ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಮಾಜಿ ಮುಖ್ಯಸ್ಥ ರಾಕೇಶ್ ಆಸ್ತಾನಾಗೆ ಎಲ್ಲ ಆರೋಪಗಳಿಂದಲೂ ಕ್ಲೀನ್ ಚಿಟ್ ನೀಡಿದ ಸಿಬಿಐ

|
Google Oneindia Kannada News

ನವದೆಹಲಿ, ಫೆಬ್ರವರಿ 9: ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಟೆರ್ಲಿಂಗ್ ಬಯೋಟೆಕ್ ಎಂಬ ಔಷಧ ಕಂಪೆನಿಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ತನ್ನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

2018ರವರೆಗೂ ಹುದ್ದೆಯಿಂದ ತಮ್ಮನ್ನು ಕಿತ್ತುಹಾಕುವವರೆಗೂ ತೀವ್ರ ವಿವಾದ ಸೃಷ್ಟಿಸಿದ್ದ ರಾಕೇಶ್ ಆಸ್ತಾನಾ ಅವರಿಗೆ ಸಿಬಿಐ ನೀಡುತ್ತಿರುವ ಎರಡನೆಯ ಕ್ಲೀನ್ ಚಿಟ್ ಇದಾಗಿದೆ. ಪ್ರಸ್ತುತ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಮುಖ್ಯಸ್ಥರಾಗಿರುವ ರಾಕೇಶ್ ಆಸ್ತಾನಾ ಅವರನ್ನು ಮಾಂಸ ರಫ್ತುದಾರ ವ್ಯಾಪಾರಿ ಮೋಯಿನ್ ಖುರೇಷಿಗೆ ಸಂಬಂಧಿಸಿದ ಮತ್ತೊಂದು ಲಂಚ ಪ್ರಕರಣದಲ್ಲಿ ಕೂಡ ದೋಷಮುಕ್ತಗೊಳಿಸಿ ಸಿಬಿಐ ಕಳೆದ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು.

ಲಂಚ ಪ್ರಕರಣ: ಸಿಬಿಐ ಮಾಜಿ ವಿಶೇಷ ನಿರ್ದೇಶಕ ಆಸ್ತಾನಾಗೆ ಕ್ಲೀನ್‌ಚಿಟ್ಲಂಚ ಪ್ರಕರಣ: ಸಿಬಿಐ ಮಾಜಿ ವಿಶೇಷ ನಿರ್ದೇಶಕ ಆಸ್ತಾನಾಗೆ ಕ್ಲೀನ್‌ಚಿಟ್

ಕಳೆದ ವಾರ ಸಿಬಿಐ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ಆರ್‌ಕೆ ಶುಕ್ಲಾ ಅವರು ರಾಕೇಶ್ ಆಸ್ತಾನಾ ಮತ್ತು ಇತರೆ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ಕಡತಕ್ಕೆ ಜನವರಿ ಮಧ್ಯಭಾಗದಲ್ಲಿ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದೆ ಓದಿ.

ಡೈರಿಯಲ್ಲಿ ಸಿಕ್ಕಿದ್ದ ಮಾಹಿತಿ

ಡೈರಿಯಲ್ಲಿ ಸಿಕ್ಕಿದ್ದ ಮಾಹಿತಿ

2017ರ ಆಗಸ್ಟ್ 30ರಂದು ಮೂವರು ಅಧಿಕಾರಿಗಳು, ಸ್ಟೆರ್ಲಿಂಗ್ ಬಯೋಟೆಕ್ ಮತ್ತು ಅಪರಿಚಿತ ಸಾರ್ವಜನಿಕ ಸೇವೆಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಸಿಬಿಐ ದಾಖಲಿಸಿತ್ತು. 2011ರಲ್ಲಿ ಆದಾಯ ತೆರಿಗೆ ಇಲಾಖೆಯು ಸ್ಟೆರ್ಲಿಂಗ್ ಬಯೋಟೆಕ್‌ನ ಮಾಲೀಕರಾದ ಚೇತನ್ ಮತ್ತು ನಿತಿನ್ ಸಂಡೇಸರ ಸಹೋದರರ ಕಚೇರಿ ಮತ್ತು ನಿವಾಸದ ಮೇಲೆ ನಡೆಸಿದ ದಾಳಿಯ ವೇಳೆ ದೊರೆತ ಡೈರಿ ಆಧಾರದಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಆಸ್ತಾನಾ ಈಗ BSF ಡಿಜಿಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಆಸ್ತಾನಾ ಈಗ BSF ಡಿಜಿ

