ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಆಕ್ರಮಿತ ಪ್ರದೇಶ 2022ರೊಳಗೆ ಭಾರತದ ಭಾಗವಾಗಲಿದೆ: ಸಂಜಯ್ ರಾವತ್

|
Google Oneindia Kannada News

ಮುಂಬೈ, ಸೆಪ್ಟೆಂಬರ್ 12: ಪಾಕ್ ಆಕ್ರಮಿತ ಕಾಶ್ಮೀರ 2022ರೊಳಗೆ ಭಾರತದ ಭಾಗವಾಗಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿ ವಿಶೇಷ ಅಧಿಕಾರವನ್ನು ಹಿಂಪಡೆಯಲಾಗಿದೆ. 2022ರೊಳಗೆ ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತದ ಭಾಗವಾಗಲಿದೆ ಎಂದು ಹೇಳಿದರು.

ಕಾಶ್ಮೀರ್ ವಿಚಾರ ನಮ್ಮ ಹಾಗೂ ಪಾಕಿಸ್ತಾನದ ಆಂತರಿಕ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ, ಯಾರ ಮಧ್ಯಸ್ಥಿಕೆಯೂ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರವಾಗಿಯೇ ಹೇಳಿದ್ದಾರೆ.

By 2022 POK Will Be Part Of India

ಪಾಕಿಸ್ತಾನವೂ ಕೂಡ ಕಾಶ್ಮೀರವನ್ನು ಭಾರತದ ಒಂದು ಭಾಗ ಎಂದು ಕ್ರಮೇಣವಾಗಿ ಒಪ್ಪಿಕೊಳ್ಳುತ್ತಿದೆ. 2022ರೊಳಗೆ ಅಖಂಡ ಭಾರತದ ಕನಸು ನನಸಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಶ್ಮೀರದಲ್ಲಿ ಏನಾಗುತ್ತಿದೆ ತಿಳಿಯಬೇಕು: ಅಮೆರಿಕದಿಂದ ತೀವ್ರ ಒತ್ತಡಕಾಶ್ಮೀರದಲ್ಲಿ ಏನಾಗುತ್ತಿದೆ ತಿಳಿಯಬೇಕು: ಅಮೆರಿಕದಿಂದ ತೀವ್ರ ಒತ್ತಡ

ನರೇಂದ್ರ ಮೋದಿ ಸರ್ಕಾರವು ಸಂವಿಧಾನದ ವಿಧಿ 370 ರದ್ದುಗೊಳಿಸಿದ ಕ್ರಮವನ್ನು ಉದ್ಧವ್ ಠಾಕ್ರೆ ನಾಯಕತ್ವದ ಶಿವಸೇನಾ ಬೆಂಬಲ ನೀಡಿತ್ತು. ಜಮ್ಮು ಕಾಶ್ಮೀರದ ಕುರಿತ ಈ ನಿರ್ಧಾರದಿಂದ ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ದೊರೆತಂತಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು.

English summary
By 2022 POK Will Be Part Of India, Sena leader Sanjay Raut said that the dreams of Akhand Bharat would be fulfilled very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X