ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲೇ ಅತ್ಯಂತ ಕಡಿಮೆ ತೆರಿಗೆ ವಿಧಿಸುವ ಹಾದಿಯಲ್ಲಿ ಭಾರತ: ರಾಜೀವ್

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಫೆಬ್ರವರಿ 1: ಕಳೆದ ಲೋಕಸಭಾ ಚುನಾವಣೆ ವೇಳೆ ದೇಶದ ಜನರು ಭಾರತದ ಬದಲಾವಣೆಗಾಗಿ ಮತ ಹಾಕಿದ್ದರು. ದಶಕಗಳ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ನೀತಿ ನಿರೂಪಣೆಯಲ್ಲಿನ ದೋಷಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮತ ಚಲಾಯಿಸಿದ್ದರು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮಧ್ಯಂತರ ಬಜೆಟ್ ಅನ್ನು ಕೇಂದ್ರ ಸರಕಾರ ಶುಕ್ರವಾರದಂದು ಮಂಡಿಸಿದ್ದು, ಆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಶ್ರೀಮಂತ ನವ ಭಾರತದ ಕನಸನ್ನು ಗುರಿಯಲ್ಲಿಟ್ಟುಕೊಂಡು ಈ ಸಲವೂ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಗಳುಕೇಂದ್ರ ಬಜೆಟ್‌ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಗಳು

ಯುಪಿಎ ಸರಕಾರವು ಐದು ವರ್ಷದ ಹಿಂದೆ ಅಧಿಕಾರದಿಂದ ಕೆಳಗಿಳಿದ ಕತ್ತಲ ದಿನಗಳಿಂದ ದೇಶದ ಆರ್ಥಿಕತೆಯು ಬಹಳ ಮುಂದೆ ಬಂದಿದೆ. ಜಿಡಿಪಿ ಸಮಸ್ಯೆ, ಚಾಲ್ತಿ ಖಾತೆ ಕೊರತೆ, ಬಂಡವಾಳ ಕೊರತೆ, ವಿದೇಶಿ ಹೂಡಿಕೆದಾರರಲ್ಲಿ ಅನುಮಾನ, ಹಗರಣಗಳ ಕಾರಣಕ್ಕೆ ಹೂಡಿಕೆದಾರರ ಅನುಮಾನಕ್ಕೆ ಕಾರಣವಾಗಿತ್ತು ಎಂದಿದ್ದಾರೆ.

Budget 2019- Marks 5 years of Narendra Modi government rebuilding Indian economy

ಭಾರತದ ಆರ್ಥಿಕತೆ ಈಗ ಸುಧಾರಿಸಿದೆ. ಯುಪಿಎ ಸರಕಾರ ಕಾರಣವಾಗಿರುವ ಹಲವಾರು ಅನಾಹುತಗಳನ್ನು ಸಾರ್ವಜನಿಕ ನೆನಪಿನಿಂದ ತೆಗೆಯಲು ಸಾಧ್ಯವಿಲ್ಲ. ಆದರೆ ನರೇಂದ್ರ ಮೋದಿ ಅವರ ಸರಕಾರ ಸ್ಥಿರವಾದ ಆರ್ಥಿಕತೆ ನೀಡಿದೆ. 7 ಪರ್ಸೆಂಟ್ ಗೂ ಹೆಚ್ಚು ದರದಲ್ಲಿ ಪ್ರಗತಿ ಸಾಧಿಸಿದೆ. ಹಣದುಬ್ಬರ- ವಿತ್ತೀಯ ಕೊರತೆ ಹತೋಟಿಯಲ್ಲಿದೆ. ಕಳೆದ ನಾಲ್ಕು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ.

ತುಂಬ ಮುಖ್ಯವಾಗಿ ಸರಕಾರ ಅಂದರೆ ಭ್ರಷ್ಟಾಚಾರ ಎಂಬ ಭಾವನೆ ಇತ್ತಲ್ಲಾ, ಅದು ಬದಲಾಗಿ ಭ್ರಷ್ಟಾಚಾರಮುಕ್ತ, ನಿಗದಿತ ಗುರಿ ಇರುವ ಮತ್ತು ಶ್ರಮ ಪಡುವ ಸರಕಾರ ಅಧಿಕಾರದಲ್ಲಿದೆ ಎಂಬುದು ಅರಿವಿಗೆ ಬಂದಿದೆ ಎಂದಿದ್ದಾರೆ.

ಕೇಂದ್ರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ : ಎಚ್.ಡಿ.ಕುಮಾರಸ್ವಾಮಿಕೇಂದ್ರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ : ಎಚ್.ಡಿ.ಕುಮಾರಸ್ವಾಮಿ

ಈಗಿನ ಮಧ್ಯಂತರ ಬಜೆಟ್ ರೈತರಿಗೆ, ಮಧ್ಯಮ ವರ್ಗದವರಿಗೆ, ಅಸಂಘಟಿತ ವಲಯದವರಿಗೆ ಸಹಾಯ ಮಾಡಿದೆ. ಮಧ್ಯಮ ವರ್ಗದವರ ಪಾಲಿನ ಹೊರೆ ಇಳಿಸಿದೆ. ತಳ ವರ್ಗದವರಿಗೆ ನೆರವಿನ ಹಸ್ತ ಚಾಚಿದೆ. ಅತ್ಯಂತ ಕಡಿಮೆ ತೆರಿಗೆ ವಿಧಿಸುವ ದೇಶ ಎಂಬ ಪಟ್ಟಿಯಲ್ಲಿ ಭಾರತ ಕೂಡ ಸೇರುವ ಹಾದಿಯಲ್ಲಿದೆ. ಈಗಿನ ಬಜೆಟ್ ಹೆಚ್ಚು ಸ್ಪರ್ಧಾತ್ಮಕ, ಸಮರ್ಥ ಹಾಗೂ ಸ್ವಚ್ಛ ಆರ್ಥಿಕತೆಗೆ ಪೂರಕವಾಗಿದೆ. ಹೆಚ್ಚಿನ ದರದಲ್ಲಿ ಪ್ರಗತಿಯೆಡೆಗೆ ಸಾಗಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ನವ ಭಾರತ- ಸಮಾನ ಭಾರತ, ಸಮೃದ್ಧ ಭಾರತವನ್ನು ವಂಚಕ ಕುಟುಂಬ ರಾಜಕಾರಣದಿಂದ ನಿರ್ಮಿಸಲು ಸಾಧ್ಯವಿಲ್ಲ. ತೆರಿಗೆದಾರರ ಹಣ ಖರ್ಚು ಮಾಡುತ್ತಾ ಒಂದು ದಿನಕ್ಕೂ ಕೆಲಸ ಮಾಡದೆ, ಯಾರಿಂದ ಬಡತನ ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಯಿತೋ ನೆನಪಿಸಿಕೊಳ್ಳಿ. ಎಂಥವರ ಕೈಗೆ ಎಲ್ಲ ಭಾರತೀಯರ ಭವ್ಯ ಭವಿಷ್ಯ ನೀಡಬೇಕು ಎಂಬುದನ್ನು ತೀರ್ಮಾನಿಸಬೇಕಿದೆ ಎಂದು ಹೇಳಿದ್ದಾರೆ.

English summary
The interim budget has helped farmers, middle class and informal sector. The middle class has shouldered much of the burden of govts spending on the poor and other areas and this is governments way of acknowledging that and another step on the roadmap for higher tax compliance, lower tax rate nation, said by MP Rajeev Chandrasekhar in a press statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X