ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೂ ಪಾಲಿಶ್ ಮಾಡುವವನ ಹಾಡಿಗೆ ಫಿದಾ, ಕಣ್ಣೀರಿಟ್ಟ ಆನಂದ್ ಮಹೀಂದ್ರಾ

|
Google Oneindia Kannada News

Recommended Video

Anand Mahindra impressed with performer on Indian Idol | FILMIBEAT KANNADA

ನವದೆಹಲಿ, ಅಕ್ಟೋಬರ್ 30: ಆತ ಶೂ ಪಾಲಿಶ್ ಮಾಡುವ ಹುಡುಗ, ತಾಯಿ ಪಂಜಾಬಿನ ಬೀದಿಯಲ್ಲಿ ಬಲೂನು ಮಾರುತ್ತಾರೆ. ಹುಡುಗನಿಗೆ ಹಾಡುವುದು ಅಂದ್ರೆ ಹುಚ್ಚುಹಿಡಿಯುವಷ್ಟು ಇಷ್ಟ.

ಒಪ್ಪೊತ್ತಿನ ಊಟಕ್ಕೂ ಪರದಾಡುವ, ಕಡುಬಡತನದಿಂದ ಬಂದ ಈ ಹುಡುಗ ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾನೆ. ಆತ ಹಾಡುವ ಮುನ್ನ ಹೇಳಿದ ಅವನ ಕತೆ ಎಂಥವರ ಕಣ್ಣಲ್ಲೂ ನೀರು ಹರಿಸುತ್ತದೆ.

ಮೈಸೂರು ತಾಯಿ-ಮಗನ ಪ್ರೀತಿಗೆ ಫಿದಾ ಆಗಿ ಕಾರು ಕೊಡಲು ಮುಂದಾದ ಆನಂದ್ ಮಹೀಂದ್ರಾಮೈಸೂರು ತಾಯಿ-ಮಗನ ಪ್ರೀತಿಗೆ ಫಿದಾ ಆಗಿ ಕಾರು ಕೊಡಲು ಮುಂದಾದ ಆನಂದ್ ಮಹೀಂದ್ರಾ

ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, ವಿಡಿಯೋ ತಮ್ಮ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ.

ಶೂ ಪಾಲಿಶ್ ಮಾಡುವವನ ಹಾಡಿಗೆ ಫಿದಾ

"ಇಂಥ ಜನರ ಬಗ್ಗೆ ಅರಿಯಲು ದೀಪಾವಳಿ ಅತ್ಯಂತ ಪರಿಪೂರ್ಣ ದಿನ. ಒಬ್ಬ ಫ್ರೆಂಡ್ ನನಗೆ ಈ ವಿಡಿಯೋ ಕಳಿಸಿ, ಇದನ್ನು ನೋಡುವಾಗ ಕಣ್ಣೀರು ಬಂತು ಎಂದಿದ್ದಾರೆ. ಈ ವಿಡಿಯೋದ ಸಂಪೂರ್ಣ ಭಾಗವನ್ನು ಯೂಟ್ಯೂಬ್ ನಲ್ಲಿ ನೋಡಿ. ನೀವು ಕಣ್ಣೀರು ಹಾಕದಿದ್ದರೆ ಹೇಳಿ! ನಾನುನಿಮಗೆ ಚಾಲೆಂಜ್ ಮಾಡುತ್ತೇನೆ. ಟಿವಿ ಮತ್ತು ಸೋಶಿಯಲ್ ಮೀಡಿಯಾಗಳು ಇಂಥ ಪ್ರತಿಭೆಯನ್ನು ಯಾವ್ಯಾವುದೋ ಸ್ಥಳದಿಂದ ಹೆಕ್ಕಿ ತೆಗೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ"- ಆನಂದ್ ಮಹೀಂದ್ರಾ

ಮೈಸೂರಿನ ದಕ್ಷಿಣಮೂರ್ತಿಗೆ ಕಾರುಕೊಟ್ಟ ಮಹೀಂದ್ರಾ

ದ್ವಿಚಕ್ರವಾಹನದಲ್ಲಿ ತಾಯಿಯನ್ನು ದೇಶಸುತ್ತಲು ಕರೆದೊಯ್ದ ಮೈಸೂರಿನ ದಕ್ಷಿಣ ಮೂರ್ತಿ ಎಂಬುವವರ ಕತೆ ಕೇಳಿ ಭಾವುಕರಾದ ಆನಂದ್ ಮಹೀಂದ್ರಾ ಅವರಿಗೆ ಕಾರು ಕೊಡಲು ಮುಂದಾಗಿದ್ದರು. ದಕ್ಷಿಣ ಮೂರ್ತಿ ಅವರ ವಿಡಿಯೋವನ್ನೂ ಅವರು ಟ್ವೀಟ್ ಮಾಡಿದ್ದರು.

1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್

ಒಂದು ರೂಪಾಯಿ ಇಡ್ಲಿ ಅಜ್ಜಿಗೆ ಎಲ್ ಪಿಜಿ ಸ್ಟೋವ್

ತಮಿಳುನಾಡಿನ 80 ವರ್ಷ ವಯಸ್ಸಿನ ಅಜ್ಜಿಯೊಬ್ಬರ ಬಾಳಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಮಾಡಿದ್ದ ಟ್ವೀಟ್ ಬೆಳಕು ಮೂಡಿಸಿತ್ತು. ಕಳೆದ 30 ವರ್ಷಗಳಿಂದ 1 ರು ಗಳಿಗೆ 1 ಇಡ್ಲಿಯಂತೆ ಮಾರಾಟ ಮಾಡುತ್ತಾ ಬಡವರ, ದುರ್ಬಲರ ಪಾಲಿಗೆ 'ಅನ್ನಪೂರ್ಣೆ' ಯಾಗಿದ್ದ ಅಜ್ಜಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದಿದ್ದ ಮಹೀಂದ್ರಾ, ಸೌದೆ ಒಲೆ ಬಳಸುತ್ತಿದ್ದ ಅವರಿಗೆ ಎಲ್ ಪಿಜಿ ಸ್ಟೋವ್ ನೀಡುವ ಮೂಲಕ ನೆರವಾಗಿದ್ದರು.

ಸ್ವಾವಲಂಬಿ ಹುಡುಗಿಗೆ ಪುರಸ್ಕಾರ

ಸ್ವಾವಲಂಬಿ ಹುಡುಗಿಗೆ ಪುರಸ್ಕಾರ

'ಹಳ್ಳಿ ಮನೆ ರೊಟ್ಟಿಸ್' ಎಂಬ ಮೊಬೈಲ್ ಕ್ಯಾಂಟಿನ್ ನಡೆಸುತ್ತಿದ್ದ ಶಿಲ್ಪಾ ಎಂಬ ಮಹಿಳೆಯ ಸ್ವಾವಲಂಬಿ ಬದುಕನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಆನಂದ್ ಮಹೀಂದ್ರಾ, 2018 ರ ಫೆಬ್ರವರಿಯಲ್ಲಿ ಮಹೀಂದ್ರಾ ಕಂಪನಿಯ ಕಡೆಯಿಂದ ಮಹಿಳಾ ಸಾಧಕಿ ಪುರಸ್ಕಾರ ಪಡೆದಿದ್ದರು.

English summary
Business man Anand Mahindra Posts A Heartbreaking Story on Twitter, Human interest Story
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X