ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೇಂದ್ರ ಸಂಪುಟ ಪುನಾರಚನೆ ಬಿಜೆಪಿಗೆ ಲಾಭವೇ ಹೊರತೂ ದೇಶಕ್ಕಲ್ಲ"

|
Google Oneindia Kannada News

ನವದೆಹಲಿ, ಜುಲೈ 07: ಕೇಂದ್ರ ಸರ್ಕಾರ ಮಾಡಿರುವ ಸಂಪುಟ ಪುನಾರಚನೆಯು ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆಯದಾಗಿದೆ ಎಂದು ಮಕ್ಕಳ ನಿಧಿ ಮಯಂ ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ ಹೇಳಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂಕಷ್ಟದ ಕಾಲದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನೆಡೆಸುವುದಕ್ಕೆ ಸಂಪುಟ ಪುನಾರಚನೆ ಮಾಡಬೇಕಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟ ಪುನಾರಚನೆ ಹಿಂದೆ ಈ ಉದ್ದೇಶ ಕಾಣುತ್ತಿಲ್ಲ ಎಂದಿದ್ದಾರೆ.

Full list: ಕರ್ನಾಟಕದ ನಾಲ್ವರು ಸೇರಿ 43 ಮಂದಿ ಪ್ರಮಾಣ ವಚನFull list: ಕರ್ನಾಟಕದ ನಾಲ್ವರು ಸೇರಿ 43 ಮಂದಿ ಪ್ರಮಾಣ ವಚನ

"ತಮಿಳುನಾಡಿಗೆ ಕೇಂದ್ರ ಸಚಿವರು ಸಿಕ್ಕಿದ್ದಾರೆ ಎಂದು ಸಂತೋಷವಾಗಿರಲು ಸಾಧ್ಯವಿಲ್ಲ. ದೇಶವು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸಿದೆ. ಈ ಪತನದಿಂದ ಚೇತರಿಸಿಕೊಳ್ಳಲು ಸಂಪುಟ ಪುನರ್ರಚನೆ ಮಾಡಬೇಕಾಗಿತ್ತು. ಆದರೆ ನಾಯಕರು, ಇತರ ಪಕ್ಷಗಳಿಂದ ಬಂದವರು, ಮುಂಬರುವ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ. ಬಿಜೆಪಿಗೆ ಅನುಕೂಲವಾಗಬಹುದು. ದೇಶಕ್ಕೆ ಏನು? "ಕಮಲ್ ಹಾಸನ್ ಆರೋಪಿಸಿದ್ದಾರೆ.

Cabinet Reshuffle Beneficial For The BJP, Not To Nation, Says Kamal Hassan

ಕೇಂದ್ರ ಸಂಪುಟಕ್ಕೆ 43 ಸಂಸದರ ಸೇರ್ಪಡೆ:

ನವದೆಹಲಿ ರಾಷ್ಟ್ರಪತಿ ಭವನದಲ್ಲಿ ಆಷಾಢ 16, 1943ನೇ ಶಖೆ ಬುಧವಾರ 6 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆರಂಭವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟಕ್ಕೆ 43 ನೂತನ ಸಚಿವರು ಸೇರ್ಪಡೆಯಾದರು. ಬುಧವಾರ ಕೇಂದ್ರ ಸಂಪುಟ ಸೇರಿದ 43 ಸಚಿವರ ಪೈಕಿ 15 ನೂತನ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಬಾಕಿ 28 ಸಚಿವರಿಗೆ ರಾಜ್ಯ ಖಾತೆಯ ಸ್ಥಾನಮಾನ ನೀಡಲಾಗುವುದು ಎಂದು ತಿಳಿದು ಬಂದಿದೆ.

English summary
Cabinet Reshuffle Beneficial For The BJP, Not To Nation, Says Kamal Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X