ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಾಯುನೆಲೆಯಲ್ಲಿ ಇಂದಿನಿಂದ ಬೋಯಿಂಗ್ 737 ವಿಮಾನ ನಿಷೇಧ

|
Google Oneindia Kannada News

ನವದೆಹಲಿ, ಮಾರ್ಚ್ 13: ಭಾರತದ ವಾಯುನೆಲೆಯಲ್ಲಿ ಇಂದಿನಿಂದ 737 ಮ್ಯಾಕ್ಸ್ 8 ವಿಮಾನ ಹಾರಾಟವನ್ನು ನಿಷೇಧಿಸಲಾಗುತ್ತಿದೆ.

ಇಥಿಯೋಪಿಯಾದಲ್ಲಿ 157 ಪ್ರಯಾಣಿಕರ ಧಾರುಣ ಸಾವಿಗೆ ಕಾರಣವಾಗಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನ ಪ್ರಕರಣದ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಈ ಮಾದರಿಯ ವಿಮಾನಗಳ ಹಾರಾಟಕ್ಕೆ ಬ್ರೇಕ್ ಹಾಕಿದೆ.

ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ

ಕಳೆದ ಶುಕ್ರವಾರ 422.42 ಇದ್ದ ಡಾಲರ್ ಇದ್ದ ಬೋಯಿಂಗ್ ಪ್ರತಿ ಷೇರಿನ ಬೆಲೆ ಸೋಮವಾರ ದಿಢೀರ್ ಕುಸಿತಕ್ಕೆ ಒಳಗಾಗಿ 371.40 ಡಾಲರ್‌ಗೆ ಇಳಿಕೆಯಾಗಿತ್ತು. ಬುಧವಾರ ಷೇರು ಬೆಲೆ 375 ಡಾಲರ್ ತಲುಪಿದೆ. ಬೋಯಿಂಗ್ ವಿಮಾನವನ್ನು ಹಲವು ರಾಷ್ಟ್ರಗಳು ತಾತ್ಕಾಲಿಕ ಸ್ಥಗಿತಗೊಳಿಸುವ ನಿರ್ಧಾರದಿಂದ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ.

Boeing 737 MAX 8 Aircraft Banned In Indian Airspace From 4 pm

ಬೋಯಿಂಗ್ 737 ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದು, ಇದೇ ಕಾರಣಕ್ಕೆ ಈ ಹಿಂದೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಸಿಂಗಾಪುರ, ಆಸ್ಟ್ರೇಲಿಯಾ, ಮಲೇಷ್ಯಾ, ಚೀನಾ ಮತ್ತು ಒಮನ್ ರಾಷ್ಟ್ರಗಳು ಈ ಮಾದರಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿವೆ. ಅಂತೆಯೇ ಇಥಿಯೋಪಿಯಾ ದುರಂತದ ಬೆನ್ನಲ್ಲೇ ಬೋಯಿಂಗ್ ಸಂಸ್ಥೆ ಈ ವಿಮಾನದ ತಾಂತ್ರಿಕ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದೆ.

ಸಂಜೆ 4 ಗಂಟೆಯಿಂದ ವಿಮಾನಗಳ ಹಾರಾಟ ಸ್ಥಗಿತಗೊಳ್ಳಳಿದೆ. ಬೋಯಿಂಗ್ ಸಂಸ್ಥೆ ಕೂಡ ಈ ವಿಮಾನ ಮಾದರಿಗೆ ತುರ್ತು ಸುಧಾರಣೆ ಮಾಡಲು ಆದೇಶ ನೀಡಿದೆ. ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಡಿಜಿಸಿಎ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟ ನಿಷೇಧಕ್ಕೆ ನಿರ್ದೇಶನ ನೀಡಿದೆ.

ಹೀಗಾಗಿ ಭಾರತದಲ್ಲಿನ ಎಲ್ಲ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ. ಈ ಪೈಕಿ ಸ್ಪೈಸ್ ಜೆಟ್ ಸಂಸ್ಥೆ ತನ್ನ 7 ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಹಾರಾಟವನ್ಮು ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದೆ.

ಜಗತ್ತಿನ ಅತಿ ದೊಡ್ಡ ವಿಮಾನ ನಿರ್ಮಾಣ ಸಂಸ್ಥೆಯಾಗಿರುವ ಬೋಯಿಂಗ್ 25 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ.

English summary
All Boeing 737 MAX 8 aircraft in India will be grounded by 4 pm today, an official of aviation watchdog DGCA has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X