• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ

|
   ನವದೆಹಲಿ ಬುರಾರಿಯ 11 ಜನರ ಆತ್ಮಹತ್ಯೆ ಹಿನ್ನೆಲೆ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪೋಟಕ ಮಾಹಿತಿ

   ನವದೆಹಲಿ, ಜುಲೈ 05: ದೆಹಲಿಯ ಬುರಾರಿಯಲ್ಲಿ 11 ಜನರ ಆತ್ಮಹತ್ಯೆಯ ವಿಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಕೆಲವು ಪ್ರಮುಖ ಮಾಹಿತಿಗಳು ಲಭ್ಯವಾಗಿವೆ.

   ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!

   ಈ ಮನೆಯ ಎದುರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಮನೆಯ ಹಿರಿಸೊಸೆ ಕವಿತಾ ಎಂಬುವವರು ತಮ್ಮ ಮಗಳು ನೀತು ಎಂಬುವವರೊಂದಿಗೆ ಐದು ಸ್ಟೂಲ್ ಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ್ಮಹತ್ಯೆಗೆ ಬಳಸಿದ ಸ್ಟೂಲ್ ಗಳೇ ಇವಾಗಿದ್ದು, ಇದು ಆತ್ಮಹತ್ಯೆಯೇ, ಕೊಲೆಯಲ್ಲ ಎಂಬುದಕ್ಕೆ ಪೊಲಿಸರಿಗೆ ಸಾಕಷ್ಟು ಸಾಕ್ಷಿಗಳು ಲಭ್ಯವಾಗುತ್ತಿವೆ.

   ಇಲೆಕ್ಟ್ರಿಕಲ್ ವೈಯರ್ ತಂದ ಮಕ್ಕಳು!

   ಇಲೆಕ್ಟ್ರಿಕಲ್ ವೈಯರ್ ತಂದ ಮಕ್ಕಳು!

   ರಾತ್ರಿ ಸುಮಾರು 10.15 ರ ಸುಮಾರಿಗೆ ಧ್ರುವ ಮತ್ತು ಶಿವಮ್ ಎಂಬ ಇಬ್ಬರು ಹುಡುಗರು ಇಲೆಕ್ಟ್ರಿಕಲ್ ವೈಯರ್ ಗಳನ್ನು ಪ್ಲೈವುಡ್ ಶಾಪ್ ನಿಂದ ತೆಗೆದುಕೊಂಡು ಹೋಗಿದ್ದು ಸಹ ಈ ಫೂಟೇಜ್ ನಲ್ಲಿ ದಾಖಲಾಗಿದೆ. 10 ಜನರೂ ನೇಣು ಹಾಕಿಕೊಂಡಿದ್ದು ಇದೇ ಇಲೆಕ್ಟ್ರಿಕಲ್ ವೈಯರ್ ನಿಂದ ಎಂಬುದು ಸಹ ಸಾಬೀತಾಗಿದೆ. ಇವೆಲ್ಲವನ್ನು ನೋಡಿದರೆ ಇದು ಪೂರ್ವನಿರ್ಧರಿತ ಘಟನೆ ಎಂಬುದು ಸಾಬೀತಾಗುತ್ತದೆ.

   ದೆಹಲಿ ಸಾಮೂಹಿಕ ಆತ್ಮಹತ್ಯೆಗೂ ಕುಜದೋಷಕ್ಕೂ ಏನು ಸಂಬಂಧ?

   11 ಜನ, 11 ವರ್ಷ, 11 ಡೈರಿ!

   11 ಜನ, 11 ವರ್ಷ, 11 ಡೈರಿ!

   ಮನೆಯಲ್ಲಿ ಹನ್ನೊಂದು ಡೈರಿಗಳು ಸಿಕ್ಕಿದ್ದು, ಇವನ್ನು ಹನ್ನೊಂದು ವರ್ಷಗಳಿಂದ ಬರೆಯಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. 11 ಜನರೂ ಮೃತರಾಗಿರುವುದು ಕಾಕತಾಳೀಯವೋ ಏನೋ! ಒಟ್ಟಿನಲ್ಲಿ ಹನ್ನೊಂದಕ್ಕೂ ಈ ಕುಟುಂಬಕ್ಕೂ ಏನೋ ನಂಟಿದ್ದಂತಿದೆ. ಈ ಪ್ರಕರಣದ ನಂತರ ಮನೆಯಲ್ಲಿ ಸಿಕ್ಕ ಅನುಮಾನ ಹುಟ್ಟಿಸುವ ಪೈಪುಗಳ ಸಂಖ್ಯೆಯೂ 11!'

   ದೆಹಲಿಯಲ್ಲಿ ಒಂದೇ ಕುಟುಂಬದ 11 ಶವಗಳ ಜೊತೆ ಸಿಕ್ಕ ಡೈರಿಯಲ್ಲೇನಿತ್ತು?

