ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ವಿವಾದ: ರಾಕೇಶ್ ಅಸ್ಥಾನಾ ವಿರುದ್ಧದ ಕೇಸುಗಳೇ ನಾಪತ್ತೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ನಡುವಿನ ಜಗಳ ಸಿಬಿಐನ ಗೌರವವನ್ನು ಬೀದಿಗೆ ತಂದಿದೆ.

ಅಸ್ತಾನಾಗೂ ನನ್ನ ಮಗನಿಗೂ ಯಾವ ದೋಸ್ತಿ ಇಲ್ಲ ಎಂದ 'ರಾ' ಮಾಜಿ ಅಧಿಕಾರಿಅಸ್ತಾನಾಗೂ ನನ್ನ ಮಗನಿಗೂ ಯಾವ ದೋಸ್ತಿ ಇಲ್ಲ ಎಂದ 'ರಾ' ಮಾಜಿ ಅಧಿಕಾರಿ

ಕೇವಲ ಮೂರು ತಿಂಗಳ ಹಿಂದೆ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧ ಆರು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ತಿಳಿಸಿತ್ತು. ಆದರೆ, ಈಗ ಆಸ್ಥಾನಾ ಅವರ ವಿರುದ್ಧ ಇರುವುದು ಕೇವಲ ಒಂದೇ ಒಂದು ಪ್ರಕರಣ ಎಂದು ಮಾಹಿತಿ ನೀಡಿದೆ ಎಂಬುದಾಗಿ 'ದಿ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.

ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ

ಪತ್ರಿಕೆ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಲ್ಲಿ ಸಿಬಿಐ, ಮೋಯಿನ್ ಖುರೇಷಿ ಲಂಚ ಪ್ರಕರಣದಲ್ಲಿ ಹೈದರಾಬಾದ್ ಉದ್ಯಮಿ ಸನಾ ಸತೀಶ್ ಬಾಬು ಅವರಿಂದ ಮೂರು ಕೋಟಿ ರೂ. ಪಡೆದುಕೊಂಡ ಆರೋಪದಡಿ ಅಕ್ಟೋಬರ್ 15ರಂದು ದಾಖಲಾದ ಎಫ್‌ ಐಆರ್ ಹೊರತುಪಡಿಸಿದರೆ ಬೇರೆ ಯಾವ ಪ್ರಕರಣವನ್ನೂ ತನಿಖೆ ನಡೆಸುತ್ತಿಲ್ಲ ಎಂದು ಸಿಬಿಐ ತಿಳಿಸಿದೆ.

cases against cbi special director rakesh asthana alok verma rti

ಸುದ್ದಿಗೋಷ್ಠಿಯಲ್ಲಿ ಸಿಬಿಐ ಆರು ಪ್ರಕರಣಗಳ ತನಿಖೆ ನಡೆಯುತ್ತಿರುವುದಾಗಿ ತಿಳಿಸಿತ್ತು. ಅವುಗಳ ವಿವರ ನೀಡುವಂತೆ ಪತ್ರಿಕೆ ಅಕ್ಟೋಬರ್ 23ರಂದು ಆರ್ ಟಿಐ ಅರ್ಜಿ ಸಲ್ಲಿಸಿತ್ತು.

ಬೆಕ್ಕುಗಳಂತೆ ಕಿತ್ತಾಡಿಕೊಂಡ ಸಿಬಿಐ ಅಧಿಕಾರಿಗಳು: ಕೇಂದ್ರದ ಆರೋಪಬೆಕ್ಕುಗಳಂತೆ ಕಿತ್ತಾಡಿಕೊಂಡ ಸಿಬಿಐ ಅಧಿಕಾರಿಗಳು: ಕೇಂದ್ರದ ಆರೋಪ

ನವೆಂಬರ್ 2ರಂದು ಪ್ರತಿಕ್ರಿಯೆ ನೀಡಿದ್ದ ಸಿಬಿಐ, ಆಸ್ಥಾನಾ ಅವರ ವಿರುದ್ಧದ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 120 ಬಿ (ಅಪರಾಧ ಸಂಚು) ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿಯನ್ನು ಮಾತ್ರ ಒದಗಿಸಿದೆ.

English summary
RTI query revealed that CBI is invistigating only one case against special director Rakesh Asthana on receiving Rs 3 crores from Sana Satish Babu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X