ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬಿನಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಿ ಡ್ರೋನ್: ಎಲ್ಲೆಲ್ಲೂ ಆತಂಕ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಪಾಕಿಸ್ತಾನಿ ಮೂಲದ ಡ್ರೋನ್ ವೊಂದು ಪಂಜಾಬಿನ ಫೆರೊಜೆಪುರ್ ಎಂಬಲ್ಲಿ ಹಾರಾಡುತ್ತಿದ್ದುದು, ಗಡಿ ಭದ್ರತಾ ಪಡೆ(ಬಿಎಸ್ ಎಫ್)ಯ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದು, ಆತಂಕ ಸೃಷ್ಟಿಯಾಗಿತ್ತು.

ಇದೇ ಡ್ರೋನ್ ಭದ್ರತಾ ಪಡೆಯ ಕಣ್ಣಿಗೆ ಐದಾರು ಬಾರಿ ಕಾಣಿಸಿದ್ದು, ಬೇರೆ ಬೇರೆ ಸಮಯದಲ್ಲಿ ಕಾಣಿಸಿಕೊಂಡಿತ್ತು.

ಚೀನಾ ಡ್ರೋನ್ ಮೂಲಕ ಪಾಕಿಸ್ತಾನದಿಂದ ಪಂಜಾಬಿಗೆ ಬಂದ ಶಸ್ತ್ರಾಸ್ತ್ರಗಳು! ಚೀನಾ ಡ್ರೋನ್ ಮೂಲಕ ಪಾಕಿಸ್ತಾನದಿಂದ ಪಂಜಾಬಿಗೆ ಬಂದ ಶಸ್ತ್ರಾಸ್ತ್ರಗಳು!

ಈ ಡ್ರೋನ್ ಗಳನ್ನು ಪಾಕಿಸ್ತಾನವೇ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ರವಾನೆಮಾಡಲು ಬಳಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

BSF spotted Pakistani Origin Drone In Punjab

ಇತ್ತೀಚೆಗಷ್ಟೇ ಪಂಜಾಬಿನ ತಾರ್ನ್ ತರಾನ್ ನಲ್ಲಿ ಸುಟ್ಟ ಡ್ರೋನ್ ವೊಂದು ಪತ್ತೆಯಾಗಿತ್ತು. ಚೀನಾಕ್ಕೆ ಸೇರಿದ ಈ ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅವಂತಿಪೊರ, ಜಮ್ಮು, ಪಠಾಣ್ ಕೋಟ್ ಮತ್ತು ಹಿಂಡನ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ

ಮೂಲಗಳ ಪ್ರಕಾರ ಆ ಡ್ರೋನ್ ಮೂಲಕ ಹತ್ತು ದಿನಗಳಲ್ಲಿ ಸುಮಾರು 80 ಕೆಜಿ ತೂಕದ ಶಸ್ತ್ರಾಸ್ತ್ರವನ್ನು ಪಂಜಾಬಿಗೆ ಸಾಗಿಸಲಾಗಿದೆ.

English summary
The Board Security Force Spotted a Pakistani-origin drone in the Ferozepur area of Punjab near the international border,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X