ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿತ ಬಿಎಸ್ಎಫ್ ಯೋಧರ ಸಂಪರ್ಕದಿಂದ 22 ಮಂದಿಗೆ ಕೊರೊನಾ!

|
Google Oneindia Kannada News

ನವದೆಹಲಿ, ಮೇ.07: ನೊವೆಲ್ ಕೊರೊನಾ ವೈರಸ್ ಸೋಂಕು ಭಾರತೀಯ ಗಡಿ ರಕ್ಷಣಾ ಪಡೆ(BSF)ಯ ಜೊತೆ ಸಂಪರ್ಕದಲ್ಲಿದ್ದ 22 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ 22 ಮಂದಿಗೆ ಅಂಟಿಕೊಂಡಿದೆ.

ಅಂಬಸ್ಸಾ ಪ್ರದೇಶದಲ್ಲಿ ನಿಯೋಜನೆಗೊಂಡ ಬಿಎಸ್ಎಫ್ ಯೋಧರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಸೋಂಕಿತ ಯೋಧರ ಜೊತೆಗೆ ಸಂಪರ್ಕದಲ್ಲಿದ್ದ 22 ಜನರಿಗೆ ಇದೀಗ ಕೊವಿಡ್-19 ತಗಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್ ತಿಳಿಸಿದ್ದಾರೆ.

ಕೋವಿಡ್19: ಉಬರ್ ಸಂಸ್ಥೆಯಿಂದ 3,700 ಮಂದಿ ಉದ್ಯೋಗ ಕಡಿತಕೋವಿಡ್19: ಉಬರ್ ಸಂಸ್ಥೆಯಿಂದ 3,700 ಮಂದಿ ಉದ್ಯೋಗ ಕಡಿತ

ಗುರುವಾರ ಪತ್ತೆಯಾದ 22 ಮಂದಿ ಕೊರೊನಾ ವೈರಸ್ ಸೋಂಕಿತರ ಪೈಕಿ 18 ಪುರುಷರು, ಒಬ್ಬ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಇದುವರೆಗೂ 62 ಸೋಂಕಿತರ ಪೈಕಿ ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

 BSF Soldier Link: 22 People Get Coronavirus Positive In Tripura

ಮೇ.02ರಂದು ಬಿಎಸ್ಎಫ್ ಯೋಧರಿಗೆ ಕೊರೊನಾ:

ಧಲಾಯಿ ಜಿಲ್ಲೆಯ ಅಂಬಸ್ಸಾ ಪ್ರದೇಶದಲ್ಲಿದ್ದ ಬಿಎಸ್ಎಫ್ ಕೇಂದ್ರ ಕಚೇರಿಯಲ್ಲಿನ ಇಬ್ಬರು ಯೋಧರಿಗೆ ಮೇ.02ರಂದು ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಅದಾಗಿ ಮರುದಿನವೇ 12 ಮಂದಿ ಯೋಧರಿಗೆ ಕೊವಿಡ್-19 ಪಾಸಿಟಿವ್ ಎಂದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿತ್ತು.

ಮೇ.04ರಂದು ಮತ್ತೆ 13 ಬಿಎಸ್ಎಫ್ ಯೋಧರಿಗೆ ಕೊರೊನಾ ವೈರಸ್ ಅಂಟಿಕೊಂಡಿದ್ದು, ಮೇ.05ರಂದು 13 ಮಂದಿಗೆ ಮಹಾಮಾರಿ ತಗಲಿದೆ ಎಂಬುದು ಪತ್ತೆಯಾಗಿತ್ತು. ತ್ರಿಪುರಾದಲ್ಲಿ ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಬಹುಪಾಲು ಬಿಎಸ್ಎಫ್ ನ 138 ಬೆಟಾಲಿಯನ್ ಯೋಧರು ಮತ್ತು ಅವರ ಕುಟುಂಬದವರೇ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

English summary
BSF Soldier Link: 22 People Get Coronavirus Positive In Tripura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X