ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ-2020ರ ಸಿಎ ಪರೀಕ್ಷೆಗಳನ್ನು ರದ್ದುಗೊಳಿಸಿದ ಐಸಿಎಐ

|
Google Oneindia Kannada News

ನವದೆಹಲಿ, ಜುಲೈ.05: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ 2020ರ ಮೇ ಅಥವಾ ಜುಲೈನಲ್ಲಿ ನಡೆಯಬೇಕಿದ್ದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಇನ್ಸ್ ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ತಿಳಿಸಿದೆ.

ಜುಲೈ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯುವ ಪರೀಕ್ಷೆಗಳನ್ನು ಒಟ್ಟಿಗೆ ನಡೆಸುವುದಾಗಿ ತಿಳಿಸಿದೆ. ಜುಲೈನಲ್ಲಿನ ಪರೀಕ್ಷೆಗಳನ್ನು ರದ್ದುಗೊಳಿಸಿರುವ ಬಗ್ಗೆ ಜುಲೈ.03ರಂದೇ ಐಸಿಎಐ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಭಿನಂದನೆ: ಸಚಿವ ಸುರೇಶ್ ಕುಮಾರ್ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಭಿನಂದನೆ: ಸಚಿವ ಸುರೇಶ್ ಕುಮಾರ್

ಕೊರೊನಾವೈರಸ್ ಭೀತಿಗೂ ಮೊದಲು ಮೇ.03ರಂದು ಸಿಎ ಪರೀಕ್ಷೆಗಳನ್ನು ನಡೆಸುವುದಕ್ಕೆ ಐಸಿಎಐ ವೇಳಾಪಟ್ಟಿ ನಿಗದಿಗೊಳಿಸಿತ್ತು. ಲಾಕ್ ಡೌನ್ ಹಾಗೂ ಕೊರೊನಾವೈರಸ್ ಹರಡುವಿಕೆ ಹಿನ್ನೆಲೆ ಪರೀಕ್ಷೆಗಳನ್ನು ಜುಲೈ.29ರಿಂದ ಆಗಸ್ಟ್.16ರ ನಡುವೆ ನಡೆಸುವುದಕ್ಕೆ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು. ಇದೀಗ ಈ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ.

ಜುಲೈ ತಿಂಗಳನಲ್ಲಿ ನಡೆಯುವುದಿಲ್ಲ ಸಿಎ ಪರೀಕ್ಷೆಗಳು

ಕೊರೊನಾವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಐಸಿಎಐ ಈ ಆದೇಶವನ್ನು ಹೊರಡಿಸಲಾಗಿದೆ. ಮೇ.2020 ಹಾಗೂ ನವೆಂಬರ್.2020ರ ಪರೀಕ್ಷೆಗಳನ್ನು ಒಟ್ಟಿಗೆ ನಡೆಸುವುದಕ್ಕೆ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೇ 2020 ರ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ನವೆಂಬರ್ 2020ರ ಪರೀಕ್ಷೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ಪರೀಕ್ಷಾ ಕೇಂದ್ರ ಬದಲಾಯಿಸುವ ಅವಕಾಶವಿರುತ್ತದೆ. ಈ ಆಯ್ಕೆಯು ಸಂಬಂಧಿತ ಸಮಯದಲ್ಲಿ ಚಾಲ್ತಿಯಲ್ಲಿರುವ ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನವೆಂಬರ್.1, 2020 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹಾಜರಾಗಲು ಉದ್ದೇಶಿಸಿರುವ ಗುಂಪುಗಳಿಗೆ ಹೊಸದಾಗಿ ಆಯ್ಕೆ ಚಲಾಯಿಸಲು ಮುಕ್ತರಾಗುತ್ತಾರೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯನ್ನು ಓದುತ್ತದೆ.

ಕೇಂದ್ರದಿಂದ ಜು.31ರವರೆಗೂ ಮಾರ್ಗಸೂಚಿ

ಕೇಂದ್ರದಿಂದ ಜು.31ರವರೆಗೂ ಮಾರ್ಗಸೂಚಿ

ಭಾರತೀಯ ಕೇಂದ್ರ ಗೃಹ ಸಚಿವಾಯಲವು ಕಳೆದ ಜೂನ್.29ರಂದು ಕೊರೊನಾವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಜುಲೈ.31ರವರೆಗೂ ದೇಶದಲ್ಲಿನ ಎಲ್ಲಾ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಭೆಗಳನ್ನು ನಡೆಸದೆ ಮುಂದೂಡುವಂತೆ ಸೂಚಿಸಲಾಗಿತ್ತು.

ಅಧಿಸೂಚನೆಯಲ್ಲಿ ಅಸಹಾಯಕ ಸ್ಥಿತಿ ಬಗ್ಗೆ ಉಲ್ಲೇಖ

ಅಧಿಸೂಚನೆಯಲ್ಲಿ ಅಸಹಾಯಕ ಸ್ಥಿತಿ ಬಗ್ಗೆ ಉಲ್ಲೇಖ

ಇನ್ನು, ಕಳೆದ ಜೂನ್.29ರಂದು ಅಧಿಸೂಚನೆಯನ್ನು ಪೋಸ್ಟ್ ಮಾಡಲಾಗಿದ್ದು, ದೇಶದಲ್ಲಿನ ಅನೇಕ ಶಾಲೆಗಳು, ಶೈಕ್ಷಣಿಕ ಸಂಸ್ಥೆಗಳು ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುವಷ್ಟು ಆವರಣವನ್ನು ಹೊಂದಿಲ್ಲ. ಈ ಹಿನ್ನೆಲೆ ಅಸಮರ್ಥತೆಯ ಬಗ್ಗೆ ಐಸಿಎಐ ಹೇಳಿಕೆಯಲ್ಲಿ ತಿಳಿಸಿತ್ತು.

ಜು.02ರಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

ಜು.02ರಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

ದೇಶದಲ್ಲಿ ಸಿಎ ಪರೀಕ್ಷೆಗಳನ್ನು ನಡೆಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ನಿರ್ಣಯಿಸುವುದಾಗಿ ಜುಲೈ.02ರಂದು ಸುಪ್ರೀಂ ಕೋರ್ಟ್‌ಗೆ ಐಸಿಎಐ ಮಾಹಿತಿ ನೀಡಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಕೊಂಚ ಮೃದುಧೋರಣೆಯನ್ನು ಅನುಸರಿಸಬೇಕು ಎಂದು ಸೂಚನೆ ನೀಡಿತ್ತು.

English summary
CA May Examinations Cancelled By ICAI; Here’s All You Need To Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X