ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಪ್ರಜೆಗೆ 90,000 ರೂ. ನಾಮ ಎಳೆದ ಕ್ಯಾಬ್ ಡ್ರೈವರ್

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ದೆಹಲಿಯಲ್ಲಿ ಕ್ಯಾಬ್ ಡ್ರೈವರ್ ವೊಬ್ಬ ಅಮೆರಿಕದ ಪ್ರಜೆಗೆ 90,000 ರೂ. ನಾಮ ಎಳೆದ ಘಟನೆ ನಡೆದಿದೆ. ಅಮೆರಿಕದಿಂದ ನವದೆಹಲಿಗೆ ಬಂದಿಳಿದಿದ್ದ ಪ್ರವಾಸಿಯೊಬ್ಬರಿಗೆ, ದೆಹಲಿ ಸಿಟಿ ಸಂಪೂರ್ಣ ಸ್ತಬ್ಧವಾಗಿದೆ. ದೀಪಾವಳಿ ನಿಮಿತ್ತ ಇಡೀ ನಗರದಲ್ಲಿ ಯಾವುದೇ ವಾಹನ ಓಡಾಡುವುದಿಲ್ಲ ಎಂದು ಹೇಳಿ ತಮ್ಮ ಆತನನ್ನು ಜೈಪುರ ಮತ್ತು ಆಗ್ರಾಕ್ಕೆ ಕರೆದೊಯ್ದಿದ್ದಾನೆ. ನಂತರ ಒಟ್ಟು 90 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಆತನ ಬಳಿ ಪಡೆದಿದ್ದಾನೆ.

ಬೆಂಗಳೂರಲ್ಲಿ ಊಬರ್ ಚಾಲಕನಿಂದ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆಬೆಂಗಳೂರಲ್ಲಿ ಊಬರ್ ಚಾಲಕನಿಂದ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ

ಘಟನೆ ನಡೆದಿದ್ದು ಹೀಗೆ: ಅಕ್ಟೋಬರ್ 18 ರಂದು ದೆಹಲಿಗೆ ಬಂದಿಳಿದ ಜಾರ್ಜ್ ವಾನ್ಮಿಟರ್ ಎಂಬ ಅಮೆರಿಕ ಪ್ರಜೆ, ಏರ್ಪೋರ್ಟಿನಿಂದ ಫಾರ್ಗಂಜ್ ಎಂಬ ಪ್ರದೇಶಕ್ಕೆ ತೆರಳಲು ಟ್ಯಾಕ್ಸಿ ಬುಕ್ ಮಾಡಿದ್ದರು. ಅವರನ್ನು ಕರೆದೊಯ್ಯಲು ಬಂದ ಟ್ಯಾಕ್ಸಿಯವನು, ರಸ್ತೆ ಮಧ್ಯೆ ಪೊಲೀಸ್ ಬ್ಯಾರಿಕೇಡ್ ಗಳು ಕಂಡಿದ್ದನ್ನು ನೋಡಿ ಜಾರ್ಜ್ ಬಳಿ ಹೊಸ ಕತೆ ಕಟ್ಟಿದ್ದ. ದೀಪಾವಳಿ ಇರುವುವದರಿಂದ ದೆಹಲಿ ನಗರ ಶಟ್ ಡೌನ್ ಆಗಿದೆ. ಆದ್ದರಿಂದ ನೀವು ತಲುಪಬೇಕಾದ ಸ್ಥಳಕ್ಕೆ ಹೋಗುವುದಕ್ಕಾಗುವುದಿಲ್ಲ. ನೀವು ಬುಕ್ ಮಾಡಿದ ಹೊಟೇಲ್ ಕೂಡ ಸಿಗುವುದಿಲ್ಲ, ಆದ್ದರಿಂದ ನಾನೇ ನಿಮ್ಮನ್ನು ಒಂದು ಟ್ರಾವೆಲ್ ಏಜೆನ್ಸಿಗೆ ಕರೆದೊಯ್ಯುತ್ತೇನೆ. ಅಲ್ಲಿ ಬೇರೆ ಹೊಟೆಲ್ ಬುಕ್ ಮಾಡಿ ಎಂದು ಕೇಳಿದ್ದಾನೆ.

