ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಂಬೆ ಚಿತ್ರಗಳಿಗೆ ದುಬೈ ಹಣ!' ಪದ್ಮಾವತಿಗೆ ಸ್ವಾಮಿ ಛೀಮಾರಿ!

|
Google Oneindia Kannada News

ನವದೆಹಲಿ, ನವೆಂಬರ್ 29: "ಬಾಂಬೆ ಚಿತ್ರಗಳಿಗೆ ದುಬೈಯಿಂದ ಹಣಹರಿದುಬರುತ್ತದೆ" ಎಂದು ಪದ್ಮಾವತಿ ಚಿತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿದ್ದಾರೆ.

'ಪದ್ಮಾವತಿ'ಗೆ ಬೆಂಬಲವಾಗಿ 15 ನಿಮಿಷ ಚಿತ್ರೀಕರಣ ಸ್ಥಗಿತ'ಪದ್ಮಾವತಿ'ಗೆ ಬೆಂಬಲವಾಗಿ 15 ನಿಮಿಷ ಚಿತ್ರೀಕರಣ ಸ್ಥಗಿತ

"ಪದ್ಮಾವತಿ ಚಿತ್ರ ಒಬ್ಬ ಮಹಾನ್ ಮಹಿಳೆಯನ್ನು ಕೀಳಾಗಿ ಚಿತ್ರಿಸಿದೆ. ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಆದರ್ಶ ಮೆರೆದ ಆಕೆಯನ್ನು ಒಬ್ಬ ನೃತ್ಯಗಾರ್ತಿಯಷ್ಟೇ ಎಂಬಂತೆ ಚಿತ್ರಿಸಲಾಗಿದೆ. ಅಲ್ಲದೆ ಅಲ್ಲಾವುದ್ದಿನ್ ಖಿಲ್ಜಿ ಒಬ್ಬ ಕಟುಕ, ಅನಾಗರಿಕ. ಆದರೆ ಆತನನ್ನು ಈ ಚಿತ್ರದಲ್ಲಿ ಸಂಭಾವಿತ ಎಂಬಂತೆ ತೋರಿಸಲಾಗಿದೆ. ಇದರಲ್ಲಿ ಖಂಡಿತ ಯಾವುದೋ ಪ್ರಭಾವಿ ಶಕ್ತಿಯ ಕೈವಾಡವಿದೆ! ನಮ್ಮ ಬಾಂಬೆ ಸಿನಿಮಾಗಳಿಗೆ ದುಬೈಯಿಂದ ಹಣ ಹರಿದುಬರುತ್ತಿದೆ" ಎಂದು ಸ್ವಾಮಿ ಹೇಳಿದ್ದಾರೆ.

Bombay films are financed by Dubai: Subramanian Swamy on Padmavati

'ಬಾಂಬೆ ಚಿತ್ರಗಳು ಭಾರತೀಯರಿಂದ, ಭಾರತೀಯರಿಗಾಗಿ ನಿರ್ಮಾಣವಾಗುತ್ತಿದೆಯೇ ಎಂಬುದನ್ನು ನಾವು ಮೊದಲು ಪತ್ತೆಮಾಡಬೇಕಿದೆ' ಎಂಬ ಬಾಂಬ್ ಅನ್ನು ಸಹ ಅವರು ಸಿಡಿಸಿದ್ದಾರೆ!

ಪದ್ಮಾವತಿ ಚಿತ್ರಕ್ಕೆ ಯೋಗಿ ಆದಿತ್ಯನಾಥ್ ಕೂಡ ವಿರೋಧಪದ್ಮಾವತಿ ಚಿತ್ರಕ್ಕೆ ಯೋಗಿ ಆದಿತ್ಯನಾಥ್ ಕೂಡ ವಿರೋಧ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಯಿದ್ ಕಪೂರ್ ಅಭಿನಯಿಸಿರುವ ಹಿಂದಿಯ 'ಪದ್ಮಾವತಿ' ಚಿತ್ರದಲ್ಲಿ ರಾಜಪೂತರನ್ನು ಮತ್ತು ರಾಣಿ ಪದ್ಮಿನಿಯನ್ನು ಕೀಳಾಗಿ ಚಿತ್ರಿಸಿ, ಇತಿಹಾಸವನ್ನು ತಿರುಚಲಾಗಿದೆ ಎಂಬ ಹೇಳಿಕೆಯನ್ನು ಸಮರ್ಥಿಸಿ, ಸ್ವಾಮಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

English summary
Bharatiya Janata Party leader Subramanian Swamylaunched a scathing attack at the Hindi film industry and said that "Bombay" movies are being financed by Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X