ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ,ಪಾಕ್ ಗಡಿಯಲ್ಲಿನ ಪ್ರಯತ್ನಕ್ಕಿಂತ ರೈತರ ವಿರುದ್ಧ ಕೇಂದ್ರದ ಷಡ್ಯಂತ್ರ ಹೆಚ್ಚಾಗಿದೆ:ಬಿಎಸ್‌ಪಿ

|
Google Oneindia Kannada News

ನವದೆಹಲಿ,ಫೆಬ್ರವರಿ 05: ಭಾರತ-ಪಾಕಿಸ್ತಾನ ಗಡಿಯಲ್ಲಿನ ಪ್ರಯತ್ನಕ್ಕಿಂತ ರೈತರ ವಿರುದ್ಧದ ಷಡ್ಯಂತ್ರವೇ ಹೆಚ್ಚಾಗಿದೆ ಎಂದು ಬಿಎಸ್‌ಪಿ ರಾಜ್ಯಸಭಾ ಸಂಸದ ಸತೀಶ್ ಚಂದ್ರ ಮಿಶ್ರಾ ಶುಕ್ರವಾರ ಹೇಳಿದ್ದಾರೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಕೇಂದ್ರ ಸರ್ಕಾರ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಸಭಾ ಸಂಸದ ಸತೀಶ್ ಚಂದ್ರ ಮಿಶ್ರಾ ಶುಕ್ರವಾರ ಆರೋಪಿಸಿದ್ದಾರೆ.

ಇದೇ ಬ್ಯಾರಿಕೇಡ್‌ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದರೆ ಭಾರತ ಹೀಗಿರುತ್ತಿರಲಿಲ್ಲ; ಶಿವಸೇನೆಇದೇ ಬ್ಯಾರಿಕೇಡ್‌ಗಳನ್ನು ಅಂತರರಾಷ್ಟ್ರೀಯ ಗಡಿಗಳಲ್ಲಿ ಹಾಕಿದ್ದರೆ ಭಾರತ ಹೀಗಿರುತ್ತಿರಲಿಲ್ಲ; ಶಿವಸೇನೆ

ಪ್ರತಿಷ್ಠೆ ಬಿಟ್ಟು ಕೃಷಿ ಕಾನೂನುಗಳನ್ನು ರದ್ದುಪಡಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಕೃಷಿ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸಿ

ಕೃಷಿ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸಿ

ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕಾನೂನಾತ್ಮಕ ಖಾತ್ರಿ ಒದಗಿಸಬೇಕು ಸ್ವಾಮಿನಾಥನ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ರೈತರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯಲಾಗುತ್ತಿದೆ

ರೈತರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯಲಾಗುತ್ತಿದೆ

ರೈತರನ್ನು ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ನೆನಪಿಟ್ಟುಕೊಳ್ಳಿ ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸರ್ಕಾರ ರಸ್ತೆಗಳಲ್ಲಿ ಮೊಳೆ ಹೊಡೆಯಲಾಗುತ್ತಿದೆ. ಇಂಡೋ- ಪಾಕ್ ಗಡಿಗಳಿಗಿಂತಲೂ ರೈತರ ವಿರುದ್ಧ ಕೇಂದ್ರ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ

ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ

ರೈತರು ತಮ್ಮ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರೈಲ್ವೆ, ತೈಲ, ಅನಿಲ , ಬಂದರನ್ನು ಕೂಡಾ ಮಾರಾಟ ಮಾಡುತ್ತಿದ್ದೀರಿ. ಸರ್ಕಾರಿ ಬ್ಯಾಂಕ್ ಗಳನ್ನು ಕೂಡಾ ಮಾರಾಟ ಮಾಡುವ ಮಾತುಗಳು ಕೇಳಿಬರುತ್ತಿವೆ. ಎಲ್ ಐಸಿ ಪಾಲುದಾರಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ರೈತರ ಭೂಮಿಯನ್ನು ಮಾರಾಟ ಮಾಡುವ ಮೂಲಕ ಜಮೀನ್ದಾರಿ ಪದ್ಧತಿಯನ್ನು ಮತ್ತೆ ಅಸ್ವಿತ್ವಕ್ಕೆ ತರುತ್ತಿದ್ದೀರಿ ಎಂದು ಅವರು ಆರೋಪಿಸಿದರು.

ರೈತರ ವಿರುದ್ಧ ಅಶ್ರುವಾಯು,ಜಲ ಫಿರಂಗಿ

ರೈತರ ವಿರುದ್ಧ ಅಶ್ರುವಾಯು,ಜಲ ಫಿರಂಗಿ

ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಯೋಧರನ್ನು ನಿಯೋಜಿಸಿದೆ. ರೈತರ ವಿರುದ್ಧ ಅಶ್ರುವಾಯು, ಜಲ ಫಿರಂಗಿಗಳನ್ನು ಬಳಸಲಾಗುತ್ತಿದೆ. ಆಹಾರ, ನೀರು ಪೂರೈಕೆ , ಶೌಚಾಲಯವನ್ನು ಬಂದ್ ಮಾಡಲಾಗಿದೆ. ಪ್ರತಿಭಟನಾಕಾರರ ನಡುವೆ ಮಹಿಳೆಯರು ಇದ್ದಾರೆ ಎಂಬುದನ್ನು ಅವರು ಯೋಚಿಸುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

English summary
Bahujan Samaj Party Rajya Sabha MP Satish Chandra Misra on Friday slammed the Centre and alleged that the Centre had adopted an oppressive approach towards the ongoing farmers' agitation against the three farm laws. He also urged the Centre to shun its ego and repeal the farm laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X