• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂಸೆ ದುರದೃಷ್ಟಕರ, ಪೌರತ್ವ ಕಾಯ್ದೆ ಭಾರತೀಯರ ಮೇಲೆ ಪರಿಣಾಮ ಇಲ್ಲ: ಮೋದಿ

|

ನವದೆಹಲಿ, ಡಿಸೆಂಬರ್ 16: ಹೊಸದಾಗಿ ಜಾರಿಗೆ ತರಲಾಗುತ್ತಿರುವ ಪೌರತ್ವ ಕಾನೂನಿನ ವಿರುದ್ದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳು ಭಾರತದ ವಿವಿಧ ಭಾಗಗಳಲ್ಲಿ ಆವರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಹಿಂಸೆ ನಡೆಯುತ್ತಿರುವುದು ದುರದುಷ್ಟಕರ, ಪೌರತ್ವ ಕಾಯ್ದೆ ಮಸೂದೆ ಯಾವುದೇ ಧರ್ಮದ ಯಾವುದೇ ಭಾರತೀಯ ನಾಗರೀಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಪ್ರಧಾನಿ, "ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಗುಂಪುಗಳು, ದೇಶದಲ್ಲಿ ವಿಭಜನೆ ಹಾಗೂ ಅವಾಂತ್ರಗಳನ್ನು ಸೃಷ್ಟಿಸುವ ಕೆಲಸಗನ್ನು ಮಾಡಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ದೇಶಾದ್ಯಂತ ಕೇಂದ್ರ ಮತ್ತು ಖಾಕಿ ವಿರುದ್ಧ ಕೆರಳಿದ ವಿದ್ಯಾರ್ಥಿಗಳು

"ಪೌರತ್ವ ಮಸೂದೆ ಕಾನೂನು ಭಾರತದ ಯಾವುದೇ ಧರ್ಮದ ನಾಗರೀಕರ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ನನ್ನ ಭಾರತೀಯ ಸಹೋದರ, ಸಹೋದರಿಯರಿಗೆ ಹೇಳಲು ಬಯಸುತ್ತೇನೆ, ಈ ಕಾಯಿದೆ ಬಗ್ಗೆ ನಿಜವಾದ ಭಾರತೀಯನಿಗೆ ಸಂದೇಹ ಇಲ್ಲ. ಇದು ಹಲವಾರು ವರ್ಷಗಳಿಂದ ಕಿರುಕುಳ ಎದುರಿಸುತ್ತಿರುವ ಮತ್ತು ಜೀವಿಸಲು ಸ್ಥಳವಿಲ್ಲದವರಿಗೆ ಪೌರತ್ವ ಕೊಡುವುದಾಗಿದೆ ಎಂದು ಮೋದಿ ತಿಳಿಸಿದ್ದಾರೆ.

"ಪೌರತ್ವ ಕಾಯಿದೆ ಮೇಲಿನ ಹಿಂಸಾತ್ಮಕ ಪ್ರತಿಭಟನೆಗಳನ್ನು 'ದುರದುಷ್ಟಕರ ಮತ್ತು ದುಃಖಕರ' ಎಂದು ಮೋದಿ ವಿಶ್ಲೇಷಣೆ ಮಾಡಿದ್ದಾರೆ. ಚರ್ಚೆ ಮತ್ತು ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದೆ, ಆದರೆ ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಬಾರದು" ಎಂದಿದ್ದಾರೆ.

ಪೌರತ್ವದ 'ಪಂಜಿ'ಗೆ ಹೊತ್ತಿ ಉರಿದಿದ್ದು ಈಶಾನ್ಯವಷ್ಟೇ ಅಲ್ಲ

ಕಳೆದ ವಾರ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯು "ಭಾರತವು ಶತಮಾನಗಳ ಹಿಂದಿನ ಸ್ವೀಕಾರ, ಸಾಮರಸ್ಯ, ಸಹಾನುಭೂತಿ ಮತ್ತು ಸಹೋದರತ್ವದ ಸಂಸ್ಕೃತಿಯನ್ನು ವಿವರಣೆ ಮಾಡುತ್ತದೆ" ಎಂದು ಉಲ್ಲೇಖಿಸಿದ್ದಾರೆ. ಈ ಹೊಸ ಕಾನೂನು ದೇಶದಲ್ಲಿ ತಾರತಮ್ಯವಾಗಿದೆ ಎಂಬ ಟೀಕೆಗಳನ್ನು ಅವರು ತಿರಸ್ಕರಿಸಿದ್ದಾರೆ.

English summary
As protests by students against the new citizenship law engulf various parts of India, Prime Minister Narendra Modi on Monday tried to assuage concerns and said the legislation does not affect any citizen of any religion in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X