ್ನು ಪ್ರವೇಶಿಸಬಹುದು.

ಸಿಬಿಎಸ್‌ಇ ವೆಬ್‌ಸೈಟ್ ಮೂಲಕ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು?

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್- cbseresults.nic.in ಅಥವಾ cbse.nic.in

ಹಂತ 2: ಫಲಿತಾಂಶ 2020 ಕ್ಕೆ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ನಿಮ್ಮ ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.

ಹಂತ 4: ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಹಂತ 5: ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

English summary
The Central Board of Secondary Education (CBSE) Class 10 results Announced on wednesday (july 15)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X