ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE ಬೋರ್ಡ್ ಪರೀಕ್ಷೆಗಳು ನಡೆಯುತ್ತೋ? ಇಲ್ಲವೋ? : ಇಂದೇ ನಿರ್ಧಾರ

|
Google Oneindia Kannada News

ದೆಹಲಿ, ಜೂನ್ 24: ರಾಷ್ಟ್ರ ರಾಜಧಾನಿಯಲ್ಲಿ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ಮತ್ತು ಉಳಿದ 12 ನೇ ತರಗತಿ ಪರೀಕ್ಷೆಗಳನ್ನು ಮರು ನಿಗದಿಪಡಿಸುವ ಬಗ್ಗೆ, ಐಐಟಿಗಳಿಗೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ವೈದ್ಯಕೀಯ ಕಾಲೇಜುಗಳಿಗೆ ನೀಟ್ ಪರೀಕ್ಷೆಯನ್ನು ಯಾವಾಗ ನಡೆಸಬೇಕು ಎಂಬ ಎಲ್ಲಾ ನಿರ್ಧಾರಗಳನ್ನು ಸರ್ಕಾರ ಇದು ಸಂಜೆ ವೇಳೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada

ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಸಿಬಿಎಸ್‌ಇಯ 10 ಮತ್ತು 12 ನೇ ತರಗತಿಗಳ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಸಲಾಯಿತು. ಇದರಲ್ಲಿ ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಮಂಡಳಿ ಈ ಕುರಿತು ಅಧಿಕಾರಿಗಳ ಸಭೆ ನಡೆಯುತ್ತಿದೆ ಮತ್ತು ಬುಧವಾರ ಸಂಜೆ ವೇಳೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಇದರ ನಂತರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಮಕ್ಕಳಿಗೆ ಸೋಂಕು ತಗುಲಿದರೆ ಶಿಕ್ಷಣ ಸಚಿವರೇ ಹೊಣೆ: ಎಎಪಿಮಕ್ಕಳಿಗೆ ಸೋಂಕು ತಗುಲಿದರೆ ಶಿಕ್ಷಣ ಸಚಿವರೇ ಹೊಣೆ: ಎಎಪಿ

ವಿಚಾರಣೆಯ ಸಮಯದಲ್ಲಿ ಸಿಬಿಎಸ್‌ಸಿ ಮಂಡಳಿಯ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ಇದರ ನಂತರ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ.

CBSE Board Exams:Today Govt To Decide On Scrapping board exams Or Rescheduling

ಮಾಹಿತಿಯ ಪ್ರಕಾರ, ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಸಿಬಿಎಸ್‌ಇಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಜುಲೈನಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲು ಪ್ರಸ್ತುತ ಒಪ್ಪಂದವಿದೆ, ಇದರಲ್ಲಿ ಸಿಬಿಎಸ್‌ಇ ಮಂಡಳಿಯು 10 ನೇ ತರಗತಿ ಮತ್ತು 12 ನೇ ತರಗತಿಯ ಉಳಿದ 29 ವಿಷಯಗಳ ಪರೀಕ್ಷೆಗಳನ್ನು ನಡೆಸುತ್ತದೆ. ವಿದ್ಯಾರ್ಥಿಗಳ ಮೌಲ್ಯಮಾಪನದಿಂದ ಫಲಿತಾಂಶವನ್ನು ಸಿದ್ಧಪಡಿಸುವ ಮತ್ತು ಪರೀಕ್ಷೆಯ ದಿನಾಂಕವನ್ನು ವಿಸ್ತರಿಸುವ ಯೋಜನೆ ಇದೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ: ಸರಕಾರಕ್ಕೆ ವಾಟಾಳ್ ನಾಗರಾಜ್ ವಿಶಿಷ್ಟ ಆಗ್ರಹಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ: ಸರಕಾರಕ್ಕೆ ವಾಟಾಳ್ ನಾಗರಾಜ್ ವಿಶಿಷ್ಟ ಆಗ್ರಹ

ಕೊರೊನಾ ಬಿಕ್ಕಟ್ಟಿನ ನಡುವೆಯೂ ಜುಲೈನಲ್ಲಿ ಪರೀಕ್ಷೆಯನ್ನು ನಡೆಸುತ್ತಿರುವ ಸಿಬಿಎಸ್ಇ ಮಂಡಳಿಯ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಸಿಬಿಎಸ್ಇ ಮಂಡಳಿಯಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿದೆ. ಈ ವರ್ಷದ ಮಂಡಳಿಯ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಸಿಬಿಎಸ್‌ಇ ಮಂಡಳಿಯ ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಘೋಷಿಸಬೇಕು ಎಂದೂ ಸಹ ಕೋರಲಾಗಿದೆ.

ಜುಲೈ 1 ರಿಂದ ಪ್ರಾರಂಭವಾಗಲಿರುವ ಈ ವರ್ಷದ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಜೂನ್ 25 ರವರೆಗೆ ಮುಂದೂಡಿದ ನಂತರ ಅಧಿಕಾರಿಗಳು ಇಂದು ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

English summary
The government is likely to scrap Class 10 board exams in Delhi and take a call on rescheduling the remaining Class 12 board exams today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X