ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತುಬ್ ಮಿನಾರ್ ಕೆಳಗಿರುವ 27 ಹಿಂದೂ, ಜೈನ ದೇವಾಲಯ ಮರುಸ್ಥಾಪನೆಗೆ ಅರ್ಜಿ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಪ್ರಸಿದ್ಧ ಕುತುಬ್ ಮಿನಾರ್ ಕೆಳಗೆ 27 ಹಿಂದೂ, ಜೈನ ದೇಗುಲಗಳಿದ್ದು ಅವುಗಳನ್ನು ಮರುಸ್ಥಾಪಿಸಬೇಕು ಹಾಗೂ ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರಸ್ತುತ ಕುತುಬ್ ಮಿನಾರ್ ಇರುವ ಸ್ಥಳದಲ್ಲಿ ಈ ಹಿಂದೆ ಜೈನ ತೀರ್ಥಂಕರರ, ವಿಷ್ಣು, ಗಣೇಶ, ಶಿವ, ಗೌರಿ, ಸೂರ್ಯದೇವ, ಹನುಮನ ದೇಗುಲ ಸೇರಿದಂತೆ ಸುಮಾರು 27 ಹಿಂದೂ ದೇಗುಲಗಳಿದ್ದು, ಇವುಗಳನ್ನು ಕುತುಬ್ ದಿನ್ ಐಬಕ್ ಧ್ವಂಸಗೊಳಿಸಿ ಅಲ್ಲಿ ಮಿನಾರ್ ನಿರ್ಮಿಸಿದ್ದ. ಹೀಗಾಗಿ ಈ ದೇಗುಲಗಳನ್ನು ಮರು ಸ್ಥಾಪಿಸಿ ಅಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

'ಜನರಿಂದ ಲೂಟಿ ಮಾಡಿದ ಹಣದಿಂದ ಕೆಂಪುಕೋಟೆ, ಕುತುಬ್ ಮಿನಾರ್ ನಿರ್ಮಾಣ''ಜನರಿಂದ ಲೂಟಿ ಮಾಡಿದ ಹಣದಿಂದ ಕೆಂಪುಕೋಟೆ, ಕುತುಬ್ ಮಿನಾರ್ ನಿರ್ಮಾಣ'

ದೇಗುಲದ ದುರಸ್ತಿ ಕೆಲಸ, ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಪೂಜೆ, ದರ್ಶನದ ವಿಚಾರದಲ್ಲಿ ಕೇಂದ್ರ ಸರ್ಕಾರ (ಸಂಸ್ಕೃತಿ ಇಲಾಖೆ) ಮತ್ತು ಭಾರತೀಯ ಪ್ರಾಚ್ಯವಸ್ತು ಇಲಾಖೆ ಮಧ್ಯ ಪ್ರವೇಶಿಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಜೊತೆಗೆ ಈ ದೇಗುಲಗಳಿಗೆ ಟ್ರಸ್ಟ್ ಸ್ಟಾಪಿಸಿ ದೇವಾಲಯ ಸಂಕೀರ್ಣದ ನಿರ್ವಹಣೆ ಮತ್ತು ಆಡಳಿತವನ್ನು ಟ್ರಸ್ಟ್ ಗೆ ವರ್ಗಾಯಿಸುವಂತೆ ಮನವಿಯಲ್ಲಿ ಕೋರಲಾಗಿದೆ.

Case Filed In Saket Court For Restoration Of Hindu Jain Deities At Qutub Minar

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶೆ ನೇಹಾ ಶರ್ಮಾ, ಡಿ.24ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.

English summary
The case has been filed in the Saket district court seeking restoration of Hindu and Jain deities and the right to worship within the Qutub Minar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X