ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಂದ್ರ ಬಜೆಟ್ 2021: ಏಳು ಬಂದರು ಅಭಿವೃದ್ಧಿಗೆ ಯೋಜನೆ
ನವದೆಹಲಿ, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 2021ನೇ ಸಾಲಿನ ಕೇಂದ್ರ ಬಜೆಟ್ ಘೋಷಿಸಿದ್ದು, 2000 ಕೋಟಿ ರೂಪಾಯಿ ಹೂಡಿಕೆ ಮೌಲ್ಯದ ಏಳು ಬಂದರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?
ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯ ಮಾದರಿಯಲ್ಲಿ ಈ ಬಂದರು ಯೋಜನೆಗಳನ್ನು ಕೈಗೊಳ್ಳಲಾಗುವುದು. ಸುಮಾರು 2000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮೌಲ್ಯದ ಬಂದರು ಯೋಜನೆಗಳು ಇವಾಗಿವೆ ಎಂದು ಬಜೆಟ್ ಮಂಡನೆ ಸಮಯ ಸೀತಾರಾಮನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಭಾರತದಲ್ಲಿ ಹನ್ನೆರಡು ಬೃಹತ್ ಬಂದರುಗಳಿವೆ. ದೀನದಯಾಳ್, ಮುಂಬೈ, ಜೆಎನ್ ಪಿಟಿ, ಮರ್ಮಾಗೋವಾ, ಮಂಗಳೂರು, ಕೊಚ್ಚಿ, ಚೆನ್ನೈ, ಕಾಮರಾಜರ್, ವಿಒ ಚಿದಂಬರ್ ನಾರ್, ವಿಶಾಖಪಟ್ಟಣಂ, ಪರದೀಪ್, ಕೋಲ್ಕತ್ತಾ ಸೇರಿದಂತೆ ಹನ್ನೆರಡು ಬಂದರುಗಳಿವೆ. ಇದರಲ್ಲಿ ಏಳು ಬಂದರುಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
Comments
Budget 2021 budget union budget nirmala sitharaman port ಬಜೆಟ್ 2021 ಬಜೆಟ್ ಕೇಂದ್ರ ಬಜೆಟ್ ನಿರ್ಮಲಾ ಸೀತಾರಾಮನ್ ಬಂದರು
English summary
Finance Minister Nirmala Sitharaman on Monday announced seven port projects worth more than Rs 2,000 crore investment,