ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮಾಲಿನ್ಯ: 2018 ರಲ್ಲೇ ಬಿಎಸ್ VI ಇಂಧನ ನಿಯಮ ಜಾರಿ

|
Google Oneindia Kannada News

ನವದೆಹಲಿ, ನವೆಂಬರ್ 15: ನವದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ. ದೆಹಲಿ ಮಾಲಿನ್ಯಕ್ಕೆ ವಾಹನಗಳೇ ಪ್ರಮುಖ ಕಾರಣ ಎಂದು ಭಾವಿಸಿರುವ ಸರ್ಕಾರ, 2020 ರಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಬಿಎಸ್(ಭಾರತ್ ಸ್ಟೇಜ್) VI ಇಂಧನ ನಿಯಮಗಳನ್ನು, ದೆಹಲಿಯಲ್ಲಿ 2018 ಏಪ್ರಿಲ್ ನಲ್ಲೇ ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ.

ಬಿಎಸ್ III ವಾಹನ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧಬಿಎಸ್ III ವಾಹನ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಗ್ಯಾಸ್ ಸಚಿವ ಧರ್ಮೇಂದ್ರ ಪ್ರಧಾನ್, "2020 ಏಪ್ರಿಲ್ 1 ರಂದು ಜಾರಿಗೆ ತರಬೇಕಿದ್ದ ಬಿಎಸ್ VI ಇಂಧನ ನಿಯಮಗಳನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2018 ಏಪ್ರಿಲ್ 1 ರಂದೇ ಜಾರಿಗೆ ತರಲಾಗುವುದು ಎಂಬ ಸಂತಸದ ಸುದ್ದಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

BS VI fuel norms for cars will be implemented on April 1st 2018 in NCR, Delhi

ಬಿಎಸ್ III ಇಂಜಿನ್ ಪ್ರೇರಿತ ವಾಹನಗಳ ಮೇಲೆ ಈಗಾಗಲೇ ಸರ್ಕಾರ ನಿಷೇಧ ಹೇರಿದ್ದು, ಅವುಗಳ ಉತ್ಪಾದನೆಯೂ ನಿಂತಿದೆ. ಪ್ರಸ್ತುತ ಉತ್ಪಾದನೆಯಾಗುತ್ತಿರುವ ವಾಹನಗಳು ಬಿಎಸ್ IV ಇಂಜಿನ್ ಪ್ರೇರಿತ ವಾಹನಗಳೇ ಆಗಿವೆ. ಇದೀಗ ಆದಷ್ಟು ಶೀಘ್ರವಾಗಿ ಬಿಎಸ್ VI ಇಂಧನ ನಿಯಮಗಳನ್ನೂ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಆಟೊಮೊಬೈಲ್ ಕ್ಷೇತ್ರದಲ್ಲಿ ಬಿಎಸ್ V ಗೆ ಬದಲಾಗಿ ನೇರವಾಗಿ ಬಿಎಸ್ VI ಇಂಧನ ನಿಯಮಗಳನ್ನೇ ಜಾರಿಗೆ ತರಲು ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಪಾಶ್ಚಾತ್ಯ ರಾಷ್ಟ್ರಗಳೆಲ್ಲ ಯುರೂ VI ಇಂಜಿನ್ ನಿಯಮಗಳನ್ನು ಪಾಲಿಸುತ್ತಿವೆ. ಭಾರತದಲ್ಲೂ ಬಿಎಸ್ VI ಇಂಜಿನ್ ನಿಯಮ ಆದಷ್ಟು ಬೇಗ ಜಾರಿಗೆ ಬರುವ ಅಗತ್ಯದೆ ಎಂದು ಪ್ರಧಾನ್ ತಿಳಿಸಿದ್ದಾರೆ.

ದೆಹಲಿಯಲ್ಲಿ4 ಲಕ್ಷ ವಾಹನಗಗಳಿಗೆ ಜಪ್ತಿಯಾಗುವ ಭೀತಿ!ದೆಹಲಿಯಲ್ಲಿ4 ಲಕ್ಷ ವಾಹನಗಗಳಿಗೆ ಜಪ್ತಿಯಾಗುವ ಭೀತಿ!

ಭಾರತೀಯ ಆಟೊಮೊಬೈಲ್ ಸಂಸ್ಥೆಗಳು 2020 ರ ಹೊತ್ತಿಗೆ ಬಿಎಸ್ VI ಇಂಧನ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದವು. ಇದೀಗ ಏಕಾಏಕಿ ಎರಡು ವರ್ಷ ಮೊದಲೇ ಇದನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿರುವುದು ಆಟೋಮೊಬೈಲ್ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಿಯಮ ದೆಹಲಿಗೆ ಮಾತ್ರ ಅನ್ವಯವಾಗಲಿದೆ.

English summary
To Control pollution in Delhi, central government has decided to implement BS VI car fuel norms in Delhi(NCR). Union minister for petroleum and natural gas, Dharmendra Pradhan tweeted, government's decision to prepone BS VI deadline, which is on 2020, April 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X