ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೋತ್ ಸಿಧುನನ್ನು ಪಾಕಿಸ್ತಾನಕ್ಕೆ ಕಳಿಸಿ, ದೇಶಭಕ್ತರ ಆಕ್ರೋಶ

|
Google Oneindia Kannada News

ನವದೆಹಲಿ, ಫೆಬ್ರವರಿ 16: ಬಜೆಪಿ ತೊರೆದು ಕಾಂಗ್ರೆಸ್ ಸೇರಿದಾಗಿನಿಂದಲೂ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಈ ದಾಳಿಗೆ ಪಾಕಿಸ್ತಾನವನ್ನು ದೂರುವುದು ಎಷ್ಟು ಸರಿ. ಯಾರೋ ಒಂದಿಬ್ಬರು ಮಾಡಿದ ಕೆಲಸಕ್ಕೆ ಇಡೀ ದೇಶವನ್ನು ದೂರಬೇಕೆ ಎಂದು ಪ್ರಶ್ನಿಸಿದ್ದರು.

ಕಳೆದ ವರ್ಷ ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಮತ್ತು ಪಾಕಿಸ್ತಾನದ ನೂತನ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಭಾಗವಹಿಸುವ ಮೂಲಕ ಸಾಕಷ್ಟು ವಿವಾದ ಸೃಷ್ಟಿಸಿದ್ದರು.

ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ ನವಜೋತ್ ಸಿಂಗ್ ಸಿದ್ದು, ವ್ಯಾಪಕ ಆಕ್ರೋಶ

ಇದೀಗ ಅವರು ಪುಲ್ವಾಮಾ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಸಿದೆ. ಅವರ ನಡೆಯನ್ನು ಟ್ವಿಟ್ಟರ್ ನಲ್ಲಿ ಸಾಕಷ್ಟು ಜನ ಖಂಡಿಸಿದ್ದಾರೆ. ಇಂಥವರನ್ನು ದೇಶದಿಂದ ಓಡಿಸಿ ಎಂದಿದ್ದಾರೆ

Array

ಆಗ ಸುಮ್ಮನಿರುತ್ತಿದ್ದಿರಾ?

ಸಿಧು, ನಿಮ್ಮಂಥ ಜನರನ್ನು ಹೊಂದಿರುವುದಕ್ಕೆ ನಮಗೆ ಅಸಹ್ಯ ಎನ್ನಿಸುತ್ತಿದೆ. ಅಕಸ್ಮಾತ್ ನಿಮ್ಮ ಕುಂಟುಂಸ್ಥರನ್ನೇ ಹೀಗೆ ಕೊಂದಿದ್ದರೆ ಕ್ಷಮಿಸುತ್ತಿದ್ದಿರಾ?, ಆಗಲೂ ಪಾಕ್ ಜೊತೆ ಮಾತುಕತೆ ನಡೆಸೋಣ ಎನ್ನುತ್ತಿದ್ದಿರಾ?ಸ ಎಂದು ನವನೀತ್ ಕುಮಾರ್ ಪ್ರಶ್ನಿಸಿದ್ದಾರೆ.

ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?

ಉಗ್ರರನ್ನು ಕ್ಷಮಿಸುವವರನ್ನು ಬಹಿಷ್ಕರಿಸಿ

ಹೀಗೆ ಉಗ್ರರನ್ನು ಕ್ಷಮಿಸುವಂತೆ ಮಾತನಾಡುವವರನ್ನು ಮೊದಲು ಬಹಿಷ್ಕರಿಸಿ ಎಂದು ಜಯಂತ್ ಡೊಯ್ಗೇರ್ ಟ್ವೀಟ್ ಮಾಡಿದ್ದಾರೆ.

ಚಾನೆಲ್ ನಿಂದಲೂ ಬಹಿಷ್ಕರಿಸಿ

"ಪ್ರೀತಿಯ ಸೋನಿ ಟಿವಿ, ನೀವು ಕಾಮಿಡಿ ವಿಥ್ ಕಪಿಲ್ ಶೋದಿಂದ ನವಜೋತ್ ಸಿಂಗ್ ಸಿಧು ಅವರನ್ನು ಕಿತ್ತು ಬಿಸಾಕದೆ ಇದ್ದಲ್ಲಿ ನಾವೆಲ್ಲರೂ ಆ ಚಾನೆಲ್ ಮತ್ತು ಶೋವನ್ನೇ ಬಹಿಷ್ಕರಿಸುತ್ತೇವೆ" ಎಂದು ಆತುಲ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಘನತೆಗೆ ಪೆಟ್ಟು

"ಈ ವ್ಯಕ್ತಿ ಸದಾ ತಾನೂ ಮಣ್ಣಿನ ಮಗ ಎನ್ನುತ್ತಾರೆ. ತಾವು ಏನಾಗಿದ್ದೇವೋ ಅದಕ್ಕೆ ಕಾರಣ ಈ ದೇಶ ಎಂಬುದು ಅವರಿಗೆ ಗೊತ್ತಿರಬೇಕು. ಆ ಕೃತಜ್ಞತೆ ಇರಬೇಕು. ಕಪಿಲ್ ಶರ್ಮಾ ಶೋ ಒಂದು ಸಣ್ಣ ಉದಾಹರಣೆ, ಆದರೆ ಈ ವ್ಯಕ್ತಿ ನಮ್ಮ ದೇಶದ ಘನತೆಯನ್ನು ಕಡಿಮೆ ಮಾಡುತ್ತಿದ್ದಾರೆ" ಎಂದು ನಿಮಿಷಾ ಗುಪ್ತ ಟ್ವೀಟ್ ಮಾಡಿದ್ದಾರೆ.

ಶಾಶ್ವತವಾಗಿ ಪಾಕಿಸ್ತಾನಕ್ಕೆ ಕಳಿಸಿ

ಇಡೀ ಪಂಜಾಬಿನಲ್ಲೇ ಈ ಸಿಧು ಒಬ್ಬ ನಾಚಿಕೆಗೇಡು ವ್ಯಕ್ತಿ. ಆತ ಜಾತ್ ಸಮುದಾಯಕ್ಕೇ ಅವಮಾನ. ಆತನನ್ನು ಶಾಶ್ವತವಾಗಿ ಪಾಕಿಸ್ತಾನಕ್ಕೆ ಕಳಿಸಿ ಎಂದಿದ್ದಾರೆ ಜಿತೇಂದ್ರ ಕೆರೈ.

English summary
Former cricketer and Congress MLA Navjot Singh Sidhu's comment on Pulwama terror attack, in which he stated, How whole Pakistan is responsible for this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X