ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿಬಿಐ ಮನವಿ

|
Google Oneindia Kannada News

ನವದೆಹಲಿ, ಜೂನ್ 11: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಾವಿರಾರು ಕೋಟಿ ವಂಚಿಸಿ ಪಲಾಯನಗೈದಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐ ಇಂಟರ್‌ಪೋಲ್‌ಗೆ ಕೋರಿದೆ.

ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ ಮೋದಿ ಅಡಗಿರುವ ಲಿಯಾನ್‌ದಿಂದ ಅಲ್ಲಿನ ಪೊಲೀಸರು ಸಹಕಾರ ಒಪ್ಪಂದದ ಆಧಾರದಲ್ಲಿ ಮೋದಿಯನ್ನು ಬಂಧಿಸಿ ದೇಶಕ್ಕೆ ಗಡಿಪಾರು ಮಾಡಬಹುದು ಎಂದು ಸಿಬಿಐ ತನ್ನ ಪತ್ರದಲ್ಲಿ ಹೇಳಿದೆ.

ಬ್ರಿಟನ್‌ನ ರಾಜಕೀಯ ಆಶ್ರಯ ಕೋರಿದ ನೀರವ್ ಮೋದಿಬ್ರಿಟನ್‌ನ ರಾಜಕೀಯ ಆಶ್ರಯ ಕೋರಿದ ನೀರವ್ ಮೋದಿ

ಬ್ಯಾಂಕ್‌ಗಳಿಂದ ಅಕ್ರಮವಾಗಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ನೀರವ್ ಮೋದಿ, ಆತನ ಸಂಬಂಧಿ ಮೆಹುಲ್ ಚೋಕ್ಸಿ, ಪತ್ನಿ ಅಮಿ, ಸಹೋದರ ನಿಶಾಲ್ ಮುಂತಾದವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಎಲ್ಲ ಆರೋಪಿಗಳೂ ಜನವರಿ ಮೊದಲ ವಾರದಲ್ಲಿ ದೇಶದಿಂದ ಪರಾರಿಯಾಗಿದ್ದರು.

cbi asked interpol to issue red corner notice against nirav modi

ಸಿಬಿಐ ಇತ್ತೀಚೆಗಷ್ಟೇ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಪ್ರತ್ಯೇಕವಾಗಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಮೋದಿಯನ್ನು ವಾಪಸ್ ಕರೆತಂದು ವಿಚಾರಣೆಗೆ ಒಳಪಡಿಸಲು ಇಂಟರ್‌ಪೋಲ್‌ಅನ್ನು ಸಿಬಿಐ ಸಂಪರ್ಕಿಸಿದೆ.

ನಕಲಿ ಎಲ್ಒಯುಗಳನ್ನು ಬಳಸಿಕೊಂಡು ನೀರವ್ ಮೋದಿ 6,498 ಕೋಟಿ ರೂ. ವಂಚಿಸಿದ್ದರೆ, ಆತನ ಚಿಕ್ಕಪ್ಪ ಚೋಕ್ಸಿ 7,080 ಕೋಟಿ ವಂಚಿಸಿದ್ದಾರೆ ಎಂದು ಸಿಬಿಐ ಚಾರ್ಜ್‌ಷೀಟ್‌ನಲ್ಲಿ ಆರೋಪಿಸಿದೆ.

English summary
CBI has written to the Interpol to issue a Red Corner Notice against absconding billionaire Nirav Modi to bring him back to country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X