ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ 'ಬಾಯ್ಸ್‌ ಲಾಕರ್ ರೂಂ' ಅಶ್ಲೀಲ ಚಾಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌

|
Google Oneindia Kannada News

ನವದೆಹಲಿ, ಮೇ 11: ಕೆಲವು ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಂನಲ್ಲಿ ಇರುವ 'ಬಾಯ್ಸ್‌ ಲಾಕರ್ ರೂಂ' ಗ್ರೂಪ್‌ನಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಸೇರಿದಂತೆ ಹಲವು ಬೇಡದ ವಿಷಯಗಳ ಕುರಿತ ಚರ್ಚೆ ನಡೆಯುತ್ತಿತ್ತು ಎಂದು ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

ಹುಡುಗಿಯರ ನಗ್ನ ಚಿತ್ರಗಳನ್ನು ಶೇರ್ ಮಾಡಿದ್ದರು, ಟ್ವಿಟ್ಟರ್‌ನಲ್ಲಿ ಬಾಯ್ಸ್‌ ಲಾಕರ್ ರೂಂ ಟ್ರೆಂಡ್ ಆಗಿತ್ತು, ಆದರೆ ಈ ಘಟನೆಗೆ ಟ್ವಿಸ್ಟ್‌ ಸಿಕ್ಕಿದೆ.

ಬಾಲಕಿಯರ ಮೇಲೆ ಅತ್ಯಾಚಾರ ಕುರಿತ ವಿದ್ಯಾರ್ಥಿಗಳ ಚಾಟಿಂಗ್ ಹಿಸ್ಟರಿ ಬಯಲು ಬಾಲಕಿಯರ ಮೇಲೆ ಅತ್ಯಾಚಾರ ಕುರಿತ ವಿದ್ಯಾರ್ಥಿಗಳ ಚಾಟಿಂಗ್ ಹಿಸ್ಟರಿ ಬಯಲು

ಹುಡುಗನ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಮೆಸೇಜ್ ಮಾಡಿದ್ದರೂ ಕೂಡ ಅದರಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಯುವ ಬಗ್ಗೆ ಮಾತನಾಡಿದ್ದಾಳೆ. ಹಾಗಾಗಿ ಇಲ್ಲಿ ಮಕಲಿ ಐಡಿ ಕ್ರಿಯೇಟ್ ಮಾಡಿದ್ದಷ್ಟೇ ತಪ್ಪು ಅಷ್ಟೇ ಹೊರತು ಅಶ್ಲೀಲತೆ ಏನೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೊದಲು ಅತ್ಯಾಚಾರದ ಸಂಭಾಷಣೆ ಆರಂಭವಾಗಿದ್ದು ಸ್ನ್ಯಾಪ್‌ಚಾಟ್‌ನಲ್ಲಿ

ಮೊದಲು ಅತ್ಯಾಚಾರದ ಸಂಭಾಷಣೆ ಆರಂಭವಾಗಿದ್ದು ಸ್ನ್ಯಾಪ್‌ಚಾಟ್‌ನಲ್ಲಿ

ಮೊದಲು ಅತ್ಯಾಚಾರದ ಸಂಭಾಷಣೆ ಆರಂಭವಾಗಿದ್ದು ಸ್ನ್ಯಾಪ್‌ಚಾಟ್‌ ಅಪ್ಲಿಕೇಷನ್‌ ಅಲ್ಲಿ, ಈ ಗ್ಯಾಂಗ್‌ರೇಪ್ ಬಗ್ಗೆ ಮೊದಲು ಮಾತು ಶುರುವಾಗಿದ್ದು ಬಾಯ್ಸ್ ಲಾಕರ್ ರೂಂನಲ್ಲಿ ಅಲ್ಲ , ಇದು ಒಂದು ಹುಡುಗಿ ಮಾಡಿ ಕೆಲಸ , ಹುಡುಗನ ಹೆಸರಿನಲ್ಲಿ ಇನ್ನೋರ್ವ ಹುಡುಗನಿಗೆ ಗ್ಯಾಂಗ್ ರೇಪ್ ಬಗ್ಗೆ ಮೆಸೇಜ್ ಕಳುಹಿಸಿದ್ದಾಳೆ.

