ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಅಕ್ರಮ ಸಂಗ್ರಹ; ಉದ್ಯಮಿ ನವನೀತ್ ಕಲ್ರಾ ಬಂಧನ

|
Google Oneindia Kannada News

ನವದೆಹಲಿ, ಮೇ 17: ಆಮ್ಲಜನಕ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಒಂದು ವಾರದಿಂದಲೂ ಕಲ್ರಾ ತಲೆಮರೆಸಿಕೊಂಡಿದ್ದರು.

ಕಲ್ರಾ ಮಾಲೀಕತ್ವದ ಖಾನ್ ಚಾಚಾ, ಟೌನ್ ಹಾಲ್ ಮತ್ತು ನೇಜ್ ಅಂಡ್ ಜು ಎಂಬ ಮೂರು ರೆಸ್ಟೊರೆಂಟ್‌ಗಳಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 524 ಆಮ್ಲಜನಕ ಸಿಲಿಂಡರ್‌ಗಳನ್ನು ಮೇ 7ರಂದು ವಶಪಡಿಸಿಕೊಳ್ಳಲಾಗಿತ್ತು.

ರೆಮ್‌ಡೆವಿರ್, ಆಕ್ಸಿಜನ್ ಸಿಲಿಂಡರ್ ಅಕ್ರಮವಾಗಿ ಸಂಗ್ರಹಿಸುವವರ ವಿರುದ್ಧ ಗೂಂಡಾ ಕೇಸ್: ಸ್ಟಾಲಿನ್ರೆಮ್‌ಡೆವಿರ್, ಆಕ್ಸಿಜನ್ ಸಿಲಿಂಡರ್ ಅಕ್ರಮವಾಗಿ ಸಂಗ್ರಹಿಸುವವರ ವಿರುದ್ಧ ಗೂಂಡಾ ಕೇಸ್: ಸ್ಟಾಲಿನ್

ಆನಂತರ ಕಲ್ರಾ ತಲೆ ಮರೆಸಿಕೊಂಡಿದ್ದು, ಜಾಮೀನಿಗೆ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ದೆಹಲಿ ಹೈಕೋರ್ಟ್‌ಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಜಾಮೀನು ದೊರೆತಿರಲಿಲ್ಲ.

Businessman Navneet Kalra Arrested In Black Marketing Oxygen Concentrators

ರೆಸ್ಟೊರೆಂಟ್‌ಗಳಲ್ಲಿದ್ದ ಆಮ್ಲಜನಕಗಳು ಚೀನಾದಿಂದ ತರಿಸಿಕೊಂಡಿದ್ದು, ಅದರನ್ನು 50 ರಿಂದ 70 ಸಾವಿರದವರೆಗೂ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಗುರುಗ್ರಾಮದ ತೋಟದ ಮನೆಯಲ್ಲಿ ಅಡಗಿಕೊಂಡಿದ್ದ ಕಲ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

English summary
Delhi Police have arrested businessman Navneet Kalra for alleged black marketing and hoarding of oxygen concentrators in restaurants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X