• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

|

ರೆವಾರಿ (ಹರಿಯಾಣ), ಸೆಪ್ಟೆಂಬರ್ 14: ಸಿಬಿಎಸ್‌ಸಿ ಪರೀಕ್ಷೆಯಲ್ಲಿ rank ಪಡೆದು ಸನ್ಮಾನ ಸ್ವೀಕರಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾಮುಕರ ಅಟ್ಟಹಾಸಕ್ಕೆ ಗುರಿಯಾಗಿ ನರಳುತ್ತಿದ್ದಾಳೆ.

2016ರಲ್ಲಿ ಹತ್ತನೇ ತರಗತಿ ಸಿಬಿಎಸ್‌ಸಿ ಪಠ್ಯದಲ್ಲಿ Rank ಪಡೆದು ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಈ ಹಳ್ಳಿಯ ಪ್ರತಿಭಾನ್ವಿತ ಹುಡುಗಿಯ ಮೇಲೆ ಬರೋಬ್ಬರಿ 12 ಜನ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಹರಿಯಾಣದ ರಾವೆರಿ ಜಿಲ್ಲೆಯ ಕೋಸಿಲಿ ಗ್ರಾಮದ ಈ ಪ್ರತಿಭಾನ್ವಿತ ಹುಡುಗಿ ದ್ವಿತೀಯ ಪಿಯುಸಿ ಪರೀಕ್ಷೆ ತಯಾರಿಗಾಗಿ ಕನೈನಾ ಪಟ್ಟಣದ ಕೋಚಿಂಗ್‌ ಕ್ಲಾಸ್‌ಗೆ ತೆರಳಲು ಬಸ್‌ಸ್ಟಾಂಡ್‌ನಲ್ಲಿ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಮೂರು ಜನ ಕಾಲೇಜು ಹುಡುಗರು ಆಕೆಯನ್ನು ಅಪಹರಿಸಿದ್ದಾರೆ.

ಆಕೆಯನ್ನು ಅಪಹರಿಸಿ ಜಹ್ಜರ್ ನಗರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಬಲವಂತದಿಂದ ಮಾದಕ ದ್ರವ್ಯ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಬರೋಬ್ಬರಿ 12 ಜನ ಅತ್ಯಾಚಾರ ಮಾಡಿದ್ದಾರೆ. ಆ ನಂತರ ಆಕೆಯನ್ನು ಕನೈನಾದ ಅದೇ ಬಸ್‌ ನಿಲ್ದಾಣದ ಬಳಿ ಎಸೆದು ಹೋಗಿದ್ದಾರೆ. ಅಷ್ಟೆ ಅಲ್ಲದೆ ಆರೋಪಿಯೇ ಒಬ್ಬ ಹುಡುಗಿಯ ಮನೆಗೆ ಕರೆ ಮಾಡಿ ಅವರ ಮಗಳು ಬಸ್‌ ನಿಲ್ದಾಣದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದಾಗಿ ಹೇಳಿದ್ದಾನೆ.

ಎರವಾರಿ ಜಿಲ್ಲೆಯಲ್ಲಿ ಜೀರೋ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಕನೈನಾದ ಪೊಲೀಸರು ಈ ಪ್ರಕರಣ ನಮ್ಮ ಸರಹದ್ದಿನಲ್ಲಿ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ವಿಷಯ ಸಾರ್ವಜನಿಕವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಪ್ರಕರಣವನ್ನು ಮಹೇಂದ್ರ ಘಡ ಪೊಲೀಸರಿಗೆ ಒಪ್ಪಿಸಿದೆ.

ಆಸ್ಪತ್ರೆಯಲ್ಲಿರುವ ಯುವತಿಯು ತನ್ನನ್ನು ಅಪಹರಿಸಿದ್ದು ನಮ್ಮದೇ ಗ್ರಾಮದವರು ಎಂದು ಹೇಳಿದ್ದಾಳೆ. ಆದರೆ ಇನ್ನೂ ಒಬ್ಬರನ್ನೂ ಬಂಧಿಸಲಾಗಿಲ್ಲ.

English summary
CBSC rank student gang raped near Gurgaon city. Three men kidnapped the the girl while she was going to coaching class and took her to far place and gang raped her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X