ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ

|
Google Oneindia Kannada News

Recommended Video

ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ | Oneindia Kannada

ನವದೆಹಲಿ, ಜನವರಿ 11: ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸಿಬಿಐ ಮುಖ್ಯಸ್ಥರ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುತ್ತಿದ್ದಂತೆಯೇ ಅಲೋಕ್ ವರ್ಮಾ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ತಮ್ಮ ವಿರುದ್ಧದ ಸುಳ್ಳು ಆರೋಪಗಳ ಅಡಿಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.

3 ತಿಂಗಳ ಬಳಿಕ ಕಚೇರಿಗೆ ಮರಳಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ3 ತಿಂಗಳ ಬಳಿಕ ಕಚೇರಿಗೆ ಮರಳಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ

ಗುರುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಸಿಬಿಐ ಯಾವುದೇ ಬಾಹ್ಯ ಪ್ರಭಾವಗಳಿಲ್ಲದೆ ಕೆಲಸ ನಿರ್ವಹಿಸಬೇಕು. ನಾನು ಸಂಸ್ಥೆಯ ಸಮಗ್ರತೆಯನ್ನು ಎತ್ತಿಹಿಡಿಯಲು ಹೋರಾಡುವಾಗ ಅದನ್ನು ಹಾಳುಗೆಡವಲು ಪ್ರಯತ್ನಗಳು ನಡೆಯುತ್ತಿದ್ದವು. ಇದನ್ನು ಅ.23ರ ಕೇಂದ್ರ ಸರ್ಕಾರ ಹಾಗೂ ಸಿವಿಸಿಯ ಆದೇಶದಲ್ಲಿಯೂ ನೋಡಬಹುದು. ಆ ಆದೇಶ ಕಾನೂನಿನ ಚೌಕಟ್ಟಿಗೆ ಬರಲಿಲ್ಲ ಮತ್ತು ಅದನ್ನು ನಿರ್ಲಕ್ಷಿಸಲಾಗಿತ್ತು' ಎಂದು ಅಲೋಕ್ ವರ್ಮಾ ಆರೋಪಿಸಿದ್ದಾರೆ.

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ... ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ...

cbi chief alok verma breaks his silence tried to protect the integrity of institution

ತಮ್ಮನ್ನು ವಜಾಗೊಳಿಸಿರುವ ನಿರ್ಧಾರ ಖೇದನೀಯ ಎಂದಿರುವ ವರ್ಮಾ, 'ನನ್ನ ವಿರುದ್ಧ ಹಗೆತನ ಸಾಧಿಸುತ್ತಿರುವ ಏಕೈಕ ವ್ಯಕ್ತಿ ಮಾಡಿರುವ ಸುಳ್ಳು. ರುಜುವಾತಾಗದ ಮತ್ತು ನಿಷ್ಪ್ರಯೋಜಕ ಆರೋಪಗಳ ಆಧಾರದಲ್ಲಿ ಸಮಿತಿಯು ನನ್ನನ್ನು ಬೇರೆ ಹುದ್ದೆಗೆ ವರ್ಗಾಯಿಸಲಾಗಿದೆ' ಎಂದು ದೂರಿದ್ದಾರೆ.

English summary
CBI Director Alok Verma breaks his silence for the first time said that, his removal decision has been taken on false allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X