ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2019: ಆದಾಯ ಎಲ್ಲಿಂದ? ಖರ್ಚು ಎಲ್ಲೆಲ್ಲಿ?

|
Google Oneindia Kannada News

ನವದೆಹಲಿ, ಜುಲೈ 05: ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಅವರು ಮೋದಿ ಸರ್ಕಾರ 2.0 ನ ಮೊದಲ ಬಹು ನಿರೀಕ್ಷಿತ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ.

ಅವರ ಸುಧೀರ್ಘ ಬಜೆಟ್ ಭಾಷಣದ ಕೊನೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ವಿತ್ತಿಯ ಕೊರತೆ ಇದೆ ಎಂದು ಹೇಳಿದ್ದು ಅತ್ಯಂತ ಪ್ರಮುಖವೆಂದು ಪರಿಗಣಿತವಾಗುತ್ತಿದೆ.

ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು?ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು?

ಕಳೆದ ಐದು ವರ್ಷಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ, ಜಿಎಸ್‌ಟಿ ಭಾರತದ ಆರ್ಥಿಕತೆಗೆ ಶಕ್ತಿ ಒದಗಿಸುತ್ತದೆ ಎಂದು ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಹಲವು ಭಾರಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸಹ ಈ ಭಾರಿಯ ಬಜೆಟ್ ಬಹು ಮಹತ್ವವನ್ನು ಪಡೆದುಕೊಂಡಿತ್ತು.

Budget 2019: rupee comes from where goes to where

ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಹೇಗೆ ಖರ್ಚಾಗುತ್ತದೆ ಎಂಬುದನ್ನು ರೂಪಾಯಿ ಮಟ್ಟಕ್ಕೆ ಇಳಿಸಿ ಸರಳವಾಗಿ ನೋಡುವ ಕ್ರಮ ಹಿಂದಿನಿಂದಲೂ ಇದೆ. ಹಾಗೆಯೇ ರೂಪಾಯಿ ಮಟ್ಟದಲ್ಲಿ ಬಜೆಟ್‌ನ ಆದಾಯ ಮತ್ತು ವ್ಯಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

ಆದಾಯ ಹೇಗೆ (ಪೈಸೆಗಳಲ್ಲಿ)
ಸಾಲ ಮತ್ತು ಇತರೆ ಹೊಣೆಗಾರಿಕೆಗಳಿಂದ - 20 ಪೈಸೆ
ವಾಣಿಜ್ಯ ತೆರಿಗೆ- 21 ಪೈಸೆ
ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)- 19 ಪೈಸೆ
ಆದಾಯ ತೆರಿಗೆ - 16 ಪೈಸೆ
ತೆರಿಗೆಯೇತರ ಆದಾಯ- 9 ಪೈಸೆ
ಕೇಂದ್ರ ಅಬಕಾರಿ ತೆರಿಗೆ - 8 ಪೈಸೆ
ಆಮದು, ರಫ್ತು (ಕಸ್ಟಮ್ಸ್‌) - 4 ಪೈಸೆ
ಒಟ್ಟು 97 ಪೈಸೆ ಸರ್ಕಾರಕ್ಕೆ ಬರುತ್ತದೆ. ಸರ್ಕಾರಕ್ಕೆ ಮೂರು ರೂಪಾಯಿ ಕೊರತೆ ಇದೆ.

Budget 2019: rupee comes from where goes to where

ಖರ್ಚು ಹೇಗೆ (ಪೈಸೆಗಳಲ್ಲಿ)
ರಾಜ್ಯಗಳಿಗೆ ನೀಡುವ ತೆರಿಗೆ ಪಾಲು- 23 ಪೈಸೆ
ಬಡ್ಡಿ ಮತ್ತು ಇತರ ಪಾವತಿ - 18 ಪೈಸೆ
ಕೇಂದ್ರದ ನೇರ ಯೋಜನೆಗಳು - 13 ಪೈಸೆ
ಕೇಂದ್ರ ಬೆಂಬಲಿತ ಯೋಜನೆಗಳು - 9 ಪೈಸೆ
ರಕ್ಷಣೆಗೆ ಖರ್ಚು - 9 ಪೈಸೆ
ಫೈನಾನ್ಸ್‌, ಕಾಮರ್ಸ್‌ ಮತ್ತು ಇತರೆ ವರ್ಗಾವಣೆ- 7 ಪೈಸೆ
ಸಬ್ಸಿಡಿಗಳು - 8 ಪೈಸೆ
ಇತರೆ ಖರ್ಚುಗಳು - 8 ಪೈಸೆ
ನಿವೃತ್ತಿ ವೇತನಗಳು - 5 ಪೈಸೆ
ಸರ್ಕಾರ 1 ರೂಪಾಯಿ ಖರ್ಚು ಮಾಡುತ್ತಿದೆ.

ಸರ್ಕಾರಕ್ಕೆ ಆದಾಯ 97 ಪೈಸೆ ಬರುತ್ತಿದ್ದರೆ 1 ರೂಪಾಯಿ ಖರ್ಚು ಮಾಡುತ್ತಿದೆ. ಹಾಗಾಗಿ ಇದು ಕೊರತೆಯ ಬಜೆಟ್ ಆಗಿದೆ.

English summary
Budget 2019: 21 paise comes for government out of one rupee. Here is the graphic and detail of budget that rupee came from and goes where.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X