ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಡಿಟಿವಿ ರಾಯ್ ದಂಪತಿ ವಿರುದ್ಧ ಕೇಸು ದಾಖಲಿಸಿದ ಸಿಬಿಐ

|
Google Oneindia Kannada News

ನವದೆಹಲಿ, ಆಗಸ್ಟ್ 21: ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮ ಉಲ್ಲಂಘನೆ ಆರೋಪದ ಮೇಲೆ ನ್ಯೂ ಡೆಲ್ಲಿ ಟೆಲಿವಿಷನ್(ಎನ್ಡಿಟಿವಿ) ಪ್ರವರ್ತಕ ಪ್ರಣಯ್ ರಾಯ್ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ವಿದೇಶಕ್ಕೆ ತೆರಳದಂತೆ ಎನ್‌ಡಿಟಿವಿ ಸಂಸ್ಥಾಪಕರಿಗೆ ನಿರ್ಬಂಧ ವಿದೇಶಕ್ಕೆ ತೆರಳದಂತೆ ಎನ್‌ಡಿಟಿವಿ ಸಂಸ್ಥಾಪಕರಿಗೆ ನಿರ್ಬಂಧ

ಎನ್ಡಿಟಿವಿಯ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ರಾಯ್, ಸಿಇಒ ವಿಕ್ರಮಾದಿತ್ಯ ಚಂದ್ರ, ಕೆಲವು ಸರ್ಕಾರಿ ಅಧಿಕಾರಿಗಳನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಸಿಬಿಐ ತಂಡವೊಂದು ಬುಧವಾರದಂದು ಸಿಇಒ ವಿಕ್ರಮಾದಿತ್ಯ ಮನೆ, ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

CBI books NDTVs Prannoy Roy,others alleged for violation of FDI rules

ಎನ್ಡಿಟಿಎಯ ಅಂಗ ಸಂಸ್ಥೆ ಲಂಡನ್ ನಲ್ಲಿ ಕಚೇರಿ ಹೊಂದಿರುವ ನೆಟ್ವರ್ಕ್ ಪಿಎಲ್ ಸಿ ಸಂಸ್ಥೆಯಲ್ಲಿ 163.43 ಮಿಲಿಯನ್ ಡಾಲರ್ ಗಳನ್ನು ಜಿಇ ಅಂಗ ಸಂಸ್ಥೆ ಎನ್ ಸಿಬಿಯು ಎಫ್ ಡಿಐ ಮೂಲಕ ಹೂಡಿಕೆ ಮಾಡಿತ್ತು. 2004ರಿಂದ 2010ರಲ್ಲಿ ಹಾಲೆಂಡ್, ಯುನೈಟೆಡ್ ಕಿಂಗ್ಡಮ್, ದುಬೈ, ಮಲೇಷಿಯಾ, ಮಾರಿಷಸ್ ..ಮುಂತಾದ ದೇಶಗಳಲ್ಲಿ ಎನ್ಡಿಟಿವಿ ಸುಮಾರು 32ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ದೇಶ ವಿದೇಶಗಳಲ್ಲಿ ಹೊಂದಿದ್ದು, ಈ ಮೂಲಕ ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಎಫ್ ಐ ಪಿಬಿ ಮೂಲಕ ಅನುಮತಿ ಪಡೆದು ಎಫ್ ಡಿಐ ನಿಯಮಗಳನ್ನು ಎನ್ಎನ್ ಪಿಎಲ್ ಸಿ ಮುರಿದಿದೆ ಎಂದು 2009ರಲ್ಲಿ ಸಿಬಿಐ ಆರೋಪಿಸಿತ್ತು.

English summary
CBI has booked NDTV's Prannoy Roy, his wife Radhika Roy & others alleged for violation of FDI rules during 2007-09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X