• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ದೇವಮಾನವ' ಡಾಟಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಸಿಬಿಐ

|

ನವದೆಹಲಿ, ಅಕ್ಟೋಬರ್ 26: ಭಕ್ತೆಯೊಬ್ಬರ ಮೇಲೆ ವಿರುದ್ಧ ಆತ್ಯಾಚಾರ ಎಸಗಿದ ಆರೋಪ ಹೊತ್ತುಕೊಂಡಿರುವ ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ವಿರುದ್ಧ ಸಿಬಿಐ ಅಧಿಕಾರಿಗಳು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಾಟಿ ಮಹಾರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರೂ ದೆಹಲಿ ಪೊಲೀಸರು ಸೂಕ್ತ ರೀತಿ ತನಿಖೆ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಜೂನ್ 07ರಂದು ದೂರು ದಾಖಲಾಗಿದ್ದು, ಜೂನ್ 11ರಂದು ಎಫ್ಐಆರ್ ಹಾಕಲಾಗಿತ್ತು. ಜೂನ್ 22ರಂದು ಡಾಟಿ ಮಹಾರಾಜ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಇದು ನನ್ನ ವಿರುದ್ಧ ನಡೆದಿರುವ ಸಂಚು ಎಂದೇ ಮಹಾರಾಜ್ ಅವರು ಪ್ರತಿಪಾದಿಸಿದ್ದರು.

ಅಕ್ಟೋಬರ್ 01ರಂದು ಸಾಕೇತ್ ಕೋರ್ಟಿನಲ್ಲಿ ಬಾಬಾ ಡಾಟಿ ಮಹಾರಾಜ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಇದರಿಂದ ತೃಪ್ತರಾಗದ ಹೈಕೋರ್ಟ್ ನ್ಯಾಯಪೀಠವು, ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು, ಆರೋಪಿಯನ್ನು ಇನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಶುಕ್ರವಾರ(ಅಕ್ಟೋಬರ್ 26) ದಂದು ಡಾಟಿ ಮಹಾರಾಜ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದೆ.

ಕೇಸ್ ಫೈಲ್ ಗಳು ಸಿಬಿಐ ಅಧಿಕಾರಿಗಳ ಕೈ ಸೇರಿವೆ

ಕೇಸ್ ಫೈಲ್ ಗಳು ಸಿಬಿಐ ಅಧಿಕಾರಿಗಳ ಕೈ ಸೇರಿವೆ

ತಮ್ಮ ಆಶ್ರಮದಲ್ಲಿದ್ದ ಯುವತಿ ಮೇಲೆ ಡಾಟಿ ಮಹಾರಾಜ್ ಹಾಗೂ ಆತನ ಸಹಚರರು ಎರಡು ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಆರೋಪವಿದೆ. ಫತೇಪುರ್ ಬೆರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಟಿ ಮಹಾರಾಜ್​ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್​ 376, 377, 354 ಮತ್ತು 34ರ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಈಗ ಕೇಸ್ ಫೈಲ್ ಗಳು ಸಿಬಿಐ ಅಧಿಕಾರಿಗಳ ಕೈ ಸೇರಿವೆ.

ಡಾಟಿ ಮಹಾರಾಜ್ ಪ್ರವಚನಕಾರರಾಗಿ ಫೇಮಸ್

ಡಾಟಿ ಮಹಾರಾಜ್ ಪ್ರವಚನಕಾರರಾಗಿ ಫೇಮಸ್

ದೆಹಲಿ ಹಾಗೂ ಎನ್ ಸಿಆರ್ ಭಾಗದಲ್ಲಿ ಜನಪ್ರಿಯತೆ ಗಳಿಸಿರುವ ಡಾಟಿ ಮಹಾರಾಜ್ ಅವರು ಗುರುವಾರ ಹಾಗೂ ಶನಿವಾರದಂದು ನಡೆಸುವ ಸತ್ಸಂಗ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಲವು ಟಿವಿ ಶೋಗಳು, ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಘಟನೆ

