ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿ ತನ್ನಿ: ಚಿದಂಬರಂ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03: ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಟುವಾಗಿ ಟೀಕಿಸಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಅವನ್ನು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಅಡಿಯಲ್ಲಿ ತರಲು ಒತ್ತಾಯಿಸಿದ್ದಾರೆ.

ಗಗನಕ್ಕೆರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಅನಿವಾರ್ಯವಲ್ಲ. ಅವರನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ. ಇದೀಗ ಅತಿಯಾದ ತೆರಿಗೆಯಿಂದಾಗಿ ಅದಕ್ಕೆ ಹೆಚ್ಚಿನ ಬೆಲೆ ತೆರಬೇಕಾಗಿದೆ. ತೆರಿಗೆ ಕಡಿಮೆಯಾದರೆ ದರವೂ ಕಡಿಮೆಯಾಗುತ್ತದೆ. ಆದ್ದರಿಂದ ಇಂಧನವನ್ನು ಜಿಎಸ್ಟಿ ಅಡಿಯಲ್ಲಿ ತರಬೇಕು ಎಂದು ಕಾಂಗ್ರೆಸ್ ಮುಖಂಡ ಚಿದಂಬರಂ ಹೇಳಿದ್ದಾರೆ.

ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...

ಫೆಟ್ರೋಲ್ ಡಿಸೆಲ್ ದರವನ್ನು ಜಿಎಸ್ಟಿ ಅಡಿಯಲ್ಲಿ ತರಲಾಗದಿರುವುದಕ್ಕೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ದೂರುವುದು ಅಚ್ಚರಿ ಎನ್ನಿಸಿದೆ. 19 ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಬಿಜೆಪಿಯೇ. ಹೀಗಿರುವಾಗ ರಾಜ್ಯ ಸರ್ಕಾರಗಳ ಮನವೊಲಿಸುವುದು ಕೇಂದ್ರಕ್ಕೆ ಹೇಗೆ ಕಷ್ಟವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

Bring petrol, diesel under GST immediately: P Chidambram

ಸತತ 8ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ!ಸತತ 8ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ!

ಸೆ.3ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 81.72 ರೂ.ದಾಖಲಾಗಿತ್ತು. ಡೀಸೆಲ್ ಬೆಲೆ ಲೀಟರ್ ಗೆ 73.44 ರೂ. ಇತ್ತು. ಮುಂಬೈಯಲ್ಲಿ ಡೀಸೆಲ್ ದರ ಲೀಟರ್ ಗೆ 75.54 ರೂ.ತಲುಪಿದ್ದರೆ, ಪೆಟ್ರೋಲ್ ದರ ಬರೋಬ್ಬರಿ 86.56 ರೂ.ತಲುಪಿದೆ.

English summary
Criticising the Centre over the "relentless" rise in prices of petrol and diesel, former Finance Minister P. Chidambaram on Monday said that the Congress party demands petrol and diesel be brought under the Goods and Services Tax (GST) immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X