• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

75 ಬೇಸಿಕ್ ತರಬೇತಿ ವಿಮಾನ ಖರೀದಿ: ಯುಪಿಎ ಸರ್ಕಾರದ ಮತ್ತೊಂದು ಹಗರಣ ಬಯಲಿಗೆ

|

ನವದೆಹಲಿ, ಜೂನ್ 24: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಹಗರಣ ಬಯಲಿಗೆ ಬಂದಿದೆ.

2009ರಲ್ಲಿ ಭಾರತೀಯ ವಾಯುಪಡೆಗೆ 75 ಪೈಲಟಸ್ ಬೇಸಿಕ್ ತರಬೇತಿ ವಿಮಾನಗಳ ಖರೀದಿ ವ್ಯವಹಾರದಲ್ಲಿ 2,895 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ. ಈ ಸಂಬಂಧ ಶಸ್ತ್ರಾಸ್ತ್ರ ವಿತರಕ ಸಂಜಯ್ ಭಂಡಾರಿ, ಭಾರತೀಯ ವಾಯುಪಡೆ, ರಕ್ಷಣಾ ಇಲಾಖೆಯ ಅಧಿಕಾರಿಗಳು ಮತ್ತು ಸ್ವಿಟ್ಜರ್ಲೆಂಡ್ ಮೂಲದ ಪೈಲಟಸ್ ಏರ್‌ಕ್ರಾಫ್ಟ್ ಲಿಮಿಟೆಡ್‌ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂಜಯ್ ಭಂಡಾರಿ ಅವರ ನಿವಾಸ ಮತ್ತು ಕಚೇರಿ ಹಾಗೂ ಪೈಲಟಸ್‌ನ ಕಚೇರಿ ಸೇರಿದಂತೆ ದೆಹಲಿ-ಎನ್‌ಸಿಆರ್‌ನ ಒಂಬತ್ತು ಸ್ಥಳಗಳಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿರುವುದಾಗಿ ಸಿಬಿಐ ತಿಳಿಸಿದೆ.

ರಫೇಲ್: 126 ವಿಮಾನಗಳ ಬದಲು 36 ವಿಮಾನದ ಒಪ್ಪಂದ ನಡೆದಿದ್ದು ಹೀಗೆ

ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ 2016ರಲ್ಲಿ ಪ್ರಾಥಮಿಕ ತನಿಖೆ ದಾಖಲಿಸಿತ್ತು. ತನಿಖೆಯ ಹಂತದಲ್ಲಿ 2009ರ ಡಿಸೆಂಬರ್ 16ರಂದು ಬೇಸಿಕ್ ತರಬೇತಿ ವಿಮಾನದ ಖರೀದಿಗಾಗಿ ಭಾರತೀಯ ವಾಯುಪಡೆ (ಐಎಎಫ್) ಪ್ರಸ್ತಾವದ ಮನವಿ ಸಲ್ಲಿಸಿದ್ದು, ಪೈಲಟಸ್ ಏರ್ ಕ್ರಾಫ್ಟ್ ಲಿಮಿಟೆಡ್ ಬಿಡ್ಡರ್‌ಗಳಲ್ಲಿ ಒಬ್ಬರಾಗಿದ್ದು ಪತ್ತೆಯಾಗಿತ್ತು ಎಂದು ಅದು ವಿವರಿಸಿದೆ.

ನಿಯಮ ಉಲ್ಲಂಘಿಸಿ ಒಪ್ಪಂದ

ನಿಯಮ ಉಲ್ಲಂಘಿಸಿ ಒಪ್ಪಂದ

ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್ ಪ್ರೈ. ಲಿ.ನ ನಿರ್ದೇಶಕರಾಗಿದ್ದ ಸಂಜಯ್ ಭಂಡಾರಿ ಮತ್ತು ಬಿಮಲ್ ಸರೀನ್ ಅವರೊಂದಿಗೆ ಪೈಲಟಸ್ ಕಂಪೆನಿ ಈ ವ್ಯವಹಾರದಲ್ಲಿ ಅವ್ಯವಹಾರ ನಡೆಸಲು ಕೈ ಜೋಡಿಸಿತು. 2010ರ ಜೂನ್‌ನಲ್ಲಿ ಭಂಡಾರಿ ಅವರೊಂದಿಗೆ ಸೇವಾ ಪೂರೈಕೆದಾರ ಒಪ್ಪಂದ (ಸರ್ವೀಸ್ ಪ್ರೊವೈಡರ್ ಅಗ್ರೀಮೆಂಟ್) ಮಾಡಿಕೊಂಡಿತು. ಈ ಒಪ್ಪಂದವು ರಕ್ಷಣಾ ಖರೀದಿ ಪ್ರಕ್ರಿಯೆ ನಿಯಮದ ಉಲ್ಲಂಘನೆಯಾಗಿತ್ತು.

ರಫೇಲ್ ಡೀಲ್ ಪುಸ್ತಕವನ್ನು ಮುಟ್ಟುಗೋಲು ಹಾಕಿದ್ದು ಯಾರು?

