ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EPFOದಿಂದ ನೌಕರರಿಗೆ ವಸತಿಭಾಗ್ಯ ಕೈಗೂಡುವುದೇ?

By Srinath
|
Google Oneindia Kannada News

Can EPFO deliver housing scheme to 5 crore members- Minister Oscar Fernandes
ನವದೆಹಲಿ, ಜ.14: ದೇಶದ 5 ಕೋಟಿ ಮಂದಿ ನೌಕರರ ಸುದೀರ್ಘಾವಧಿ ಠೇವಣಿಗಳನ್ನು ಮಡಿಲಲ್ಲಿಟ್ಟುಕೊಂಡು ತಕ್ಕ ಬಡ್ಡಿ ದರವನ್ನು ನೀಡಲು ಏದುಸಿರುಬಿಡುತ್ತಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ EPFO ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಆದರೆ ಇದನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತದೋ ಕಾಲವೇ ನಿರ್ಣಯಿಸಬೇಕು.

ಏನಪ್ಪಾ ಅಂದರೆ 14 ವರ್ಷಗಳ ಹಿಂದೆ ಶೇ. 12ರಷ್ಟು ಬಡ್ಡಿ ದರ ನೀಡಿ, ತದನಂತರವೂ ನಾಲ್ಕು ವರ್ಷ ಕಾಲ ಶೇ. 9.5ರಷ್ಟು ಬಡ್ಡಿ ನೀಡಿ ಸೈ ಎನಿಸಿಕೊಂಡಿದ್ದ Employees' Provident Fund Organisation, ಇತ್ತೀಚೆಗೆ ತನ್ನ 5 ಕೋಟಿ ಸದಸ್ಯರಿಗೆ ಅಲ್ಪ ಪ್ರಮಾಣದ ಬಡ್ಡಿಯನ್ನಷ್ಟೇ ಕೊಡಲು ಶಕ್ಯವಾಗಿದೆ. ಚುನಾವಣೆ ವರ್ಷದಲ್ಲಾದರೂ ತುಸು ಹೆಚ್ಚು ನೀಡುತ್ತಾರೆ ಎಂಬ ಆಸೆಯೂ ಕಮರಿದೆ.

ಆದರೆ ಇದೀಗ ತನ್ನ ಸದಸ್ಯರ ಕ್ಷೇಮಾಭ್ಯದಯ ಬಯಸಿ EPFO ಸದ್ಯರಿಗಾಗಿ ವಸತಿ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಆಲೋಚಿಸುತ್ತಿದೆ. ಈ ಬಗ್ಗೆ ರಾಜ್ಯದವರೇ ಆದ ಕೇಂಧ್ರ ಕಾರ್ಮಿಕ ಸಚಿವ ಅಸ್ಕರ್ ಫರ್ನಾಂಡಿಸ್ ಅವರು EPFO ಸದ್ಯರಿಗೆ ವಸತಿ ಭಾಗ್ಯವನ್ನು ಕಲ್ಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಪ್ರಸ್ತಾವನೆಯ ಪ್ರಕಾರ, EPFO ಸದಸ್ಯತ್ವ ಪಡೆದ ಉದ್ಯೋಗಿಗಳು ತಮ್ಮ ಮಾಸಿಕ ವೇತನದಲ್ಲಿ ಮೂಲ ವೇತನದ (basic wage = basic pay + dearness allowance) ಶೇ. 10ರಷ್ಟನ್ನು ಹೆಚ್ಚುವರಿಯಾಗಿ ಸಂಸ್ಥೆಗೆ ತಿಂಗಳಾ ತಿಂಗಳಾ ಕಟ್ಟುತ್ತಾ ಬಂದರೆ ಮುಂದೊಂದು ದಿನ ಅಂತಹ ಸದಸ್ಯರಿಗೆ ವಸತಿ ಭಾಗ್ಯ ಕಲ್ಪಿಸುವ ಇರಾದೆಯಿದೆ.

ಇದು ಈಗಾಗಲೇ ಜಾರಿಯಲ್ಲಿರುವ ಶೇ. 12ರಷ್ಟು ಕಡ್ಡಾಯ ಕಡಿತದ (PF contribution) ಜತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ಮೊತ್ತವಾಗಿದೆ. ಅಂದರೆ ಈ ಶೇ. 10ರಷ್ಟು ಮೊತ್ತವನ್ನು ಬಳಸಿಕೊಂಡು ಮುಂದೆ ಫಲಾನುಭವಿಗೆ ಒಂದು ಸೂರು ಕಲ್ಪಿಸುವುದು (housing facility) ಯೋಜನೆಯ ಗುರಿಯಾಗಿದೆ. ಈ ಹಿಂದೆ ಒಮ್ಮೆ ಇಂತಹ ಪ್ರಯತ್ನ ಕೈಗೆತ್ತಿಕೊಳ್ಳಲಾಗಿತ್ತಾದರೂ ಅದು ಮುಂದವರಿಯಲಿಲ್ಲ.

EPFO ಸಂಸ್ಥೆಯಲ್ಲಿ ನೌಕರರು ತುಂಬುತ್ತಾ ಬಂದಿರುವ 5 ಲಕ್ಷ ಕೋಟಿ ರೂಪಾಯಿ ಠೇವಣಿಯಿದೆ. ಇದಕ್ಕೆ ಪ್ರತಿ ವರ್ಷ 60,000 ಕೋಟಿ ರೂ. ಜಮೆಯಾಗುತ್ತಾ ಇದೆ. ಈ ಪಾಟಿ ಹಣ ಕೊಳೆಯುತ್ತಾ ಇರುವಾಗ ಸಂಸ್ಥೆಯು ತನ್ನ ಸದಸ್ಯರಿಗಾಗಿ ಖಂಡಿತಾ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು. ಆದರೆ ಸಚಿವ ಅಸ್ಕರ್ ಫರ್ನಾಂಡಿಸ್ ಅವರದ್ದು ಇದು ಚುನಾವಣಾ ಪ್ರಸ್ತಾವನೆಯಾಗದೆ ವಾಸ್ತವವಾಗಿ ಕೈಗೂಡುವುದೇ? ಎಂಬುದು ಅದೇ ಕೋಟಿ ಪ್ರಶ್ನೆಯಾಗಿದೆ!

English summary
Can EPFO deliver housing scheme to its 5 crore members. The Labour Minister Oscar Fernandes has mooted such an idea. Besides managing retirement funds, EPFO wants to introduce a scheme to provide housing to its over 5 crore subscribers on additional contribution of 10 percent by them from their basic wages every month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X