ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!

|
Google Oneindia Kannada News

Recommended Video

ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ ಭಾಗಿ | ನಡುಗುತ್ತಾರಾ ಮಮತಾ ಬ್ಯಾನರ್ಜಿ | Oneindia Kannada

ನವದೆಹಲಿ, ಜನವರಿ 22: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಮೂರು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 'ಮಿಶನ್ 22' ಟಾರ್ಗೆಟ್ ಹೊಂದಿರುವ ಬಿಜೆಪಿ, ನರೇಂದ್ರ ಮೋದಿ ಅವರ ಮೂರು ರ‍್ಯಾಲಿಗಳ ಮೂಲಕ ಜನರನ್ನು ಸೆಳೆವ ಯತ್ನದಲ್ಲಿದೆ.

ಇದೇ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಹಠ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ್ದು.

ಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯ ಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯ

ದೇಶಾದ್ಯಂತ ಒಟ್ಟು ನೂರರಷ್ಟು ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸಲಿದ್ದು, ಪಶ್ಚಿಮ ಬಂಗಾಳದಲ್ಲಿ ಮೂರು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ರ‍್ಯಾಲಿಯ ಮೂಲಕ ಬಂಗಾಳದಲ್ಲಿ ಮೋದಿ ಅಲೆ ಎಬ್ಬಿಸಿ, ಮಮತಾ ಬ್ಯಾನರ್ಜಿಗೆ ಪ್ರಧಾನಿ ನಡುಕ ಹುಟ್ಟಿಸುತ್ತಾರಾ ಎಂಬುದು ಲೋಕಸಭಾ ಚುನಾವಣೆಯ ಹೊತ್ತಲ್ಲಿ ತಿಳಿಯಲಿದೆ.

ಕೋಲ್ಕತ್ತಾದಲ್ಲಿ ರ‍್ಯಾಲಿ ಇಲ್ಲ!

ಕೋಲ್ಕತ್ತಾದಲ್ಲಿ ರ‍್ಯಾಲಿ ಇಲ್ಲ!

ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಸಿಲಿಗುರಿ, ಅಸಾನ್ಸೋಲ್ ಮತ್ತು ಬೊಂಗೌನ್ ನ ಠಾಕೂರ್ ನಗರದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಆದರೆ ರಾಜಧಾನಿ ಕೋಲ್ಕತ್ತಾದಲ್ಲಿ ಮೋದಿ ಯಾವುದೇ ರ‍್ಯಾಲಿ ನಡೆಸುತ್ತಿಲ್ಲ ಎಂಬುದು ಇನ್ನೊದು ಅಚ್ಚರಿಯ ವಿಚಾರ. ಫೆಬ್ರವರಿ 8 ರಂದು ಮೋದಿಯವರ ರ‍್ಯಾಲಿ ಕೋಲ್ಕತ್ತಾದ ಬ್ರಿಗೆಡ್ ಪರೇಡ್ ಮೈದಾನದಲ್ಲಿ ನಿಗದಿಯಾಗಿತ್ತು. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಅನ್ನು ಇಲ್ಲಿಳಿಯಲು ಅನುಮತಿ ನಿರಾಕರಿಸಿದ ಘಟನೆ ನಂತರ ಮೋದಿ ಅವರ ರ‍್ಯಾಲಿ ಯನ್ನೂ ರದ್ದು ಮಾಡಲಾಗಿದೆ.

ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!

ಯಾವಾಗ ರ‍್ಯಾಲಿ?

ಯಾವಾಗ ರ‍್ಯಾಲಿ?

ಜನವರಿ 28 ರಂದು ಬೊಂಗೌನ್ ನ ಠಾಕೂರ್ ನಗರದಲ್ಲಿ ಮತ್ತು ಫೆಬ್ರವರಿ 2 ರಂದು ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಮೋದಿ ರ‍್ಯಾಲಿ ನಡೆಸಲಿದ್ದಾರೆ. ಫೆಬ್ರವರಿ 8 ರಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ರ‍್ಯಾಲಿಯನ್ನು ಅಸಾನ್ಸೋಲ್ ನಲ್ಲಿ ಮೋದಿ ನಡೆಸಲಿದ್ದಾರೆ.

ಮಿಶನ್ 22

ಮಿಶನ್ 22

ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ 22 ನ್ನು ಗೆಲ್ಲುವ ಗುರಿಯನ್ನು ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಹೊಂದಿದೆ. ಆದರೆ 2009 ರಲ್ಲಿ 1 ಮತ್ತು 2014 ರಲ್ಲಿ 2 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈಗ ಏಕಾಏಕಿ 22 ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ? ಅದರಲ್ಲೂ ಮಮತಾ ಬ್ಯಾನರ್ಜಿ ಅವರನ್ನೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕೆಲವರು ಬಿಂಬಿಸುತ್ತಿರುವುದರಿಂದ ಈ ರಾಜ್ಯದ ಜನ ಬಿಜೆಪಿಗೆ ಒಲಿಯುತ್ತಾರಾ?

ಮಮತಾ ಜೊತೆ ಕೈಜೋಡಿಸಿರುವ ಬಿಜೆಪಿ ವಿರೋಧಿಗಳು

ಮಮತಾ ಜೊತೆ ಕೈಜೋಡಿಸಿರುವ ಬಿಜೆಪಿ ವಿರೋಧಿಗಳು

ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಎನ್ ಸಿಪಿ, ಜೆಡಿಎಸ್, ಎಎಪಿ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಕಳೆದ ವಾರ ಮಹಾಘಟಬಂಧನದ ಬೃಹತ್ ರ‍್ಯಾಲಿ ನಡೆಸಿದ್ದಾರೆ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವುದು ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ತಮ್ಮ ಉದ್ದೇಶ ಎಂದು ರಣಕಹಳೆಯನ್ನೂ ಮೊಳಗಿಸಿದ್ದಾರೆ.

English summary
Prime Minister Narendra Modi will hold three rallies in Bengal - one in Siliguri and one in Asansol - but there will be no rally in Kolkata, the state BJP said on Monday. The party is planning to hold 35 rallies in the state in preparation for their target list of winning 22 of the 42 Lok Sabha seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X