ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ವಂಚಕರ ಹತ್ತಿಕ್ಕಲು ಕಠಿಣ ಕಾನೂನು ರೂಪಿಸಿದ ಕೇಂದ್ರ

By Manjunatha
|
Google Oneindia Kannada News

ನವ ದೆಹಲಿ, ಮಾರ್ಚ್‌ 01: ಕೇಂದ್ರ ಸಚಿವ ಸಂಪುಟವು ಮಹತ್ತರವಾದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ (Fugitive Economic Offenders Bill) ಮತ್ತು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎಸ್‌ಎಫ್‌ಆರ್‌ಎ) ಮಸೂದೆಗೆ ಅಂಗೀಕಾರ ನೀಡಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಯ ಅನ್ವಯ, ವಂಚಿಸಿ ದೇಶಬಿಟ್ಟು ಪಲಾಯನ ಗೈಯುವವರ ಆಸ್ತಿಯನ್ನು ಸರ್ಕಾರವು ಮುಟ್ಟುಗೋಲುಹಾಕಿಕೊಳ್ಳಲಾಗುವುದು. ಇಷ್ಟೆ ಅಲ್ಲದೆ ಬೇನಾಮಿ ಆಸ್ತಿ ಮತ್ತು ಉದ್ದೇಶಪೂರ್ವಕವಾಗಿ ಬಚ್ಚಿಟ್ಟ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಸಾಲ ಮಾಡಿ ಓಡಿ ಹೋದ ವಿಜಯ್ ಮಲ್ಯ ಮತ್ತು ಇತ್ತೀಚೆಗೆ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 11,300 ಕೋಟಿ ವಂಚಿಸಿದ ನೀರವ್ ಮೋದಿ ಪ್ರಕರಣಗಳು ಆದ ನಂತರ ಚುರುಕಾದ ಕೇಂದ್ರ ಸರ್ಕಾರವು ಈ ರೀತಿಯ ಮಸೂದೆ ಒಂದನ್ನು ರೂಪಿಸಿ ಅನುಮೋದನೆ ಪಡೆದುಕೊಂಡಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ

ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ ನ್ಯಾಯಾಲಯಕ್ಕೆ ಕೂಡ ಹೆಚ್ಚಿನ ಅಧಿಕಾರವನ್ನು ನೀಡಲಿದೆ. ಹಣ ದುರುಪಯೋಗ ನಿಯಂತ್ರಣಾ ಕಾಯ್ದೆ 2002 ಅಡಿಯಲ್ಲಿ, ಸಾಲ ಮಾಡಿ ವಂಚಿಸುವ ಯಾವುದೇ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ಅಧಿಕಾರವನ್ನು ವಿಶೇಷ ನ್ಯಾಯಾಲಯ ಪಡೆದಿರುತ್ತದೆ.

ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರ

ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರ

ಆರ್ಥಿಕವಾಗಿ ವಂಚಿಸಿ ಪರಾರಿಯಾಗುವವರು ಭಾರತೀಯ ಕಾನೂನಿನ ಅಧೀನದಲ್ಲಿ ಬರುವವರೆಗೆ, ಭಾರತದಲ್ಲಿರುವ ಅವರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರವನ್ನು ಕಾನೂನು ಜಾರಿ ಸಂಸ್ಥೆಗೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ ನೀಡುತ್ತದೆ.

ಸಾಲ ವಸೂಲಿ ಮಾಡಲು ಸಹಾಯಕ

ಸಾಲ ವಸೂಲಿ ಮಾಡಲು ಸಹಾಯಕ

ಈ ಮಸೂದೆಯಿಂದಾಗಿ ಸಾಲ ನೀಡುವ ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳು, ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಸೂಲಿ ಮಾಡಲು ಸಹಾಯಕವಾಗುತ್ತದೆ. ಸರಕಾರ ಚಾಪೆ ಕೆಳಗೆ ತೂರಿದರೆ, ವಂಚಕರು ರಂಗೋಲಿ ಕೆಳಗೆ ತೂರುತ್ತಾರೆ.

ವಿದೇಶದ ಆಸ್ತಿಯ ಮೇಲೂ ಹಿಡಿತ

ವಿದೇಶದ ಆಸ್ತಿಯ ಮೇಲೂ ಹಿಡಿತ

ಇನ್ನು ಮುಂದೆ ಸಾಲ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ವಂಚಿಸಿ ವಿದೇಶಕ್ಕೆ ಪರಾರಿ ಆಗುವರ ದೇಶದಲ್ಲಿನ ಆಸ್ತಿ ಮತ್ತು ವಿದೇಶದ ಆಸ್ತಿಯನ್ನೂ ಹೊಸ ಮಸೂದೆ ಅನ್ವಯ ವಶಪಡಿಸಿಕೊಳ್ಳಬಹುದಾಗಿದೆ. ಆದರೆ ವಿದೇಶದ ಆಸ್ತಿ ಜಪ್ತಿಯು ಆಯಾ ದೇಶದ ಸಹಕಾರದ ಮೇಲೆ ಅವಲಂಬಿತವಾಗಿರುತ್ತದೆ.

ಸಾಲ ಮಾಡಿಯಾದ್ರೂ ತುಪ್ಪ ತಿನ್ನುವವರಿಗೆ ಅರುಣ್ ಜೇಟ್ಲಿ ನೀಡಿದ ಶಾಕ್ಸಾಲ ಮಾಡಿಯಾದ್ರೂ ತುಪ್ಪ ತಿನ್ನುವವರಿಗೆ ಅರುಣ್ ಜೇಟ್ಲಿ ನೀಡಿದ ಶಾಕ್

English summary
Narendra Modi Govt has approved ‘Fugitive Economic Offenders Bill’ which will empower law enforcement agencies to confiscate the assets of economic absconders till they submit to the jurisdiction of law in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X