ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದಂಬರಂಗೆ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆ: ಸಿಬಿಐ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸದ್ಯ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.

ಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂ

ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರು ಜಾಮೀನಿಗಾಗಿ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸೆ. 23ರಂದು ವಿಚಾರಣೆಗೆ ಬರಲಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ಪ್ರತಿಕ್ರಿಯೆ ನೀಡಿದೆ.

ಜೈಲಲ್ಲಿ ದಿಂಬಿಲ್ಲ, ಚೇರಿಲ್ಲ ಎಂದ ಚಿದು ಗೋಳು ಬಿಚ್ಚಿಟ್ಟ ಸಿಂಘ್ವಿಜೈಲಲ್ಲಿ ದಿಂಬಿಲ್ಲ, ಚೇರಿಲ್ಲ ಎಂದ ಚಿದು ಗೋಳು ಬಿಚ್ಚಿಟ್ಟ ಸಿಂಘ್ವಿ

'ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಅಕ್ರಮ ಪ್ರತಿಫಲಕ್ಕೆ ಬೇಡಿಕೆ ಇರಿಸಿದ್ದರು. ಇಂದ್ರಾಣಿ ಮುಖರ್ಜಿ ಮತ್ತು ಪ್ರತಿಮ್ ಮುಖರ್ಜಿ ಅವರು ಆರೋಪಿ ಹಾಗೂ ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ಭಾರತ ಮತ್ತು ವಿದೇಶದಿಂದ ಅಕ್ರಮ ಹಣವನ್ನು ಪಾವತಿ ಮಾಡಿದ್ದಾರೆ ಎನ್ನುವುದು ಇದುವರೆಗೆ ನಡೆದಿರುವ ವಿಚಾರಣೆಗಳಿಂದ ತಿಳಿದುಬಂದಿದೆ' ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

CBI Opposes Bail Plea Of P Chidambaram In INX Media Case

'ಚಿದಂಬರಂ ಅವರು ಮಾಡಿರುವ ಹಣದ ದುರುಪಯೋಗದ ಮಟ್ಟ ಮತ್ತು ಸಾರ್ವಜನಿಕ ಕಚೇರಿಯ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿ ಅವರು ಯಾವುದೇ ನಿರಾಳತೆ ಪಡೆಯುವ ಹಕ್ಕನ್ನು ಕಸಿದುಕೊಂಡಿವೆ' ಎಂದು ಸಿಬಿಐ ಹೇಳಿದೆ.

ಚಿದಂಬರಂ ತಿಹಾರ್ ಜೈಲು ವಾಸ ಇನ್ನೂ 14 ದಿನ ವಿಸ್ತರಣೆಚಿದಂಬರಂ ತಿಹಾರ್ ಜೈಲು ವಾಸ ಇನ್ನೂ 14 ದಿನ ವಿಸ್ತರಣೆ

ಚಿದಂಬರಂ ಅವರಿಗೆ ಜಾಮೀನು ನೀಡುವುದು ಭ್ರಷ್ಟಾಚಾರ ವಿಚಾರಗಳಿಗೆ ಸಂಬಂಧಿಸಿದಂತೆ ತಪ್ಪು ಸಂದೇಶ ನೀಡುತ್ತದೆ. ಏಕೆಂದರೆ ಅವರದು ಸಾರ್ವಜನಿಕ ನಂಬಿಕೆಗೆ ದ್ರೋಹ ಎಸಗಿದ ಸ್ಪಷ್ಟ ಪ್ರಕರಣವಾಗಿದೆ ಎಂದು ವಾದಿಸಿದೆ.

English summary
CBI on Friday opposed the bail plea of former minister P Chidambaram in the INX Media corruption case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X