ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.21ಕ್ಕೆ ಲಖಿಂಪುರಕ್ಕೆ ಭೇಟಿ: ಜ.31ರಂದು ‘ವಿರೋಧ್ ದಿವಸ್’-ಟಿಕಾಯತ್

|
Google Oneindia Kannada News

ನವದೆಹಲಿ ಜನವರಿ 16: ರೈತ ಪ್ರತಿಭಟನೆಗಳು ಸ್ಥಗಿತಗೊಂಡಿರಬೇಕು ಆದರೆ ಕೃಷಿ ಉತ್ಪನ್ನಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ನಿರ್ಣಯವಾಗುವವರೆಗೆ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಗಳ ಆಂದೋಲನ ಮುಂದುವರಿಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಹೇಳಿದೆ.

ಇಲ್ಲಿಯವರೆಗೆ ಕೇಂದ್ರವು ಎಂಎಸ್‌ಪಿ ಕುರಿತು ಸಮಿತಿಯನ್ನು ರಚಿಸಿಲ್ಲ ಅಥವಾ ಅದರ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ. ಲಖಿಂಪುರ ಖೇರಿ ಘಟನೆಯಲ್ಲಿ ಭಾಗಿಯಾಗಿರುವ ಆಶಿಸ್ ಮಿಶ್ರಾ ಅವರ ತಂದೆ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಕೇಂದ್ರ ಸರ್ಕಾರ ಅಧಿಕಾರದಿಂದ ತೆಗೆದುಹಾಕಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ನಾವು ಜನವರಿ 31 ರಂದು 'ವಿರೋಧ್ ದಿವಸ್' ಆಚರಿಸುತ್ತೇವೆ ಎಂದು ಬಿಕೆಯುನ ಯುಧ್ವೀರ್ ಸಿಂಗ್ ಹೇಳಿದ್ದಾರೆ.

ರೈತರಲ್ಲಿ ಒಡಕು ಮೂಡಿಸುವ ಪ್ರಧಾನಿ ಪ್ರಯತ್ನ ಯಶಸ್ವಿಯಾಗದು: ರಾಕೇಶ್ ಟಿಕಾಯತ್
ರೈತರ ಆಂದೋಲನವನ್ನು ಮುಂದೂಡುವ ಬಗ್ಗೆ ಸರ್ಕಾರಕ್ಕೆ ನೆನಪಿಸಿದ ಸಿಂಗ್, ನಮ್ಮ ಚಳವಳಿಯನ್ನು ಡಿಸೆಂಬರ್ 11 ರಂದು ಮುಂದೂಡಲಾಗಿದೆ. ಸರ್ಕಾರವು ನಮ್ಮ ಬೇಡಿಕೆಗಳಿಗೆ ಇನ್ನೂ ಸ್ಪಂದಿಸಿಲ್ಲ. ನಾವು ಜನವರಿ 31 ರಂದು ದೇಶದಾದ್ಯಂತ ಸರ್ಕಾರದ ಪ್ರತಿಕೃತಿಗಳನ್ನು ಸುಡುತ್ತೇವೆ. ಫೆಬ್ರವರಿ 1 ರಿಂದ ಉತ್ತರಪ್ರದೇಶದಲ್ಲಿ ಒಕ್ಕೂಟವು ಮತ್ತೆ ಆಂದೋಲನವನ್ನು ಪುನರಾರಂಭಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Bku Has Warned the Central Government on January 31 to Celebrate Its ‘Virodh Diwas’
ಜನವರಿ 21 ರಿಂದ 3-4 ದಿನಗಳ ಕಾಲ ಲಖಿಂಪುರ ಖೇರಿಯಲ್ಲಿ ಸಂತ್ರಸ್ತ ರೈತ ಕುಟುಂಬಗಳನ್ನು ಭೇಟಿ ಮಾಡಲಿದ್ದೇನೆ ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ನಾವು ಜನವರಿ 21 ರಿಂದ 3-4 ದಿನಗಳ ಕಾಲ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಭೇಟಿ ನೀಡುತ್ತೇವೆ. ಜೊತೆಗೆ ಸಂತ್ರಸ್ತ ರೈತರ ಕುಟುಂಬಗಳನ್ನು ಭೇಟಿ ಮಾಡುತ್ತೇವೆ. ನಮ್ಮ ಆಂದೋಲನದ ಮುಂದಿನ ಕ್ರಮದ ಬಗ್ಗೆ ನಾವು ಚರ್ಚಿಸಿ ಕಾರ್ಯತಂತ್ರವನ್ನು ರೂಪಿಸುತ್ತೇವೆ "ಎಂದು ಟಿಕಾಯತ್ ಹೇಳಿದ್ದಾರೆ.


ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಸರ್ಕಾರ
ದೇಶದ ಕೆಲ ಭಾಗಗಳಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19ರಂದು ಘೋಷಿಸಿದರು. ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು. ಆದರೆ ಅಂತಹ ಪವಿತ್ರವಾದ, ಸಂಪೂರ್ಣ ಶುದ್ಧವಾದ ರೈತರ ಅನುಕೂಲಕ್ಕಾಗಿ ನಾವು ಪ್ರಯತ್ನಿಸಿದರೂ ಅದನ್ನು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು.

Bku Has Warned the Central Government on January 31 to Celebrate Its ‘Virodh Diwas’
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19ರಂದು ಘೋಷಿಸಿದಂತೆ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನದಂದು (ನವೆಂಬರ್ 29) ಮಂಡನೆ ಮಾಡಲಾಯಿತು. ಅದರ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಸೂದೆಗೆ ತಮ್ಮ ಒಪ್ಪಿಗೆಯನ್ನು ನೀಡಿದರು. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಜತೆಗೆ ಇನ್ನಿತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಿತಿ ರಚನೆ ಮಾಡಲಾಗಿದೆ. ಇದರಲ್ಲಿ ರೈತರ ಪ್ರತಿನಿಧಿಗಳು ಇರುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ದೆಹಲಿ ಗಡಿಯಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ 26 ನವೆಂಬರ್ 2020 ರಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಹಿಂಪಡೆದರು.

v

English summary
The farmer protests must have come to a halt but the agitation by farmer unions against the central government will continue as long as there is a resolution on minimum support price (MSP) on farm produce, the Bharatiya Kisan Union (BKU) said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X