ಅಲೋಕ್ ವರ್ಮಾ ಆರೋಪ

ಅಲೋಕ್ ವರ್ಮಾ ಆರೋಪ

ಡೈರಿಯಲ್ಲಿ ದಾಖಲಾಗಿದ್ದ ಸಂಗತಿಗಳ ಆಧಾರದಲ್ಲಿ ರಾಕೇಶ್ ಆಸ್ತಾನಾ ಅವರು ಸಂಡೇಸರ ಸಹೋದರರಿಂದ 4 ಕೋಟಿ ರೂ ಲಂಚ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರೋಪಿಸಿದ್ದರು. ಡೈರಿಯಲ್ಲಿ ಆಸ್ತಾನಾ ಹೆಸರಿನ ಮುಂದೆ 12 ಸಂಖ್ಯೆಗಳನ್ನು ಬರೆಯಲಾಗಿತ್ತು. ಆದರೆ ಎಲ್ಲಿಯೂ ಆ ರೀತಿಯ ಬ್ಯಾಂಕ್ ಖಾತೆಗಳಿಲ್ಲ. ಮೂರು ವರ್ಷದ ತನಿಖೆಯಲ್ಲಿ ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ಸೂಕ್ತ ಪುರಾವೆಗಳ ಕೊರತೆಯು ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಚ್ಚುವುದು ಒಳಿತು ಎಂದು ತನಿಖಾ ತಂಡ ಅಭಿಪ್ರಾಯಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ಆಕ್ಷೇಪದ ನಡುವೆಯೂ ನೇಮಕ

ಆಕ್ಷೇಪದ ನಡುವೆಯೂ ನೇಮಕ

2017ರಲ್ಲಿ ಅಲೋಕ್ ವರ್ಮಾ ಅವರು ವಿಶೇಷ ನಿರ್ದೇಶಕರನ್ನಾಗಿ ಆಸ್ತಾನಾ ಅವರನ್ನು ನೇಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.


ಸಂಡೇಸರ ಸಹೋದರರ ಡೈರಿಯಲ್ಲಿ ಆಸ್ತಾನಾ ಅವರ ಹೆಸರನ್ನು 23 ಬಾರಿ ಉಲ್ಲೇಖಿಸಲಾಗಿದೆ. ಸುಮಾರು 4ಕೋಟಿ ರೂ ನೀಡಿರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಅವರನ್ನು ಉನ್ನತ ಹುದ್ದೆಗೆ ನೇಮಿಸುವುದು ಸರಿಯಲ್ಲ ಎಂದು ಅವರು ಮುಖ್ಯ ವಿಚಕ್ಷಣಾ ಆಯುಕ್ತರಿಗೆ ದೂರು ನೀಡಿದ್ದರು. ಅವರ ಆಕ್ಷೇಪದ ನಡುವೆಯೂ ಆಸ್ತಾನಾ ನೇಮಕವಾಗಿತ್ತು. ಬಳಿಕ ಸಿಬಿಐನ ಅಧಿಕಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ಅನೇಕ ಬಾರಿ ಮಾತಿನ ಚಕಮಕಿ ನಡೆದು ಅದು ಬಹಿರಂಗವಾಗಿತ್ತು.

ವಿವಾದಿತ ಅಧಿಕಾರಿ ರಾಕೇಶ್ ಆಸ್ತಾನಾಗೆ ಹೆಚ್ಚುವರಿ ಅಧಿಕಾರವಿವಾದಿತ ಅಧಿಕಾರಿ ರಾಕೇಶ್ ಆಸ್ತಾನಾಗೆ ಹೆಚ್ಚುವರಿ ಅಧಿಕಾರ

ಮತ್ತೆ ಸಿಬಿಐಗೆ ಮರಳುತ್ತಾರಾ ಆಸ್ತಾನಾ?

ಮತ್ತೆ ಸಿಬಿಐಗೆ ಮರಳುತ್ತಾರಾ ಆಸ್ತಾನಾ?

ಆದರೆ ಮರು ವರ್ಷ ಇದೇ ಪ್ರಕರಣವನ್ನು ಉಲ್ಲೇಖಿಸಿದ್ದ ವಿಚಕ್ಷಣಾ ಆಯೋಗ ಆಸ್ತಾನಾ ಅವರನ್ನು ಸಿಬಿಐ ಹುದ್ದೆಯಿಂದ ಕಿತ್ತುಹಾಕಲು ಆದೇಶಿಸಿತ್ತು. ನಂತರ ಆಸ್ತಾನಾ ಅವರನ್ನು ಹುದ್ದೆಯಲ್ಲಿಯೇ ಮುಂದುವರಿಸಿ ಅವರ ಅಧಿಕಾರಗಳನ್ನು ಮೊಟಕುಗೊಳಿಸಲಾಗಿತ್ತು. ಈಗ ಎಲ್ಲ ಆರೋಪಗಳಿಂದಲೂ ಮುಕ್ತರಾಗಿರುವ ಆಸ್ತಾನಾ ಅವರನ್ನು ಪುನಃ ಸಿಬಿಐಗೆ ನೇಮಕ ಮಾಡಲಾಗುತ್ತದೆಯೇ ಎನ್ನುವುದು ಕುತೂಹಲ ಮೂಡಿಸಿದೆ.

English summary
CBI has issues a clean chit to its former special director Rakesh Asthana of allegations of taking bribe from Sterling Biotech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X