ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ವಾಹನ ಗುಜರಿಗೆ ಹಾಕಿ ಹೊಸತು ಕೊಳ್ಳುವವರಿಗೆ ಕೊಡುಗೆ?

|
Google Oneindia Kannada News

ನವದೆಹಲಿ, ಫೆಬ್ರುವರಿ 08: ಹಳೆಯ ಹಾಗೂ ಮಾಲಿನ್ಯಕಾರಿ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಲು ಮುಂದಾಗುವವರಿಗೆ ಕೇಂದ್ರದ ವಾಹನ ಗುಜರಿ ನೀತಿಯಡಿಯಲ್ಲಿ ಕೆಲವು ಪ್ರಯೋಜನಗಳು ಲಭಿಸಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಕೇಂದ್ರದ ಈ ಹೊಸ ವಾಹನ ನೀತಿಯು ವಾಹನ ಉದ್ಯಮಕ್ಕೆ ವರದಾನವಾಗಲಿದೆ ಎಂದು ಭರವಸೆ ನೀಡಿರುವ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತೀಯ ವಾಹನ ಉದ್ಯಮ ಕ್ಷೇತ್ರ ಈ ಹೊಸ ನೀತಿಯಿಂದ ವಾರ್ಷಿಕ 10 ಲಕ್ಷ ಕೋಟಿ ರೂಪಾಯಿ ವಹಿವಾಟಿನೊಂದಿಗೆ ಶೇ 30ರಷ್ಟು ಏಳಿಗೆಯಾಗಲಿದೆ ಎಂದು ಹೇಳಿದ್ದಾರೆ. 2021ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾದ ಗುಜರಿ ನೀತಿಯು ಭಾರತೀಯ ಆಟೊಮೊಬೈಲ್ ವಲಯದ ಏಳಿಗೆಗೆ ಬೃಹತ್ ಹೆಜ್ಜೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

"ವಾಹನ ಉತ್ಪಾದಕರಿಂದ ಖರೀದಿದಾರರಿಗೆ ಕೊಡುಗೆ"

"ಹಳೆಯ ವಾಹನಗಳನ್ನು ಗುಜರಿ ನೀತಿಗೆ ಒಳಪಡಿಸುವ ವಾಹನ ಸವಾರರಿಗೆ ವಾಹನ ಉತ್ಪಾದಕರು ಕೆಲವು ಕೊಡುಗೆ ಅಥವಾ ರಿಯಾಯಿತಿಗಳನ್ನು ನೀಡಲಿದ್ದಾರೆ. ಹೀಗಾಗಿ ಗುಜರಿ ನೀತಿ ವರದಾನವಾಗಲಿದೆ. ಇದು ದೇಶದ ಆರ್ಥಿಕತೆಯನ್ನು ಹೆಚ್ಚಿಸುವುದರಲ್ಲದೇ ಆಟೊಮೊಬೈಲ್ ಕ್ಷೇತ್ರದ ಏಳಿಗೆಗೂ ಕಾರಣವಾಗುತ್ತದೆ. ವಾಹನಗಳಿಂದ ಮಾಲಿನ್ಯ ಪ್ರಮಾಣವೂ ತಗ್ಗುತ್ತದೆ" ಎಂದು ಗಡ್ಕರಿ ತಿಳಿಸಿದ್ದಾರೆ.

ಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆ

 ವಾಹನ ಉತ್ಪಾದಕರೊಂದಿಗೆ ಮಾತುಕತೆ

ವಾಹನ ಉತ್ಪಾದಕರೊಂದಿಗೆ ಮಾತುಕತೆ

ಈ ಕುರಿತು ವಾಹನ ಉತ್ಪಾದಕರೊಂದಿಗೆ ಮಾತುಕತೆಯು ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಈ ಹೊಸ ನೀತಿ ಕುರಿತು ವಿವರಗಳಿರುವ ಅಂತಿಮ ವರದಿ ನೀಡಲಾಗುವುದು. ಇದಷ್ಟೇ ಅಲ್ಲದೇ ಆಟೊಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚುವುದು ಎಂದು ಹೇಳಿದರು.

 ಗುಜರಿ ನೀತಿಗೆ ಒಳಪಡಿಸದಿದ್ದರೆ ಆಯ್ಕೆ ಏನು?

ಗುಜರಿ ನೀತಿಗೆ ಒಳಪಡಿಸದಿದ್ದರೆ ಆಯ್ಕೆ ಏನು?

ಗುಜರಿ ನೀತಿ ಸ್ವಯಂ ಪ್ರೇರಣೆಯಾದ್ದರಿಂದ ವಾಹನ ಹಳೆಯದಾದರೂ ಅದನ್ನು ಗುಜರಿ ನೀತಿಗೆ ಒಳಪಡಿಸದೇ ಇದ್ದರೆ ಜನರಿಗೆ ಇರುವ ಆಯ್ಕೆಯ ಕುರಿತು ಪ್ರಶ್ನಿಸಿದಾಗ, ಮೋಟಾರು ವಾಹನ ಕಾನೂನಿನ ಪ್ರಕಾರ ಎಂಟು ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ವರ್ಷಕ್ಕೊಮ್ಮೆ ಫಿಟ್ನೆಸ್ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯ. 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಖಾಸಗಿ ವಾಹನಗಳಿಗೆ ಪರೀಕ್ಷೆ ಕಡ್ಡಾಯ. ಅವಧಿ ಮೀರಿದ ವಾಹನಗಳನ್ನು ಬಳಸುವುದಾದರೆ ಅಧಿಕ ಮೊತ್ತದ ಹಸಿರು ತೆರಿಗೆ (ಗ್ರೀನ್ ಟ್ಯಾಕ್ಸ್) ಪಾವತಿಸಬೇಕಾಗುತ್ತದೆ. ಖಾಸಗಿ ಮತ್ತು ವಾಣಿಜ್ಯ ವಾಹನಗಳಲ್ಲಿ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗೆ ಒಳಗಾಗದ ವಾಹನಗಳನ್ನು 'ವಾಹನ್'ದಿಂದ (ರಾಷ್ಟ್ರೀಯ ನೋಂದಣಿ ಇ-ಸೇವೆ) ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.

 ಒಂದು ಕೋಟಿ ವಾಹನಗಳು ಗುಜರಿಗೆ?

ಒಂದು ಕೋಟಿ ವಾಹನಗಳು ಗುಜರಿಗೆ?

ಈ ಸಂದರ್ಭ ಸದ್ಯಕ್ಕೆ ದೇಶದಲ್ಲಿರುವ ಗುಜರಿ ವಾಹನಗಳ ಕುರಿತು ಅಂದಾಜು ಮೊತ್ತ ಹೇಳಿದ ಸಚಿವರು, ಸುಮಾರು ಒಂದು ಕೋಟಿ ವಾಹನಗಳು ಗುಜರಿಗೆ ಸೇರಲಿವೆ ಎಂದಿದ್ದಾರೆ. ಜೊತೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಶೀಘ್ರವೇ ಗುಜರಿ ನೀತಿ ಪ್ರಕಟಿಸಲಿದ್ದು, ಎಲ್ಲಾ ವಿವರವೂ ಅದರಲ್ಲಿರಲಿದೆ ಎಂದಿದ್ದಾರೆ.

English summary
Buyers of new vehicles after scrapping of old and polluting vehicles will get benefits under new policy said Union minister Nitin Gadkari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X