ಸಿದ್ಧಾರ್ಥ್ ಹೆಸರಿನ ಅಕೌಂಟ್ ಕ್ರಿಯೇಟ್ ಮಾಡಿದ್ದ ಹುಡುಗಿ

ಸಿದ್ಧಾರ್ಥ್ ಹೆಸರಿನ ಅಕೌಂಟ್ ಕ್ರಿಯೇಟ್ ಮಾಡಿದ್ದ ಹುಡುಗಿ

ಓರ್ವ ಹುಡುಗಿ ಸಿದ್ಧಾರ್ಥ್ ಎಂಬ ಹೆಸರಿನ ಅಕೌಂಟ್ ಕ್ರಿಯೇಟ್ ಮಾಡಿ ಅದರಿಂದ ಮತ್ತೋರ್ವ ಹುಡುಗನಿಗೆ ಗ್ಯಾಂಗ್ ರೇಪ್ ಸಂಬಂಧಿಸಿದಂತೆ ಮೆಸೇಜ್ ಂಆಡಿದ್ದಾಳೆ. ಕಾರಣ ಆ ಹುಡುಗನ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಯಲು. ಇವರಿಬ್ಬರೂ ಬಾಯ್ಸ್ ಲಾಕರ್ ರೂಂ ಎಂಬ ಇನ್‌ಸ್ಟಾಗ್ರಾಂ ಗ್ರೂಪ್‌ಗೆ ಸೇರಿದವರಲ್ಲ.

ಈ ಸ್ಕ್ರೀನ್‌ಶಾಟ್ ಬಾಯ್ಸ್ ಲಾಕರ್‌ ರೂಂನಲ್ಲೂ ಶೇರ್ ಆಗಿತ್ತು

ಈ ಸ್ಕ್ರೀನ್‌ಶಾಟ್ ಬಾಯ್ಸ್ ಲಾಕರ್‌ ರೂಂನಲ್ಲೂ ಶೇರ್ ಆಗಿತ್ತು

ಆದರೆ ಇವರಿಬ್ಬರ ಸ್ನ್ಯಾಪ್ ಚಾಟ್ ಮೆಸೇಜ್‌ಗಳ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಶೇರ್ ಆಗಿತ್ತು. ಹಾಗೆಯೇ ಬಾಯ್ಸ್ ಲಾಕರ್ ರೂಂ ಗ್ರೂಪ್‌ನಲ್ಲೂ ಶೇರ್ ಆಗಿತ್ತು. ಅದನ್ನೇ ಇಟ್ಟುಕೊಂಡು ಗ್ರೂಪ್‌ನಲ್ಲಿರುವ ಹುಡುಗರು ಚಾಟ್ ಮಾಡಿಕೊಂಡಿದ್ದರು. ಅದು ಅಶ್ಲೀಲವಾಗಿ ಮಾರ್ಪಟ್ಟಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಹುಡುಗಿಯ ಉದ್ದೇಶ ಕೆಟ್ಟದಾಗಿರಲಿಲ್ಲ

ಹುಡುಗಿಯ ಉದ್ದೇಶ ಕೆಟ್ಟದಾಗಿರಲಿಲ್ಲ

ಮೊದಲು ಚಾಟ್ ಮಾಡಿದ ಹುಡುಗ-ಹುಡುಗಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ, ನಕಲಿ ಐಡಿಗಳನ್ನು ಸೃಷ್ಟಿಸುವುದು ಅಪರಾಧ, ಆದರೆ ಆ ಹುಡುಗಿಯ ಉದ್ದೇಶ ಕೆಟ್ಟದಾಗಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆದ್ದರಿಂದ ತಿಳಿವಳಿಕೆ ಹೇಳಿದ್ದೇವೆ. ಯಾವುದೇ ಕಂಪ್ಲೇಂಟ್ ಫೈಲ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

English summary
In its investigation into the 'Bois Locker Room' case, the Delhi Police have stumbled upon a conversation on Snapchat where a girl, posing as a male, suggested a "sexual assault plan" to a boy just to test his "values and character".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X