   ಡೈರಿಯಲ್ಲಿ ವಿಚಿತ್ರ ಸಂಕೇತಗಳು!

   ಡೈರಿಯಲ್ಲಿ ವಿಚಿತ್ರ ಸಂಕೇತಗಳು!

   'ಒಂದು ಕಪ್ಪಿನಲ್ಲಿ ನೀರನ್ನು ಇಡಿ. ಈ ನೀರು ಬಣ್ಣ ಬದಲಾಯಿಸುತ್ತದೆ. ಆಗ ನಾವು ಬಚಾವಾಗುತ್ತೇವೆ', 'ನಾವು ಸಾಯುವುದಕ್ಕೆಂದು ಹೋದಾಗ ಆಕಾಶ ಬಾಯಿ ಬಿಡುತ್ತದೆ, ಭೂಮಿ ನಡುಗುತ್ತದೆ. ಆಗ ನಮ್ಮನ್ನು ಬಚಾವ್ ಮಾಡಲು ತಂದೆ ಬರುತ್ತಾರೆ' ಎಂಬಿತ್ಯಾದಿ ಅರ್ಥವಾಗದ ಸಂಕೇತ ವಾಕ್ಯಗಳು ಈ ಡೈರಿಯಲ್ಲಿವೆ. ಅನುಮಾನವೆಂದರೆ ಈ ಮನೆ ಜನರು Shared psychosis ಎಂಬ ಮನೋರೋಗದಿಂದ ಬಳಲುತ್ತಿದ್ದಿರಬಹುದು! ವ್ಯಕ್ತಿಯೊಬ್ಬ ತನ್ನ ಭ್ರಮೆಗಳನ್ನು, ತನ್ನ ನಂಬಿಕೆಗಳನ್ನು ಇತರರಿಗೆ ವರ್ಗಾಯಿಸುವುದೇ Shared psychosis. ಈ ಪ್ರಕರಣದಲ್ಲಿ ಮನೆಯ ಯಜಮಾನ ಮತ್ತು ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ರೂವಾರಿ ಎನ್ನಲಾಗುತ್ತಿರುವ ಲಲಿತ್ ಭಾಟಿಯಾ ತಮ್ಮ ನಂಬಿಕೆಗಳನ್ನು ಕುಟುಂಬದ ಇತರ ಸದಸ್ಯರಿಗೆ ವರ್ಗಾಯಿಸಿದ್ದಾರೆ ಎನ್ನಲಾಗುತ್ತಿದೆ!

   ದೆಹಲಿಯ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆ

   ಸಾಯುವ ಇಚ್ಛೆ ಇದ್ದಂತಿಲ್ಲ!

   ಸಾಯುವ ಇಚ್ಛೆ ಇದ್ದಂತಿಲ್ಲ!

   ಡೈರಿಯಲ್ಲಿನ ಬರಹಗಳನ್ನು ನೋಡಿದರೆ ಈ ಮನೆ ಜನರಿಗೆ ಸಾಯುವ ಯಾವುದೇ ಇಚ್ಛೆ ಇರಲಿಲ್ಲ. ಬದಲಾಗಿ ತಾವು ಸಾಯುವುದಕ್ಕೆ ಪ್ರಯತ್ನಿಸಿದಾಗ, ಹತ್ತು ವರ್ಷದ ಹಿಂದೆ ಮೃತರಾದ ತಮ್ಮ ತಂದೆ ಬಂದು ತಮ್ಮನ್ನೆಲ್ಲ ಕಾಪಾಡುತ್ತಾರೆ ಎಂಬ ನಂಬಿಕೆ ಮನೆ ಯಜಮಾನ ಲಲಿತ್ ಭಾಟಿಯಾದ್ದಾಗಿತ್ತು. ಮನೆ ಜನರೆಲ್ಲರೂ ಇದನ್ನೇ ನಂಬಿದ್ದರು. ಆದ್ದರಿಂದ ತಮ್ಮ ಭ್ರಮೆಯೇ ನಿಜವಾಗುತ್ತದೆ ಎಂದುಕೊಂಡು ಪ್ರಯೋಗ ಮಾಡಲು ಹೊರಟು ತಮ್ಮ ಜೀವವನ್ನೇ ಕಳೆದುಕೊಂಡರು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ.

   ಬುರಾರಿ ಸಾಮೂಹಿಕ ಆತ್ಮಹತ್ಯೆ, ಏನಿದು?

   ಬುರಾರಿ ಸಾಮೂಹಿಕ ಆತ್ಮಹತ್ಯೆ, ಏನಿದು?

   ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Burari mass suicide case in Delhi: The footage of a camera installed outside a house opposite the residence of the family showed that the elder daughter-in-law of the house, Savita, along with her daughter, Neetu, could be seen bringing five stools that were later used for the members to be hanged.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more