ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಗೆ ಕೇಂದ್ರ ಪೋಷಣೆ ಆರೋಪ:ಬಿಎಸ್‌ಎನ್‌ಎಲ್ ನೌಕರರ ಮುಷ್ಕರ

|
Google Oneindia Kannada News

ನವದೆಹಲಿ, ಡಿಸೆಂಬರ್ 3: ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 10ರಂದು ದೇಶವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.

ರಿಲಯನ್ಸ್ ಜಿಯೋ ಕಂಪನಿಯನ್ನು ಕೇಂದ್ರ ಸರ್ಕಾರ ಪೋಷಿಸುತ್ತಿದೆ ಎಂದು ದೂರಿರುವ ಬಿಎಸ್‌ಎನ್‌ಎಲ್ ಉದ್ಯೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಬಿಎಸ್ಎನ್ಎಲ್ ನಿಂದ ಹೊಸ ಬ್ರಾಡ್ ಬ್ಯಾಂಡ್ ಯೋಜನೆ ಬಿಎಸ್ಎನ್ಎಲ್ ನಿಂದ ಹೊಸ ಬ್ರಾಡ್ ಬ್ಯಾಂಡ್ ಯೋಜನೆ

4 ಜಿ ಸೇವೆ ಒದಗಿಸಲು ತರಂಗಗುಚ್ಛಗಳನ್ನು ಬಿಎಸ್‌ಎನ್‌ಎಲ್ ಗೆ ಸರ್ಕಾರ ವಿತರಣೆ ಮಾಡಿಲ್ಲ, ಜಿಯೋದ ಅಗ್ಗದ ದರದ ಸ್ಪರ್ಧೆಯಿಂದಾಗಿ ಇಡೀ ಟೆಲಿಕಾಂ ಉದ್ಯಮ ಸಂಕಷ್ಟದಲ್ಲಿದೆ. ಬಿಎಸ್‌ಎನ್‌ಎಲ್ ಸೇರಿದಂತೆ ತಮ್ಮ ಸ್ಪರ್ಧಿಗಳನ್ನು ತಮ್ಮ ಕಣದಿಂದ ಹೊರತಳ್ಳುವುದೇ ಜಿಯೋದ ಉದ್ದೇಶ ಎಂದು ಆರೋಪಿಸಿದ್ದಾರೆ.

BSNL employees will go indefinite strike from Dec.10

ಬಿಎಸ್ಎನ್ಎಲ್ ನಿಂದ 299ರು ಗಳ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಬಿಎಸ್ಎನ್ಎಲ್ ನಿಂದ 299ರು ಗಳ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್

2011-12ರಲ್ಲಿ 8,800 ಕೋಟಿ ರೂ ನಷ್ಟದಲ್ಲಿದ್ದ ಬಿಎಸ್‌ಎನ್‌ಎಲ್ 2014-15ರಲ್ಲಿ 672 ಕೋಟಿ ರೂ ಕಾರ್ಯಾಚರಣೆ ಲಾಭವನ್ನು ದಾಖಲಿಸಿದೆ. 4 ಜಿ ಇಲ್ಲದೆಯೇ 2 ಜಿ ಮತ್ತು 3 ಜಿ ಮೂಲಕವೇ ಬಿಎಸ್‌ಎನ್‌ಎಲ್ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತಿದೆ. 2017ರ ಜನವರಿಯಿಂದ ಅನ್ವಯವಾಗುವಂತೆ ಉದ್ಯೋಗಿಗಳ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮತ್ತಿತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ.

English summary
Alleging the union government is promoting Reliance JIO company, thousands of BSNL employees will go on indefinite strike from December 10 instead of December 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X