ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಗಲಭೆಯಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ನೆರವು

|
Google Oneindia Kannada News

ನವದೆಹಲಿ, ಮಾರ್ಚ್ 2: ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ಸಹಾಯಹಸ್ತ ಚಾಚಿದೆ.

ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧ ಮಹಮದ್ ಅನೀಸ್ ಗೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) 10 ಲಕ್ಷ ರೂಗಳ ಆರ್ಥಿಕ ನೆರವು ನೀಡಿದೆ.

ಇತ್ತೀಚೆಗೆ ಸಂಭವಿಸಿದ್ದ ಹಿಂಸಾಚಾರದ ವೇಳೆ ಮನೆಯ ಹೊರಗಡೆ ಮೊಹಮ್ಮದ್‌ ಅನೀಸ್‌, ಬಿಎಸ್‌ಎಫ್‌ ಯೋಧ' ಎಂದು ಬರೆದಿದ್ದ ನೇಮ್‌ ಪ್ಲೇಟ್‌ ಹಾಕಲಾಗಿತ್ತು.

bsf

ಇದಾವುದನ್ನೂ ಲೆಕ್ಕಿಸದ ಗಲಭೆಕೋರ "ಯೋಧನನ್ನೇ ಹೊರಗೆ ಬಾರೋ ಪಾಕಿಸ್ತಾನಿ, ನಿನಗೆ ಪೌರತ್ವ ಕೊಡುತ್ತೇವೆ' ಎಂದು ಚೀರಿದ್ದ. ನಂತರ ಗ್ಯಾಸ್‌ ಸಿಲಿಂಡರ್‌ ಎಸೆದು ಮನೆಗೆ ಬೆಂಕಿ ಹಚಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ಮದುವೆ ಗಿಫ್ಟ್!ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧನಿಗೆ ಬಿಎಸ್‌ಎಫ್ ಮದುವೆ ಗಿಫ್ಟ್!

ಈ ಹಿಂದೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಖಾಸ್‌ ಖಜೂರಿ ಗಾಲಿ ಪ್ರದೇಶದಲ್ಲಿನ ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್‌ ಅನೀಸ್​​​ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

ಈ ವಿಚಾರವೀಗ ತಡವಾಗಿ ಬೆಳಕಿಗೆ ಬಂದಿತ್ತು. ವಿಚಾರ ತಿಳಿದ ಕೂಡಲೇ ನೆರವಿಗೆ ಧಾವಿಸಿದ್ದ ಬಿಎಸ್ಎಫ್ ಯೋಧ ಮೊಹಮ್ಮದ್‌ ಅನೀಸ್​​​ಗೆ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿತ್ತು.

ಈ ಕುರಿತಂತೆ ಮಾತನಾಡಿದ್ದ ಬಿಎಸ್​​ಎಫ್​​​ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್(ಡಿಐಜಿ) ಪುಷ್ಪೇಂದ್ರ ರಾಥೋಡ್ ಅವರು, ಯೋಧ ಮೊಹಮ್ಮದ್‌ ಅನೀಸ್​​ ಮದುವೆಗೆ ಹೊಸ ಮನೆ ಕಟ್ಟಿಸಿ ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಇದೀಗ ಯೋಧ ಅನೀಸ್ ಗೆ ಬಿಎಸ್ಎಫ್ 10 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದೆ.

ಘಟನೆಯಲ್ಲಿ ಯೋಧ ಅನೀಸ್ ಮನೆ ಸುಟ್ಟು ಹೋಗಿದ್ದಲ್ಲದೇ ಮೊಹಮ್ಮದ್​​ ಅನೀಸ್​​ ಮದುವೆಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 3 ಲಕ್ಷ ರೂ. ನಗದು ಸುಟ್ಟು ಕರಕಲಾಗಿದೆ. ಹಾಗೆಯೇ ಚಿನ್ನಾಭರಣಗಳು ಕೂಡ ಭಸ್ಮಗೊಂಡಿವೆ ಎಂದು ಯೋಧರ ಕುಟುಂಬ ತಮ್ಮ ಕಷ್ಟವನ್ನು ಹೇಳಿಕೊಂಡಿದೆ.

English summary
BSF constable Mohammad Anees, whose house was set on fire during #DelhiViolence, was presented a cheque of Rs. 10 lakhs by Inspector General of BSF DK Upadhyay today for immediate aid. BSF is also conducting repair work of his burnt house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X