ಎರಡು ವರ್ಷಗಳ ಹಿಂದೆ ನಡೆದ ಘಟನೆ

ರಾಜಸ್ಥಾನದ ಬಾಲ್ ಗ್ರಾಮ್ ಆಶ್ರಮದಲ್ಲಿ ಗುರುಕುಲ್ ಆಶ್ರಮದಲ್ಲಿ 25 ವರ್ಷ ವಯಸ್ಸಿನ ಯುವತಿ ಮೇಲೆ ಡಾಟಿ ಮಹಾರಾಜ್ ಅಲಿಯಾಸ್ ಡಾಟಿ ಮದನ್ ಲಾಲ್ ಅವರು ಅತ್ಯಾಚಾರ ಎಸಗಿದ ಆರೋಪವಿದೆ. ಡಾಟಿ ಮಹಾರಾಜ್ ಹಾಗೂ ಅವರ ಸಂಗಡಿಗರ ಬೆದರಿಕೆಯಿಂದ ನಾನು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ನಂತರ ಪೊಲೀಸರ ಮೊರೆ ಹೊಕ್ಕಬೇಕಾಯಿತು ಎಂದಿದ್ದಾರೆ.

ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡಾಟಿ ಮಹಾರಾಜ್ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅನೈಸರ್ಗಿಕ ಲೈಂಗಿಕ ಕಿರುಕುಳಕ್ಕೆ ಸಾಕ್ಷಿ ಸಿಗಲಿಲ್ಲ

ಅನೈಸರ್ಗಿಕ ಲೈಂಗಿಕ ಕಿರುಕುಳಕ್ಕೆ ಸಾಕ್ಷಿ ಸಿಗಲಿಲ್ಲ

ದಾಟಿ ಮಹಾರಾಜ್ ಹಾಗೂ ಸೋದರರು, ಜನವರಿ 09,2016ರಂದು ನಂತರ ಮಾರ್ಚ್ 26,27 ಹಾಗೂ 28 ರಂದು ಚರಣ ಸೇವೆ ಹೆಸರಿನಲ್ಲಿ ನನ್ನ ಮೇಲೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಲಾಗಿದೆ. ದಾಟಿ ಅವರ ಮೂತ್ರವನ್ನು ಸೇವಿಸುವಂತೆ ಬಲವಂತ ಪಡಿಸಲಾಯಿತು ಎಂದು ಯುವತಿ ದೂರಿದ್ದಾಳೆ.

ಘಟನೆ ನಡೆದಿದೆ ಎನ್ನಲಾದ ದಿನಾಂಕಗಳಲ್ಲಿ ದಾತಿ ಮಹಾರಾಜ್ ಅವರು ಹೋಮ ಹವನದಲ್ಲಿ ನಿರತರಾಗಿದ್ದರು. ಯುವತಿಯು ಶನಿ ಅಮಾವಾಸ್ಯ ಪೂಜೆಯಲ್ಲಿ ತೊಡಗಿಕೊಂಡಿದ್ದಳು.

ಈ ಕೇಸಿಗೆ ಸಾಕ್ಷಿಯಾಗಿರುವ ಯುವತಿಯ ಸೋದರಿ ನೀಡಿರುವ ಹೇಳಿಕೆಯಲ್ಲೂ ಸತ್ಯಾಂಶವಿಲ್ಲ. ನನ್ನ ಕಣ್ಣ ಮುಂದೆ ಅತ್ಯಾಚಾರ ಆಗಿದೆ ಎಂದು ಸಂತ್ರಸ್ತೆಯ ಸೋದರಿ ಹೇಳಿದ್ದಾಳೆ. ಆದರೆ ತನಿಖೆ ನಡೆಸಿದಾಗ, ಉಲ್ಲೇಖಗೊಂಡ ದಿನಾಂಕದಂದು ಆಕೆ ಅಜ್ಮೇರ್ ನ ಕಾಲೇಜಿನಲ್ಲಿದ್ದಳು ಎಂದು ತಿಳಿದು ಬಂದಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.

English summary
The CBI has registered a case against self-styled preacher Daati Maharaj, who runs a temple in south Delhi, for allegedly raping and having unnatural sex with an inmate of his ashram, officials said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X