ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟಾ ಹಗರಣ : 5 ದಿನಗಳ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 05 : ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ದುಬೈನಿಂದ ಭಾರತಕ್ಕೆ ಕರೆತಂದಿರುವ ಬ್ರಿಟನ್ ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ನನ್ನು ವಿಚಾರಣೆಗಾಗಿ ಐದು ದಿನಗಳ ಸಿಬಿಐ ಕಸ್ಟಡಿಗೆ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ನೀಡಿದೆ.

ಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿಆಗಸ್ಟಾ ಮಧ್ಯವರ್ತಿ ಎಲ್ಲ 'ರಹಸ್ಯ' ಬಯಲು ಮಾಡಲಿದ್ದಾನೆ : ನರೇಂದ್ರ ಮೋದಿ

12 ಹೆಲಿಕಾಪ್ಟರ್ ಗಳನ್ನು ಆಂಗ್ಲೋ ಇಟಾಲಿಯನ್ ಕಂಪನಿ ಆಗಸ್ಟಾ ವೆಸ್ಟ್ ಲ್ಯಾಂಡ್ ನಿಂದ 3,600 ಕೋಟಿ ರುಪಾಯಿಗೆ ಖರೀದಿಸಲು ಭಾರತದ ವಾಯುಸೇನೆಯೊಂದಿಗೆ 2010ರಲ್ಲಿ ಒಪ್ಪಂದವಾಗಿತ್ತು. ಇದರಲ್ಲಿ ಈ ಡೀಲ್ ಕುದುರಿಸಲು ಭಾರತದ ರಾಜಕಾರಣಿಗಳಿಗೆ ಲಂಚ ನೀಡಲೆಂದು ಮಧ್ಯವರ್ತಿ ಮೈಕೆಲ್ ಗೆ 225 ಕೋಟಿ ರುಪಾಯಿ ನೀಡಲಾಗಿತ್ತು ಎಂಬುದು ಆರೋಪ.

ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ ತಲೆಮರೆಸಿಕೊಂಡಿದ್ದ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಭಾರತಕ್ಕೆ

ಈ ಹಗರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ದುಬೈನಲ್ಲಿ ಎರಡು ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಾಕ್ಷ್ಯವಿರುವುದರಿಂದ ವಿಚಾರಣೆಗೆ 5 ದಿನಗಳ ಕಾಲ ನೀಡಬೇಕೆಂದು ಸಿಬಿಐ ಮನವಿ ಸಲ್ಲಿಸಿತ್ತು. ಜಾಮೀನಿಗೆ ಕ್ರಿಶ್ಚಿಯನ್ ಮೈಕೆಲ್ ಅರ್ಜಿ ಸಲ್ಲಿಸಿದ್ದರೂ, ಮುಂದಿನ ವಿಚಾರಣೆಯಲ್ಲಿ ಪರಿಗಣಿಸುವುದಾಗಿ ಹೇಳಿದ ವಿಶೇಷ ನ್ಯಾಯಾಲಯ, ಸಿಬಿಐಗೆ 5 ದಿನಗಳ ಕಸ್ಟಡಿ ನೀಡಿದೆ.

CBI Special Court sends Christian Michel to five-day CBI custody

ಇದಕ್ಕೂ ಮೊದಲು ಬೆಳಗಿನ ಜಾವ 1 ಗಂಟೆ ಮತ್ತು ಸಂಜೆಯ ಸಮಯ 1 ಗಂಟೆ ತಮ್ಮ ವಕೀಲ ಅಲ್ಜೋ ಕೆ ಜೋಸೆಫ್ ಅವರೊಂದಿಗೆ ಮಾತುಕತೆ ನಡೆಸಲು ನ್ಯಾಯಾಲಯ ಕ್ರಿಶ್ಚಿಯನ್ ಮೈಕೆಲ್ ಗೆ ಅನುಮತಿ ನೀಡಿತ್ತು. 5 ದಿನಗಳ ಕಸ್ಟಡಿ ನೀಡಿದ್ದರಿಂದ ವಿಚಾರಣೆಗಾಗಿ ಮೈಕೆಲ್ ನನ್ನು ದೆಹಲಿಯ ಸಿಬಿಐ ಮುಖ್ಯಕಚೇರಿಗೆ ಕರೆತರಲಾಗಿದೆ.

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್

ಈ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಚಾರಣೆಯಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಹಲವಾರು ರಹಸ್ಯಗಳನ್ನು ಬಯಲು ಮಾಡಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. 2010ರಲ್ಲಿ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ಒಪ್ಪಂದ ಆಗಿತ್ತು, ಆಗ ಹಲವಾರು ನಾಯಕರು ಇದರಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. 2014ರಲ್ಲಿ ಈ ಒಪ್ಪಂದವನ್ನು ಮೋದಿ ಸರಕಾರ ರದ್ದುಪಡಿಸಿತ್ತು.

English summary
CBI Special Court sends Christian Michel to five-day CBI custody, with respect to AgustaWestland chopper deal. Christian was extradited from Dubai to India on 4th December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X