ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮೂಲದ ಕಂಪನಿಯಿಂದ ಎಸ್‌ಬಿಐಗೆ 173 ಕೋಟಿ ರೂ ವಂಚನೆ

|
Google Oneindia Kannada News

ನವದೆಹಲಿ,ಮೇ 2: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ದೆಹಲಿ ಮೂಲದ ಕಂಪನಿಯೊಂದು 173 ಕೋಟಿ ರೂ ವಂಚಿಸಿದ್ದು ಎಫ್‌ಐಆರ್ ದಾಖಲಿಸಲಾಗಿದೆ.

ದೆಹಲಿಯ ರೋಹಿನಿಯಲ್ಲಿ ನೋಂದಾಯಿತ ಕಚೇರಿ ರಾಮ್ ದೇವ್ ಇಂಟರ್‌ನ್ಯಾಷನಲ್‌ ಲಿಮಿಟೆಡ್ ಕಂಪನಿ ಮೇಲೆ ಪ್ರಕರಣ ದಾಖಲಾಗಿದೆ ಹಾಗೂ ಅದರ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ಸೇರಿದಂತೆ ಮೂವರು ಅಪರಿಚಿತ ಸಾರ್ವಜನಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕರ್ನಲ್‌ ಶಾಖೆಗೆ ಈ ಕಂಪನಿಯು 173.11 ಕೋಟಿ ರೂ ಬೃಹತ್‌ ಮೊತ್ತದ ವಂಚನೆ ಹಾಗೂ ಮೋಸ ಮಾಡಿದೆ.

SBI

ಬ್ಯಾಂಕ್‌ ಮೂಲಕ ಸಾಲ ಪಡೆದು ಕಂಪನಿಯ ಆವರಣದಲ್ಲಿ ನಿರ್ಮಿಸಿದ್ದ ಯಂತ್ರೋಪಕರಣಗಳನ್ನು ಅನಧಿಕೃತವಾಗಿ ತೆಗೆಯಲಾಗಿದೆ. ಅಲ್ಲದೇ, ಸಾಲ ಪಡೆಯಲು ಹಲವು ನಕಲಿ ದಾಖಲೆಗಳನ್ನು ನೀಡಲಾಗಿದ ಎಂದು ಸಿಬಿಐ ವಕ್ತಾರ ಆರ್ ಕೆ ಗೌರ್ ಅವರು ತಿಳಿಸಿದ್ದಾರೆ.

44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ

ಇಡೀ ದೇಶ ಮಾರಕ ಕೊರೊನಾ ವೈರಸ್ ಲಾಕ್ ಡೌನ್ ನಿಂದ ತತ್ತರಿಸುತ್ತಿದ್ದರೆ ಅತ್ತ ದೆಹಲಿ ಮೂಲದ ಕಂಪನಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಹುಕೋಟಿ ವಂಚಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 173 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಕಂಪನಿ ಮತ್ತು ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಶುಕ್ರವಾರ ತಿಳಿಸಿದೆ.

English summary
The CBI has registered a case against a private company, Ram Dev International Ltd, and its directors for allegedly cheating State Bank Of India To the tune of Rs 173 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X