ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಬಾ ಕಾ ಢಾಬಾ' ಮಾಲೀಕನಿಗೆ ಮೋಸ, ಯೂಟ್ಯೂಬರ್‌ ವಿರುದ್ಧ ಪ್ರಕರಣ

|
Google Oneindia Kannada News

ನವದೆಹಲಿ, ನವೆಂಬರ್ 07: ಬಾಬಾ ಕಾ ಢಾಬಾ ಆಹಾರ ಮಳಿಗೆಯ ಮಾಲೀಕರಿಗೆ ಮೋಸ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಢಾಬಾ ಮಾಲೀಕರಿಗೆ ಸ್ಪಿನ್ನರ್ ಅಶ್ವಿನ್ ಒಂದು ಟ್ವೀಟ್‌ನಿಂದಾಗಿ ಮುಖದಲ್ಲಿ ಮಂದಹಾಸ ಮೂಡಿತ್ತು. ಸಾಕಷ್ಟು ಮಂದಿ ಆರ್ಥಿಕ ಸಹಾಯ ಮಾಡಿದ್ದರು.

ಮಾಲೀಕರ ಹೆಸರಲ್ಲಿ ಹಣ ಪಡೆದು, ಅದನ್ನು ಮಾಲೀಕರಿಗೆ ನೀಡದೆ ವಂಚನೆ ಮಾಡಿದ್ದಾನೆ ಈ ಕುರಿತು ಮೋಸ ಪ್ರಕರಣ ದಾಖಲಾಗಿದೆ.

Case Filed Against Delhi YouTuber On Baba Ka Dhaba Owners Complaint

ಯೂಟ್ಯೂಬ್ ಬ್ಲಾಗರ್ ಗೌರವ್ ವಾಸನ್ ಕಾಂತ ಪ್ರಸಾದ್ (80) ಅವರ ಮೇಲೆ ಒಂದು ವಿಡಿಯೋ ಚಿತ್ರೀಕರಣ ಮಾಡಿದ್ದರು. ಲಾಕ್‌ಡೌನ್ ಶುರುವಾದಾಗಿನಿಂದ ಆಹಾರ ಮಳಿಗೆಯನ್ನು ಬಂದ್ ಮಾಡಿದ್ದ ಕಾರಣ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು.

ಕಾಂತ ಪ್ರಸಾದ್ ಅಕ್ಟೋಬರ್ 31 ರಂದು ವಾಸನ್ ವಿರುದ್ಧ ದೂರು ನೀಡಿದ್ದಾರೆ. ದಾಖಲಿಸಿದ್ದಾರೆ.ಯಾವುದೇ ಮಾಹಿತಿ ನೀಡದೆ ಸಾಕಷ್ಟು ಮಂದಿಯಿಂದ ಬಂದಿದ್ದ ಸಹಾಯ ರೂಪದ ಹಣವನ್ನು ಬ್ಲಾಗರ್ ಪಡೆದಿದ್ದ. ಆದರೆ ವಾಸನ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ವಾಸನ್ ಅಕ್ಟೋಬರ್ 7 ರಿಂದ 10ರವರೆಗಿನ ಬ್ಯಾಂಕ್ ಸ್ಟೇಟ್‌ಮೆಂಟ್ ಮಾತ್ರ ನೀಡಿದ್ದು, ಅದಾದ ಬಳಿಕ ಅವರ ಖಾತೆಗೆ ಹಣ ಜಮಾ ಆಗಿದೆ ಎಂದು ವಕೀಲರು ತಿಳಿಸಿದ್ದಾರೆ.ಹಾಗೆಯೇ ಅಕ್ಟೋಬರ್ 26ರವರೆಗಿನ ಸ್ಟೇಟ್‌ಮೆಂಟ್ ನೀಡಬೇಕಾಗಿ ಒತ್ತಾಯಿಸಿದ್ದಾರೆ. ಶೀಘ್ರ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ನೀಡುವುದಾಗಿ ವಾಸನ್ ತಿಳಿಸಿದ್ದಾರೆ.

English summary
A police case has been filed against a Delhi-based YouTube blogger for allegedly withdrawing money donated by people for the owner of "Baba Ka Dhaba", whose ordeal amid the coronavirus lockdown was shared widely on social media, leading to donations from well-wishers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X