ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಎಫ್ ವಿಮಾನ ದುರಂತ, 10 ಯೋಧರ ಸಾವು

By Mahesh
|
Google Oneindia Kannada News

ನವದೆಹಲಿ, ಡಿ.22: ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ಲಘು ವಿಮಾನ ಅಪಘಾತಕ್ಕೀಡಾಗಿದೆ. ದೆಹಲಿಯ ವಿಮಾನ ನಿಲ್ದಾಣ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ವಿಮಾನದಲ್ಲಿದ್ದ ಯೋಧರೆಲ್ಲರೂ ದುರಂತ ಸಾವಿಗೀಡಾಗಿದ್ದಾರೆ.

ಈ ವಿಮಾನದಲ್ಲಿ ಗಡಿ ಭದ್ರತಾ ಪಡೆಯ ತಾಂತ್ರಿಕ ಸಿಬ್ಬಂದಿಗಳಿದ್ದರು. ವಿಮಾನದಲ್ಲಿದ್ದ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ಗೋಡೆಗೆ ಬಡಿದು ನೆಲಕ್ಕುರುಳಿದಿದೆ.

BSF Plane Carrying 10 People Crashes Near Delhi Airport

ಕ್ಷಣ ಮಾತ್ರದಲ್ಲೇ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದೆ. ವಿಮಾನ ನಿಲ್ದಾಣಕ್ಕೆ 15ಕ್ಕೂ ಅಧಿಕ ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕೆ ಆಗಮಿಸಿವೆ.

ಬಿಎಸ್ಎಫ್ ನ ಉನ್ನತ ಅಧಿಕಾರಿಗಳು, ಸಚಿವರು ಬಳಸುತ್ತಿದ್ದ ಈ ಲಘುವಿಮಾನದಲ್ಲಿ ಒಬ್ಬ ಡೆಪ್ಯುಟಿ ಕಮ್ಯಾಂಡೆಂಟ್ ಸೇರಿದಂತೆ ಹಿರಿಯ ತಾಂತ್ರಿಕ ಸಿಬ್ಬಂದಿ ಮಾತ್ರ ಇದ್ದರು. ದೆಹಲಿಯಿಂದ ರಾಂಚಿಗೆ ತೆರಳಿ ಅಲ್ಲಿ ಹೆಲಿಕಾಪ್ಟರ್ ರಿಪೇರಿ ಮಾಡಬೇಕಾಗಿತ್ತು. ಆದರೆ, ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
A small plane of the Border Security Force (BSF) crashed into a wall near the Delhi airport this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X