ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬೋಗಿಗೆ ಶೀಘ್ರ ಬ್ಲ್ಯಾಕ್‌ಬಾಕ್ಸ್‌ ಉಪಕರಣ ಅಳವಡಿಕೆ

By Nayana
|
Google Oneindia Kannada News

ಲಖ್ನೌ, ಮೇ 13: ವಿಮಾನದಲ್ಲಿ ಅಳವಡಿಸಲಾಗುವ ಬ್ಲ್ಯಾಕ್‌ಬಾಕ್ಸ್‌ ಮಾದರಿಯ ಉಪಕರಣವನ್ನು ರೈಲಿನ ಬೋಗಿಗಳಲ್ಲೂ ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಈ ಸ್ಮಾರ್ಟ್‌ ಬೋಗಿಗಳನ್ನು ರೀಸರ್ಚ್ ಡಿಸೈನ್ಸ್‌ ಅಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್‌ ನ ಪರಿಶೀಲನೆಗಾಗಿ ರವಾನಿಸಿದೆ. ಈ ಬ್ಲಾಕ್‌ಬಾಕ್ಸ್‌ನಿಂದ ರೈಲು ಅಪಘಾತ ತಡೆಯಬಹುದಾಗಿದೆ.

ಜೂನ್ ಅಂತ್ಯಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಸ್ತರಣೆ ಪೂರ್ಣಜೂನ್ ಅಂತ್ಯಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಸ್ತರಣೆ ಪೂರ್ಣ

ರೈಲು ಸಾಗುವಾಗ ಹಳಿಗಳ ನಿಗಾ ಇಡುವುದು, ಎಂಜಿನ್ ಸದ್ದಿನಲ್ಲಿನ ವ್ಯತ್ಯಾಸ ಮತ್ತಿತರ ಅಂಶಗಳನ್ನು ಗುರುತಿಸಿ ಬ್ಲ್ಯಾಕ್‌ಬಾಕ್ಸ್‌ ಅಪಾಯದ ಮುನ್ಸೂಚನೆ ನೀಡುತ್ತದೆ. ಹಳಿಯಲ್ಲಿ ದೋಷವಿದ್ದರೆ ಅದನ್ನು ದುರಸ್ತಿಗೊಳಿಸಲು ಹಳಿ ನಿರ್ವಹಣಾ ತಂಡಕ್ಕೆ ಸೂಚನೆ ರವಾನಿಸುತ್ತದೆ.

Black box technology in railways soon

ಶಾರ್ಟ್‌ ಸರ್ಕ್ಯೂಟ್‌ ಆತಂಕವಿಲ್ಲ: ಬೋಗಿಗಳಲ್ಲಿನ ವೈರಿಂಗ್, ಕೇಬಲ್‌ಗಳು ಮತ್ತು ಕನೆಕ್ಟರ್‌ಗಳ ಕಾರ್ಯನಿರ್ವಹಣೆಯನ್ನೂ ಬ್ಲ್ಯಾಕ್‌ಬಾಕ್ಸ್‌ ಗಮನಿಸುತ್ತಿದೆ. ತಾಪಮಾನದಲ್ಲಿ ಸ್ವಲ್ಪ ಏರಿಕೆಯಾದರೂ, ಕೂಡಲೇ ಈ ಬಗ್ಗೆ ಮಾಹಿತಿ ರವಾನಿಸಿ, ದುರಸ್ತಿಗೊಳಿಸುವಂತೆ ಸೂಚಿಸುತ್ತದೆ. ಇದರಿಂದ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ತಪ್ಪುತ್ತದೆ.

ಬೋಗಿಗಳಲ್ಲಿ ಸ್ಮಾರ್ಟ್‌ ಸಿಸಿ ಕ್ಯಾಮರಾಗಳನ್ನು ಅಳವಡಸಸಲು ನಿರ್ಧರಿಸಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ರವಾನಿಸುವ ಜತೆಗೆ, ಇನ್ಫೋಟೇನ್ಮೆಂಟ್ ಸೌಲಭ್ಯವನ್ನೂ ಒದಗಿಸುತ್ತದೆ. ವೈಫೈ ಸೌಲಭ್ಯ ಕಲ್ಪಿಸಲು ಅನುಕೂಲ ಮಾಡಿಕೊಡುತ್ತದೆ.

English summary
Identifying fault in track, engine or any other technical issues with trains, black box technology will be soon adopted in Indian railways. The department has decided to install black box like which adopted in aviation, those will indicate errors in the system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X