Cab Driver Cheated More Than Rs.90000 To A US National

2026ರ ಹೊತ್ತಿಗೆ ಬೆಂಗಳೂರಲ್ಲಿ ವಿದ್ಯುತ್ ಚಾಲಿತ ಓಲಾ, ಊಬರ್ ಕಾರುಗಳು2026ರ ಹೊತ್ತಿಗೆ ಬೆಂಗಳೂರಲ್ಲಿ ವಿದ್ಯುತ್ ಚಾಲಿತ ಓಲಾ, ಊಬರ್ ಕಾರುಗಳು

ನಿಜ ಎಂದು ನಂಬಿದ ಜಾರ್ಜ್ ಕ್ಯಾಬ್ ಡ್ರೈವರ್ ನೊಂದಿಗೆ ಟ್ರಾವೆಲ್ ಏಜೆನ್ಸಿಗೆ ತೆರಳಿದ್ದಾನೆ. ಅದು ನಕಲಿ ಟ್ರಾವೆಲ್ ಏಜೆನ್ಸಿಯಾಗಿದ್ದು, ಅವರು ಜೈಪುರ ಮತ್ತು ಆಗ್ರಾದಲ್ಲಿ ಹೊಟೆಲ್ ಬುಕ್ ಮಾಡಿದ್ದಾರೆ. ಟ್ಯಾಕ್ಸಿಯವನು ಜಾರ್ಜ್ ನನ್ನು ಜೈಪುರಕ್ಕೆ ಮತ್ತು ಆಗ್ರಾಕ್ಕೆ ಕರೆದೊಯ್ದಿದ್ದಾನೆ. ನಂತರ ಜಾರ್ಜ್ ದೆಹಲಿಯಲ್ಲಿ ತಾನು ಬುಕ್ ಮಾಡಿದ್ದ ಹೊಟೆಲ್ ಗೆ ಫೋನ್ ಮಾಡಿ, ತಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿರುವುದಕ್ಕೆ ತನ್ನ ಹಣವನ್ನು ರೀಫಂಡ್ ಮಾಡುವಂತೆ ಕೇಳಿದ್ದಾರೆ. ಆಗ ಹೊಟೆಲ್ ನವರು, ನಾವು ನಿಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿಲ್ಲ, ನೀವೇ ಹೊಟೆಲ್ ಗೆ ಬಂದಿಲ್ಲ ಎಂದಿದ್ದಾರೆ. ಆಗ ಟ್ಯಾಕ್ಸಿ ಡ್ರೈವರ್ ಬಗ್ಗೆ ಜಾರ್ಜ್ ಹೊಟೆಲ್ ನವರಿಗೆ ತಿಳಿಸಿದ್ದಾರೆ.

ಮಧ್ಯರಾತ್ರಿ ಮಹಿಳೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಓಲಾ ಚಾಲಕಮಧ್ಯರಾತ್ರಿ ಮಹಿಳೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಓಲಾ ಚಾಲಕ

ದೀಪಾವಳಿಗೆ ಶಟ್ ಡೌನ್ ಎಂಬುದೆಲ್ಲ ಸುಳ್ಳು,. ನಿಮಗೆ ಟ್ಯಾಕ್ಸಿ ಡ್ರೈವರ್ ಮೋದ ಮಾಡಿದ್ದಾನೆ ಎಂದು ಹೊಟೆಲ್ ನವರು ತಿಳಿಸಿದ್ದಾರೆ. ಕೂಡಲೇ ಜಾರ್ಜ್ ಟ್ಯಾಕ್ಸಿ ಡ್ರೈವರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಕ್ಯಾಬ್ ಡ್ರೈವರ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ

English summary
Cab Driver Cheated More Than Rs.90000 To A US National
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X