ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2019: ಪ್ರತಿ ಹಳ್ಳಿಗೆ ಅಂತರ್ಜಾಲ, ಮತ್ತೊಮ್ಮೆ ಘೋಷಣೆ

|
Google Oneindia Kannada News

ನವದೆಹಲಿ, ಜುಲೈ 05: ಕೇಂದ್ರ ಸರ್ಕಾರದ ಭಾರತ್ ನೆಟ್ ಯೋಜನೆಗೆ ತೀವ್ರಗತಿ ನೀಡಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಗುರಿ ಸಾಧನೆಗೆ ಹೆಚ್ಚಿನ ತೀವ್ರಗತಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರುಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ದೇಶದ ಎಲ್ಲ ಪಂಚಾಯಿತಿ ಹಾಗೂ ಗ್ರಾಮ ಕಾರ್ಯಾಲಯಕ್ಕೆ ಅಂತರ್ಜಾಲ ಲಭ್ಯತೆಯನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದರು.

Budget 2019: Internet through Bharat Net scheme

ಸಾರ್ವತ್ರಿಕ ಸೇವೆಗಳ ಭಾದ್ಯತೆ ನಿಧಿಯನ್ನು ಬಳಸಿಕೊಂಡು ಭಾರತ್‌ ನೆಟ್‌ಗೆ ವೇಗ ಒದಗಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಇದನ್ನು ಖಾಸಗಿ ಸಹಭಾಗಿತ್ವದೊಂದಿಗೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಯುಎಸ್ಒಎಫ್ ದೂರಸಂಪರ್ಕ ಇಲಾಖೆಯ (ಡಿಒಟಿ) ಸ್ವತಂತ್ರ ಸಂಸ್ಥೆಯಾಗಿದ್ದು, ಇದು ಗ್ರಾಮೀಣ ಭಾರತದಾದ್ಯಂತ ಟೆಲಿಕಾಂ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಧನ ನೀಡುತ್ತದೆ.

ಭಾರತ್‌ ನೆಟ್ ಯೋಜನೆಯು ಈಗಾಗಲೇ ವಿಳಂಬವಾಗಿದೆ. ಕಳೆದ ಬಾರಿಯೇ ಕೇಂದ್ರ ಸರ್ಕಾರವು ಈ ಯೋಜನೆಯ ಗುರಿ ಮುಟ್ಟುವುದಾಗಿ ಹೇಳಿತ್ತಾದರೂ ಇನ್ನೂ ಗುರಿ ಮುಟ್ಟಿಲ್ಲ, ಈಗ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್ ಅವರು ಭಾರತ್‌ ನೆಟ್ ಯೋಜನೆಯ ಗುರಿ ಮುಟ್ಟುವುದಾಗಿ ಹೇಳಿದ್ದಾರೆ.

English summary
Budget 2019: Nirmala Sitaraman announce that internet will be provided to every village panchayat across the county. The scheme already misses several deadlines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X