ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಬೂಸ್ಟರ್ ಡೋಸ್

|
Google Oneindia Kannada News

ನವದೆಹಲಿ, ಜನವರಿ 22: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ಸೋಂಕಿತರಿಗೆ ಲಸಿಕೆ ನೀಡಿಕೆ ಸಂಬಂಧ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸೋಂಕಿತರು ಗುಣಮುಖರಾದ 3 ತಿಂಗಳ ನಂತರ ಅವರಿಗೆ ಬೋಸ್ಟರ್‌ ಡೋಸ್‌ ನೀಡಲಾಗುತ್ತದೆ ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ತಿಳಿಸಿದ್ದಾರೆ.

ಎರಡು-ಮೂರು ವಾರಗಳಲ್ಲಿ ಕೋವಿಡ್ 3ನೇ ಅಲೆ ತೀವ್ರತೆ ಕಡಿಮೆಯಾಗಲಿದೆ: ಡಾ.ಸುಧಾಕರ್ಎರಡು-ಮೂರು ವಾರಗಳಲ್ಲಿ ಕೋವಿಡ್ 3ನೇ ಅಲೆ ತೀವ್ರತೆ ಕಡಿಮೆಯಾಗಲಿದೆ: ಡಾ.ಸುಧಾಕರ್

ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಆರಂಭಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ.

Booster Dose 3 Months After Covid Recovery: Centres New Rule

ಕೋವಿಡ್ ಸೋಂಕಿತ ಅರ್ಹ ವ್ಯಕ್ತಿಗಳಿಗೆ ಬೂಸ್ಟರ್‌ ಡೋಸೇಜ್ ಬಗ್ಗೆ ಮಾರ್ಗದರ್ಶನಕ್ಕಾಗಿ ವಿವಿಧ ವಲಯಗಳಿಂದ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ವಿಕಾಸ್ ಶೀಲ್ ಹೇಳಿದ್ದಾರೆ.

ಈ ಸಂಬಂಧ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಸೋಂಕು ಕಂಡುಬಂದ ನಂತರ ಮೂರು ತಿಂಗಳ ವರೆಗೆ ಲಸಿಕೆ ನೀಡುವುದಿಲ್ಲ. ಈ ಸಲಹೆಯು ವೈಜ್ಞಾನಿಕ ಪುರಾವೆ ಹಾಗೂ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಸುಮಾರು ಶೇಕಡಾ 63 ರಷ್ಟು ಅರ್ಹ ಆರೋಗ್ಯ ಕಾರ್ಯಕರ್ತರು, ಶೇಕಡಾ 58 ರಷ್ಟು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಶೇ.39 ರಷ್ಟು ಜನ ಕೋವಿಡ್-19 ಮುನ್ನೆಚ್ಚರಿಕೆ ಡೋಸ್(ಬೂಸ್ಟರ್ ಡೋಸ್) ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, 35 ಲಕ್ಷ ಆರೋಗ್ಯ ಕಾರ್ಯಕರ್ತರಲ್ಲಿ ಸುಮಾರು 22.66 ಲಕ್ಷ ಜನ ಬೂಸ್ಟರ್ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದರು.

ಇನ್ನೂ 33 ಲಕ್ಷ ಮುಂಚೂಣಿ ಕಾರ್ಯಕರ್ತರ ಪೈಕಿ ಈಗಾಗಲೇ 191400 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಅದು ಶೇಕಡಾ 58 ರಷ್ಟಿದೆ ಎಂದು ಅವರು ಹೇಳಿದರು.

"60 ವರ್ಷಕ್ಕಿಂತ ಮೇಲ್ಪಟ್ಟ ಅರ್ಹರ ಸಂಖ್ಯೆ 47,81,000 ಇದ್ದು, ಅವರಲ್ಲಿ 18,66,000 ಜನ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಇದು ಶೇಕಡಾ 39 ರಷ್ಟಿದೆ" ಎಂದು ಭೂಷಣ್ ಅವರು ತಿಳಿಸಿದ್ದಾರೆ.

"ನಾವು ಮುನ್ನೆಚ್ಚರಿಕೆ ಡೋಸ್ ನೀಡಲು ಆರಂಭಿಸಿದ ಕೇವಲ 10 ದಿನಗಳಲ್ಲಿ ಶೇ. 63 ರಷ್ಟು ಆರೋಗ್ಯ ಸಿಬ್ಬಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಈ ಸಂಖ್ಯೆ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲರೂ ಬೂಸ್ಟರ್ ಡೋಸ್ ಪಡೆಯಲು ಜನರನ್ನು ಪ್ರೇರೇಪಿಸುವ ಅಗತ್ಯ ಇದೆ" ಎಂದು ಅವರು ಹೇಳಿದರು.

English summary
The Centre on Friday said that Covid vaccination, including precaution doses, for individuals having lab test proven coronavirus infection will be deferred by three months after recovery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X