ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಂಜಾನ್‌ನಲ್ಲಿ ಮುಸ್ಲಿಂ ಸಿಬ್ಬಂದಿಗೆ ಬ್ರೇಕ್' ಆದೇಶವನ್ನು ಹಿಂಪಡೆದ ದೆಹಲಿ ಜಲಮಂಡಳಿ

|
Google Oneindia Kannada News

ನವದೆಹಲಿ ಏಪ್ರಿಲ್ 6: ರಂಜಾನ್ ಸಮಯದಲ್ಲಿ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ಪ್ರತಿದಿನ ಎರಡು ಗಂಟೆಗಳ ಕಾಲ ವಿರಾಮ ನೀಡಿರುವುದನ್ನು ಹಿಂಪಡೆಯಲಾಗಿದೆ. ಜೊತೆಗೆ ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ದೆಹಲಿ ಜಲ ಮಂಡಳಿ ಮಂಗಳವಾರ ಆದೇಶವನ್ನು ಮಾಡಿದೆ.

ತನ್ನ ಆದೇಶದಲ್ಲಿ ಜನಮಂಡಳಿ ರಂಜಾನ್ ದಿನಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಅಲ್ಪ ರಜೆ (ದಿನಕ್ಕೆ ಸರಿಸುಮಾರು ಎರಡು ಗಂಟೆಗಳ ಕಾಲ) ನೀಡಿರುವುದನ್ನು ಹಿಂಪಡೆದಿರುವುದಾಗಿ ಏಪ್ರಿಲ್ 4, 2022 ರಂದು ಸುತ್ತೋಲೆ ಹೊರಡಿಸಿದೆ. ಮಾತ್ರವಲ್ಲದೆ ಸುತ್ತೋಲೆ ತಕ್ಷಣವೇ ಜಾರಿಗೆ ಬರುವಂತೆ ಆದೇಶಿಸಿದೆ.

Ramadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆRamadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆ

ಸೋಮವಾರ DJB ಮುಸ್ಲಿಂ ಉದ್ಯೋಗಿಗಳಿಗೆ "ರಂಜಾನ್ ಸಮಯದಲ್ಲಿ ಅಂದರೆ ಏಪ್ರಿಲ್ 3 ರಿಂದ ಮೇ 2 ರವರೆಗೆ ಅಥವಾ ರಂಜಾನ್ ಉಪವಾಸದ ದಿನಗಳಲ್ಲಿ ಘೋಷಿಸಿರುವ ಅಲ್ಪ ರಜೆಯನ್ನು (ದಿನಕ್ಕೆ ಸರಿಸುಮಾರು ಎರಡು ಗಂಟೆಗಳ ಕಾಲ) ಅನುಮತಿಸದಂತೆ ನಿರ್ಧರಿಸಿದೆ ಎಂದು ಹೇಳಿದೆ. ಕಚೇರಿ ಕೆಲಸವು ತೊಂದರೆಯಾಗದಂತೆ ನೋಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಈ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಪೂರೈಸುತ್ತಾರೆ ಎಂಬ ಷರತ್ತಿನೊಂದಿಗೆ ಇದನ್ನು ಹಿಂಪಡೆಯಲಾಗಿದೆ" ಎಂದು ಡಿಜೆಬಿ ಹೇಳಿದೆ.

Break For Muslim Staff During Ramzan Order Withdrawn By Delhi Water Body

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ, ಇಸ್ಲಾಂ ಧರ್ಮದ ಅನುಯಾಯಿಗಳು ಮುಂಜಾನೆ ಮತ್ತು ಸೂರ್ಯಾಸ್ತದ ನಡುವೆ ಉಪವಾಸ ಮಾಡುತ್ತಾರೆ, ಶಾಂತಿ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಾರೆ. ದಾನ ಅಥವಾ ಹಿಂದುಳಿದವರಿಗೆ ಆಹಾರ ನೀಡುವಂತಹ ಮಾನವೀಯ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಮೂಲಕ ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ ಎರಡು ಗಂಟೆಗಳ ಬಿಡುವಿನ ಸಮಯವನ್ನು ಜಲಮಂಡಳಿ ಹಿಂಪಡೆದುಕೊಂಡಿದೆ.

Break For Muslim Staff During Ramzan Order Withdrawn By Delhi Water Body

ದೇಶದಲ್ಲಿ ಹಿಜಾಬ್, ಹಲಾಲ್ ಕಟ್, ಮಸ್ಲಿಂಮರಿಗೆ ಆರ್ಥಿಕ ನಿರ್ಬಂಧ, ಮಸೀದ್‌ಗಳಲ್ಲಿ ಧ್ವನಿವರ್ಧಕ ನಿಷೇಧದಂತಹ ಬೆಳವಣಿಗಳ ನಡುವೆ ಡಿಜೆಬಿ ಈ ಆದೇಶವನ್ನು ಹೊರಡಿಸಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.

English summary
The Delhi Jal Board on Tuesday withdrew the order with immediate effect which granted a two-hour break every day to all Muslim employees during Ramzan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X