2011 ಮತ್ತು 2015ರಲ್ಲಿ ಹಣ ಪಾವತಿ

2011 ಮತ್ತು 2015ರಲ್ಲಿ ಹಣ ಪಾವತಿ

2010ರ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಎರಡು ಕಂತಿನಲ್ಲಿ ಪೈಲಟಸ್ ಏರ್‌ಕ್ರಾಫ್ಟ್ಸ್ ಕಂಪೆನಿಯು ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್‌ಗೆ ಹಣ ಪಾವತಿ ಮಾಡಿತ್ತು. ಇದಲ್ಲದೆ, ಕಂಪೆನಿಯು ಸುಮಾರು 350 ಕೋಟಿ ರೂಪಾಯಿ ಮೊತ್ತದ ನಿಧಿಯನ್ನು 2011 ಮತ್ತು 2015ರಲ್ಲಿ ಈ ಒಪ್ಪಂದವನ್ನು ಪಡೆದುಕೊಳ್ಳುವುದಕ್ಕಾಗಿ ಭಂಡಾರಿಯ ಕಂಪೆನಿಗೆ ನೀಡಿತ್ತು.

ಒಪ್ಪಂದ ಮುಚ್ಚಿಟ್ಟಿದ್ದ ಕಂಪೆನಿ

ಒಪ್ಪಂದ ಮುಚ್ಚಿಟ್ಟಿದ್ದ ಕಂಪೆನಿ

2010ರ ನವೆಂಬರ್‌ನಲ್ಲಿ ಪೈಲಟಸ್ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ಗುತ್ತಿಗೆ ಪೂರ್ವ ಸಮಗ್ರ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಆದರೆ, ಭಂಡಾರಿ ಜತೆ ಸೇವಾ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಪೈಲಟಸ್ ಕಂಪೆನಿ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿತ್ತು. ಅಲ್ಲದೆ, ಪೈಲಟಸ್ ಏರ್‌ಕ್ರಾಫ್ಟ್ಸ್ ಕಂಪೆನಿ ಗುತ್ತಿಗೆ ನೀಡುವ ಮೊದಲೇ ಭಂಡಾರಿ ಕಂಪೆನಿಗೆ ಹಣ ಪಾವತಿ ಮಾಡಿರುವ ಸಂಗತಿಯನ್ನೂ ರಹಸ್ಯವಾಗಿಟ್ಟಿತ್ತು ಎನ್ನುವುದು ಸಿಬಿಐ ನಡೆಸಿದ ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ.

ವಿಮಾನಯಾನ ಹಗರಣ: ಯುಪಿಎ ಸರ್ಕಾರದ ಮಾಜಿ ಸಚಿವ ಪ್ರಫುಲ್ ಪಟೇಲ್‌ಗೆ ಸಂಕಷ್ಟ

ಲಂಚ ನೀಡಲು ಭಂಡಾರಿಗೆ 25.5 ಕೋಟಿ

ಲಂಚ ನೀಡಲು ಭಂಡಾರಿಗೆ 25.5 ಕೋಟಿ

ಈ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಭಾಗಿದಾರರಾದ ಐಎಎಫ್ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಪ್ರಭಾವಿಸುವ ಸಲುವಾಗಿ ಕಮಿಷನ್ ನೀಡಲು ಕಂಪೆನಿಯು ಭಂಡಾರಿಗೆ ಹಣವನ್ನು ಪಾವತಿಸಿತ್ತು ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ.

2012ರಲ್ಲಿ ಪೈಲಟಸ್ ಏರ್‌ಕ್ರಾಫ್ಟ್ಸ್ ಕಂಪೆನಿ ರಕ್ಷಣಾ ಇಲಾಖೆಯೊಂದಿಗೆ 2,895 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು. ಜತೆಗೆ ಭಂಡಾರಿಯ ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್ ಹಾಗೂ ಇತರೆ ಕಂಪೆನಿಗಳೊಂದಿಗೆ ಕೂಡ ಒಪ್ಪಂದ ಮಾಡಿಕೊಂಡಿತ್ತು. 2012 ಮತ್ತು 2015ರಲ್ಲಿ ಭಂಡಾರಿ ಕಂಪೆನಿ 25.5 ಕೋಟಿ ಪಡೆದುಕೊಂಡಿತ್ತು.

ಹಲವರ ವಿರುದ್ಧ ಎಫ್‌ಐಆರ್ ದಾಖಲು

ಹಲವರ ವಿರುದ್ಧ ಎಫ್‌ಐಆರ್ ದಾಖಲು

ಈಗ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿರುವ ಸಿಬಿಐ ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಿದೆ.

ಭಂಡಾರಿ ಅಲ್ಲದೆ, ಆತನ ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್ ಪ್ರೈ.ಲಿ., ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್ ಎಫ್‌ಜೆಡ್‌ಸಿ, ಯುಎಇ, ಅಗರ್ವಾಲ್, ವರ್ಮಾ, ಸರೀನ್ ಮತ್ತು ಇತರೆ ಅಪರಿಚಿತರ ವಿರುದ್ಧ ಅಪರಾಧ ಸಂಚು, ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಕಾನೂನುಗಳ ಅಡಿ ಪ್ರಕರಣಗಳನ್ನು ದಾಖಲಿಸಿದೆ.

English summary
CBI has registered a case aganist arms dealer Sanjay Bhandari, Switzerland based company Pilatus Aircraft Ltd and unknown officials of Indian Air Force (IAF) and Ministry of Defence with alleged corruption in the 75 Pilatus basic trainer aircraft for IAF in 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more