ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್‌ನಿಂದ ಮಾಹಿತಿ ಕಳವು; ಎರಡು ಸಂಸ್ಥೆಗಳ ಮೇಲೆ ಸಿಬಿಐ ಕೇಸ್

|
Google Oneindia Kannada News

ನವದೆಹಲಿ, ಜನವರಿ 22: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ ಭಾರತೀಯ ಬಳಕೆದಾರರ ಮಾಹಿತಿ ಕಳವು ಮಾಡುತ್ತಿದ್ದ ಆರೋಪದಲ್ಲಿ ಕೇಂಬ್ರಿಜ್ ಅನಾಲಿಟಿಕಾ ಹಾಗೂ ಬ್ರಿಟನ್ ನ ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ಸಂಸ್ಥೆಗಳ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ಭಾರತದ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್ 5 ಕೋಟಿ ಅಲ್ಲ, 2.90 ಕೋಟಿ ಮಂದಿ ಮಾಹಿತಿ ಕಳವು: ಫೇಸ್ ಬುಕ್

2018ರಲ್ಲಿಯೇ ಈ ಎರಡೂ ಸಂಸ್ಥೆಗಳ ಮೇಲೆ ಸಿಬಿಐ ಪ್ರಾಥಮಿಕ ತನಿಖೆಗೆ ಮುಂದಾಗಿತ್ತು. ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್, ಫೇಸ್‌ಬುಕ್‌ನಿಂದ ಅಕ್ರಮಮವಾಗಿ ಸಂಗ್ರಹಿಸಿದ್ದ ಮಾಹಿತಿಗಳನ್ನು ಕೇಂಬ್ರಿಜ್ ಅನಾಲಿಟಿಕಾ ಪಡೆದುಕೊಂಡಿತ್ತು ಎಂದು ಆರೋಪಿಸಲಾಗಿದೆ.

CBI Files Case Against Cambridge Analytica And Global Science Research

ಈ ಹಿಂದೆಯೂ ಅಮೆರಿಕದ ಸುಮಾರು 87 ಮಿಲಿಯನ್ ಜನರ ಮಾಹಿತಿಗಳನ್ನು ಕೇಂಬ್ರಿಜ್ ಅನಾಲಿಟಿಕಾ ಅಕ್ರಮವಾಗಿ ಪಡೆದುಕೊಂಡಿದೆ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಆರೋಪಿಸಿದ್ದರು. ಆ ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕೆಂದು 2018ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಫೇಸ್‌ಬುಕ್‌ ಹಾಗೂ ಕೇಂಬ್ರಿಜ್ ಅನಾಲಿಟಿಕಾಗೆ ಪತ್ರ ಬರೆದಿತ್ತು. ಕ್ರಿಸ್ಟೊಫರ್ ವೈಲೀ ಎಂಬುವರು ಈ ಹಗರಣವನ್ನು ಬೆಳಕಿಗೆ ತಂದ ನಂತರ ಸಚಿವಾಲಯ ಈ ಕ್ರಮ ತೆಗೆದುಕೊಂಡಿತ್ತು. ಇದೀಗ ಈ ಎರಡೂ ಸಂಸ್ಥೆಗಳ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

English summary
CBI has filed a case against Cambridge Analytica and UK's Global Science Research Ltd for harvesting data of Facebook users in India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X